ಚೆನ್ನೈ:ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ತಮಿಳುನಾಡಿಗೆ ಭೇಟಿಕೊಟ್ಟಿದ್ದು, ಅವರು ಮಾತನಾಡಿರುವ ಹಲವಾರು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ.
ಇದೇ 25ರವರೆಗೆ ರಾಹುಲ್‌ ಗಾಂಧಿ ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಾಗಲೇ ಅವರು ಮಾತನಾಡಿರುವ ವಿಡಿಯೋದ ಕೆಲವು ತುಣುಕುಗಳು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ‌ಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.
ರಾಹುಲ್‌ಗಾಂಧಿ ಅವರು ವಿವಿಧ ಸ್ಥಳಗಳಲ್ಲಿ ಮಾತನಾಡಿರುವ ವಿಡಿಯೋಗಳನ್ನು ಚಿಕ್ಕ ಚಿಕ್ಕ ತುಣುಕುಗಳ ರೂಪದಲ್ಲಿ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಹೋದ ಕಡೆಗಳೆಲ್ಲಲ್ಲ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ಮಾಡಿರುವ ರಾಹುಲ್‌ಗಾಂಧಿಯವರು, ತಮಿಳುನಾಡಿನ ಮೇಲೆ ತಮಗಿರುವ ಪ್ರೀತಿಯನ್ನು ಬಣ್ಣಿಸಿದ್ದಾರೆ.
ಅದರಲ್ಲಿ ಒಂದು ವಿಡಿಯೋ ಹೀಗಿದೆ ಕೇಳಿ:
ತಮಿಳುನಾಡಿನಲ್ಲಿ ರಾಹುಲ್‌ಗಾಂಧಿ ಭಾಷಣ- ತಮಿಳುನಾಡು ಎಂದರೆ ಇಂಡಿಯಾ, ಇಂಡಿಯಾ ಎಂದರೆ ತಮಿಳುನಾಡು..pic.twitter.com/EsGNU28GxV
— Vijayavani (@VVani4U)January 24, 2021

ಇದರಲ್ಲಿ ರಾಹುಲ್‌ಗಾಂಧಿ ಹೇಳಿದ್ದೇನೆಂದರೆ ತಮಿಳುನಾಡು ಎಂದರೆ ಇಂಡಿಯಾ, ಇಂಡಿಯಾ ಎಂದರೆ ತಮಿಳುನಾಡು. ತಮಿಳುನಾಡು ಇಂಡಿಯಾ ಅಲ್ಲದಿದ್ದರೆ, ಇಂಡಿಯಾ ತಮಿಳುನಾಡು ಅಲ್ಲ. ತಮಿಳುನಾಡು ಇಂಡಿಯಾದಲ್ಲಿ ಇದೆ. ಆದರೆ ತಮಿಳುನಾಡು ಇಂಡಿಯಾ ಅಲ್ಲ ಎಂದು ಮೋದಿಯವರು ಹೇಳಿದ್ದಾರೆ ಎಂದು ರಾಹುಲ್‌ಗಾಂಧಿ ಹೇಳಿದರು.
ಇದನ್ನು ಅಲ್ಲಿಯೇ ಇದ್ದ ಕಾಂಗ್ರೆಸ್‌ ಮುಖಂಡ ತಮಿಳಿನಲ್ಲಿ ಟ್ರಾನ್ಸ್‌ಲೇಟ್‌ ಮಾಡಿ ಹೇಳಿದರು. ಜನರು ಜೋರಾಗಿ ಚಪ್ಪಾಳೆ ತಟ್ಟಿದರು. ಈ ವಿಡಿಯೋ ಇದೀಗ ಸಾಕಷ್ಟು ವೈರಲ್‌ ಆಗಿದ್ದು, ಈ ವಿಡಿಯೋ ಕುರಿತಂತೆ ಹಲವಾರು ಕಮೆಂಟ್‌ಗಳು ಓಡಾಡುತ್ತಿವೆ.ಕೊನೆಗೆ ತಮಿಳುನಾಡು ಎಲ್ಲಿ ಇದೆ ಎಂದು ಫೈನಲ್‌ ಆಯ್ತು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಶ್ರೀಕೃಷ್ಣ ಪರಮಾತ್ಮನ ಸನ್ನಿಧಿಗಾಗಿ ಆರನೇ ಮಹಡಿಯಿಂದ ಜಿಗಿದ ರಷ್ಯನ್‌ ಮಹಿಳೆ!

ಗಂಡ ಹತ್ತಿರವೂ ಬರಲ್ಲ… ಕಾರಣವನ್ನೂ ಹೇಳಲ್ಲ… ಸತ್ತೇ ಹೋಗೋಣ ಅನ್ನಿಸುತ್ತಿದೆ ಮೇಡಂ…

ನೇತಾಜಿಯನ್ನು ಕೊಂದದ್ದು ಯಾರು- ಏಕೆ ಎಂದು ಈ ಸಂಸದ ಏನು ಹೇಳಿದ್ದಾರೆ ಕೇಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
