ಚೆನ್ನೈ:ತಮಿಳುನಾಡಿನ ಪ್ರವಾಸದಲ್ಲಿದ್ದ ಸಂಸದ ರಾಹುಲ್​ಗಾಂಧಿ ಇದಾಗಲೇ ಹಲವಾರು ವಿಡಿಯೋಗಳ ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ. ದಿನವೂ ಅವರು ಮಾಡಿರುವ ಭಾಷಣಗಳ ವಿಡಿಯೋ ಟ್ರೋಲ್​ ಆಗುತ್ತಲೇ ಇವೆ. ಈ ಬಾರಿ ತಮಿಳಿನ ಚಾನೆಲ್​ ಒಂದರಲ್ಲಿ ಬಿರಿಯಾನಿಗಾಗಿ ಖುದ್ದು ರಾಯತ ತಯಾರಿಸಿ, ಅದನ್ನು ಸವಿದಿದ್ದಾರೆ. ಇದರ ವಿಡಿಯೋ ಈಗ ವೈರಲ್​ ಆಗಿದೆ.
ತಮಿಳಿನ “ವಿಲೇಜ್ ಕುಕ್ಕಿಂಗ್” ಯುಟ್ಯೂಬ್​ ಚಾನೆಲ್​ನಲ್ಲಿ ಕಾಣಿಸಿಕೊಂಡಿರುವ ರಾಹುಲ್​, ಅಲ್ಲಿ ಅಣಬೆಯ ಬಿರಿಯಾನಿ ಸವಿದಿದ್ದಾರೆ. ಚಾಪೆಯ ಮೇಲೆ ಕುಳಿತು ಗ್ರಾಮಸ್ಥರ ಜತೆ ಚರ್ಚಿಸುತ್ತಾ, ಬಿರಿಯಾನಿ ಸವಿಯುತ್ತಿರುವ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.
BIG MOMENT | RAHUL GANDHI Join In Village Cooking | Village Cooking ChannelThank You Team Village Cooking for the excellent lunch! You are all such an amazing guys with noble heart. Truly an inspiration.Thank you@RahulGandhifor the lively moments.https://t.co/GbdRhp1Z6Y
— Jothimani (@jothims)January 29, 2021

ಬಿರಿಯಾನಿ ಸವಿಯುಂಡ ರಾಹುಲ್ ಗಾಂಧಿ ತಮಿಳಿನಲ್ಲಿ ‘ನಲ್ಲ ಇರಕು’ (ಇದು ಚೆನ್ನಾಗಿದೆ) ಎಂದು ಹೇಳಿರುವುದನ್ನು ವಿಡಿಯೋದಲ್ಲಿ ಕೇಳಬಹುದು. ಕಾಡಿನ ಮಧ್ಯೆ ಸೌದೆ ಒಲೆಯಲ್ಲಿ ಸಿದ್ಧವಾದ ಬಿರಿಯಾನಿಯನ್ನು ಬಾಳೆ ಎಲೆಯಲ್ಲಿ ಬಡಿಸಿಕೊಂಡು ಸವಿದರು.
ಸೌದೆ ಒಲೆಯಲ್ಲಿ ದೊಡ್ಡದಾದ ಬಾಣಲಿಯಲ್ಲಿ ತಯಾರಾದ ಈ ಬಿರಿಯಾನಿಯನ್ನು ಮೆಚ್ಚಿಕೊಂಡ ಅವರು, ಅದನ್ನು ಸಿದ್ಧಪಡಿಸುವ ಬಗೆಯನ್ನೂ ತಿಳಿದುಕೊಂಡರು. ರಾಹುಲ್ ಗಾಂಧಿ ಅವರ ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ತಮಿಳುನಾಡು ಪ್ರವಾಸದಲ್ಲಿದ್ದ ವೇಳೆ ಅವರು ಕೊಯಮತ್ತೂರು ಮತ್ತು ತಿರುಪ್ಪೂರಿಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಕೈಗಾರಿಕೆ ಹಾಗೂ ಕೃಷಿ ವಲಯದ ಅಭಿವೃದ್ಧಿ ಮತ್ತು ಕೇಂದ್ರ ಸರ್ಕಾರವು ಅಂಗೀಕರಿಸಿದ ಹೊಸ ಕೃಷಿ ಕಾನೂನುಗಳ ಬಗ್ಗೆ ಸಂವಹನ ನಡೆಸಿದ್ದರು.
ನನ್ನ ಆತ್ಮೀಯ ಸ್ನೇಹಿತನೊಬ್ಬ ಅಮೆರಿಕದಲ್ಲಿದ್ದಾನೆ. ಆತನಿಗೆ ನಾನು ಹೇಳಿ ನಿಮ್ಮ ಅಡುಗೆ ಶೋ ನಡೆಸಲು ವ್ಯವಸ್ಥೆ ಮಾಡಿಸುತ್ತೇನೆ. ಅಮೆರಿಕಕ್ಕೂ ಹೋಗಿ ಭಾರತೀಯ ಅಡುಗೆ ಮಾಡಿಬನ್ನಿ. ಹಾಗೇ, ಕರ್ನಾಟಕ, ಕೇರಳ ಸೇರಿದಂತೆ ಭಾರತದ ಬೇರೆ ರಾಜ್ಯಗಳಿಗೂ ಹೋಗಿ ಅಡುಗೆ ಮಾಡುವಂತೆ ಸಲಹೆ ನೀಡಿದರು.
ತಮಿಳುನಾಡಿನ ಕರೂರ್ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಭಾಗವಹಿಸಿ, ಇಂಗ್ಲಿಷ್​ನಲ್ಲಿ ಮಾಹಿತಿ ನೀಡಿದರು.
ತಮಿಳ್ನಾಡು ಇಂಡಿಯಾ ಆದ್ರೆ, ಇಂಡಿಯಾ ತಮಿಳ್ನಾಡು- ತಮಿಳ್ನಾಡು ಇಂಡಿಯಾ ಅಲ್ಲದಿದ್ರೆ ಇಂಡಿಯಾ ತಮಿಳ್ನಾಡು ಅಲ್ಲ…

ರಾಹುಲ್‌ಗಾಂಧಿ ಬಾಯಲ್ಲಿ ‘ನಿಕ್ಕರ್‌ವಾಲಾ’… ಟ್ರಾನ್ಸ್‌ಲೇಟರ್‌ ಬಾಯಲ್ಲಿ ‘ಲಿಕ್ಕರ್‌ವಾಲಾ’ ಆದಾಗ…

VIDEO: ಯೋಧರ ಬದಲು ರೈತರು, ಕಾರ್ಮಿಕರನ್ನು ಗಡಿ ಪ್ರದೇಶಕ್ಕೆ ಕಳುಹಿಸಿ ಎಂದ ರಾಹುಲ್‌ ಗಾಂಧಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 14 =
Remember me
