ನವದೆಹಲಿ:ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನವನ್ನು ದೆಹಲಿಯಲ್ಲಿ ಇದೇ 28ರಂದು ಆಚರಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ತವರುಮನೆ ಇಟಲಿಗೆ ಪ್ರಯಾಣ ಬೆಳೆಸಿದ್ದಾರೆ. ಇದಕ್ಕೆ ನಿಖರ ಕಾರಣವನ್ನು ಅವರು ಕೊಡಲಿಲ್ಲ.
ಆದರೆ ರಾಹುಲ್‌ ಗಾಂಧಿಯವರು ಪದೇ ಪದೇ ಈ ರೀತಿ ಇಟಲಿ ವಿದೇಶ ಪ್ರವಾಸ ಮಾಡುತ್ತಿರುವುದು ಖುದ್ದು ಕಾಂಗ್ರೆಸ್ಸಿಗರಿಗೇ ಹಲವು ಬಾರಿ ಮುಜುಗರ ಉಂಟು ಮಾಡಿದ್ದು ಇದೆ, ಇದು ಒಂದೆಡೆಯಾದರೆ ಇವರ ವಿರುದ್ಧ ಟ್ರೋಲ್‌ಗಳು ಸರ್ವೇ ಸಾಮಾನ್ಯವಾಗಿಬಿಟ್ಟಿದೆ.
ಅದಕ್ಕಾಗಿ ಜನರಿಗೆ ಮತ್ತು ಮಾಧ್ಯಮಗಳಿಗೆ ಕೈಮುಗಿದು ಬೇಡಿಕೊಂಡಿರುವ ಕಾಂಗ್ರೆಸ್​ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ, “ರಾಹುಲ್ ಗಾಂಧಿ ಅವರು ಇಟಲಿಗೆ ಹೋಗಿದ್ದು ನಿಜ. ಆದರೆ ಇದಕ್ಕೆ ಬೇರೆ ಏನೂ ವಿಷಯ ಕಟ್ಟಬೇಡಿ. ಅವರು ಸಣ್ಣದೊಂದು ವೈಯಕ್ತಿಕ ಪ್ರವಾಸದಲ್ಲಿದ್ದಾರೆ ಅಷ್ಟೇ. ಶೀಘ್ರದಲ್ಲೇ ಮರಳಲಿದ್ದಾರೆ. ಪ್ಲೀಸ್‌ ಈ ಬಗ್ಗೆ ಬಿಜೆಪಿ ಅಥವಾ ಇನ್ನಾವುದೇ ಪಕ್ಷದವರಾಗಲೀ, ಮಾಧ್ಯಮ ಸ್ನೇಹಿತರು ಅನಗತ್ಯ ವದಂತಿಗಳನ್ನು ಹರಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳ ಚುನಾವಣೆ ಜನವರಿ ಮಧ್ಯದ ವೇಳೆಗೆ ಘೋಷಣೆಯಾಗುವ ನಿರೀಕ್ಷೆಯಿದೆ. ಜನವರಿ 3ರಂದು ರಾಹುಲ್ ಪಂಜಾಬ್‌ನ ಮೋಗಾದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿದೆ. ಇದರ ನಡುವೆಯೇ ಅವರು ಇಟಲಿ ಪ್ರವಾಸ ಕೈಗೊಂಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದ್ದರೆ, ಸುರ್ಜೇವಾಲಾ ಅವರ ಇಂಥ ಮನವಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್‌ ಆಗುತ್ತಿದೆ.
ಭಗವದ್ಗೀತೆಗೆ ಮನಸೋತ ಮುಸ್ಲಿಂ ರಾಷ್ಟ್ರ: ಪಾಕಿಸ್ತಾನವಷ್ಟೇ ಅಲ್ಲ… ಅರಬ್‌ ದೇಶಗಳಲ್ಲಿ 15 ಕೋಟಿ ಪ್ರತಿ ಮಾರಾಟ!

ಬಡತನವೇ ಶಾಪವಾಗೋಯ್ತು ಮೇಡಂ, ವಯಸ್ಸಾದರೂ ಮದ್ವೆಯಾಗದೇ ವಿವಾಹಿತನ ಬಲೆಗೆ ಸಿಲುಕಿಬಿಟ್ಟೆ…

ತಿರುಪತಿಯ ಪುರೋಹಿತನ ಮನೆಯಲ್ಲಿ ಐಟಿ ರೇಡ್‌- 128 ಕೆ.ಜಿ ಚಿನ್ನ, 70 ಕೋಟಿ ರೂ ವಜ್ರ ವಶಕ್ಕೆ! ಅಸಲಿಯತ್ತು ಇಲ್ಲಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
