ನವದೆಹಲಿ:ಕರ್ಮ ಯಾರನ್ನೂ ಬಿಡುವುದಿಲ್ಲ. ಕರ್ಮ ಎಂದರೆ ಅವರೇ ಮಾಡಿರುವ ಕ್ರಿಯೆಗಳ ಪುಸ್ತಕ ಎಂದು ಸಂಸದ ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಹೇಳಿದ್ದಾರೆ.ಅವರು ಹೀಗೆ ಹೇಳಲು ಕಾರಣ, ರಫೇಲ್‌ ಯುದ್ಧ ವಿಮಾನ ಖರೀದಿಯ ವಿಷಯಕ್ಕಾಗಿ. ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ, 1.1 ಮಿಲಿಯನ್ ಯುರೋಗಳನ್ನು ವಿಮಾನ ತಯಾರಕರಿಂದ ‘ಮಧ್ಯವರ್ತಿ’ ಗೆ ಪಾವತಿಸಲಾಗಿದೆ ಎಂದು ಫ್ರೆಂಚ್ ಮಾಧ್ಯಮವೊಂದು ಉಲ್ಲೇಖಿಸಿದೆ. ಇದನ್ನು ಮುಂದು ಮಾಡಿಕೊಂಡ ರಾಹುಲ್​ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಯಾರೊಬ್ಬರೂ ಅವರ ಕರ್ಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ರಫೇಲ್​ ಯುದ್ಧ ವಿಮಾನಕ್ಕೆ ಸಂಬಂಧಿಸಿದಂತೆ ಬಹಳ ವಿವಾದಗಳು ಹುಟ್ಟಿಕೊಂಡು ನಂತರ ಕಾಂಗ್ರೆಸ್​ಗೆ ಹಿನ್ನೆಡೆಯಾಗಿತ್ತು. ಇದೀಗ ಮತ್ತೆ ಫ್ರೆಂಚ್​ ಮಾಧ್ಯಮ ಈ ಯುದ್ಧ ವಿಮಾನಗಳ ವಿರುದ್ಧ ಬರೆದಿರುವ ಹಿನ್ನೆಲೆಯಲ್ಲಿ ರಾಹುಲ್​ ಗಾಂಧಿ ಈ ಮಾತನ್ನು ಟ್ವೀಟ್​ ಮೂಲಕ ಹೇಳಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಮಾಧ್ಯಮದಲ್ಲಿ ಉಲ್ಲೇಖವಾಗಿರುವ ಈ ವರದಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು ಮತ್ತು ಒಪ್ಪಂದದ ಬಗ್ಗೆ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Karma = The ledger of one's actions.
Nobody escapes it.#Rafale
— Rahul Gandhi (@RahulGandhi)April 6, 2021

100 rs prize to all Congress IT cell coolies if Shri Rahul Ji can write “Karma” correctly in Hindi . 111 rs prize if he can speak the world correct way in Hindi .
— Smarty (@Smarty_in)April 6, 2021

ಆದರೆ ರಾಹುಲ್​ ಗಾಂಧಿಯವರು ಏನೇ ಮಾತನಾಡಿದರೂ ಅದು ಟ್ರೋಲ್​ ಆಗುವುದು ಮಾಮೂಲಾಗಿಬಿಟ್ಟಿದೆ. ರಾಹುಲ್​ ಅವರ ಕೇಂದ್ರದ ವಿರುದ್ಧವೇನೋ ವಾಗ್ದಾಳಿ ನಡೆಸಿದ್ದಾರೆ. ಅದರೆ ಇವರ ಈ ಕರ್ಮದ ಟ್ವೀಟ್​ ಭಾರಿ ಟ್ರೋಲ್​ ಆಗುತ್ತಿದೆ. ನಿಮ್ಮ ಕರ್ಮದ ಬಗ್ಗೆ ಮಾತನಾಡಿ, ಕಾಂಗ್ರೆಸ್​ನ ಕರ್ಮದ ಬಗ್ಗೆ ಹೇಳಿ ಎಂದೆಲ್ಲಾ ಹಲವರು ಕಮೆಂಟ್​ನಲ್ಲಿ ಉಲ್ಲೇಖ ಮಾಡಿದ್ದಾರೆ.
ಒಬ್ಬ ಸ್ಮಾರ್ಟಿ ಎಂಬ ಯುವತಿ, ಇವರ ಟ್ವೀಟ್​ಗೆ ರಿಪ್ಲೈ ಮಾಡಿದ್ದು, ರಾಹುಲ್​ಗಾಂಧಿಜೀ ಕರ್ಮ ಎಂಬ ಶಬ್ದವನ್ನು ಸರಿಯಾಗಿ ಹಿಂದಿಯಲ್ಲಿ ಹೇಳಿದರೆ ಅವರಿಗೆ ಕಾಂಗ್ರೆಸ್​ನ ಐಟಿ ಸೆಲ್​ನವರು 100 ರೂಪಾಯಿ ಪ್ರೈಜ್​ ಕೊಡಬೇಕು. ಒಂದು ವೇಳೆ ಅವರು ಹಿಂದಿಯ ಮೂಲ ಸ್ವರೂಪದಲ್ಲಿಯೇ ಇನ್ನೂ ಸ್ಪಷ್ಟವಾಗಿ ಉಚ್ಚರಿಸಿದರೆ 111 ರೂಪಾಯಿ ಕೊಡಬೇಕು ಎಂದು ಬರೆದಿದ್ದಾರೆ. ರಾಹುಲ್​ ಗಾಂಧಿಯವರ ಮೂಲ ಟ್ವೀಟ್​ಗಿಂತ ಈಗ ಇದೇ ಭಾರಿ ವೈರಲ್​ ಆಗುತ್ತಿದ್ದು, ಇದಕ್ಕೆ ಹಲವಾರು ಕಮೆಂಟ್​ಗಳು ಬರತೊಡಗಿವೆ.
ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಹ್ವಾನ- ಎಸ್​ಎಸ್​ಎಲ್​ಸಿ ಆದವರಿಗೂ ಅವಕಾಶ

ಮೂರನೇ ಅತಿಹೆಚ್ಚು ಶತಕೋಟ್ಯಧೀಶ್ವರರ ದೇಶವಾಗಿ ಹೊಮ್ಮಿದ ಭಾರತ- ಯಾರ ಸಂಪತ್ತು ಎಷ್ಟಿದೆ ಗೊತ್ತಾ?

ಚೆಕ್​ಬೌನ್ಸ್​ ಪ್ರಕರಣ: ಖ್ಯಾತ ನಟಿ ರಾಧಿಕಾ ದಂಪತಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ

₹26 ಸಾವಿರ ಮಾಸ್ಕ್​ ಧರಿಸಿ ಸ್ಪೆಷಲ್​ ಮೆಸೇಜ್​ ನೀಡಿದ್ರು ಕರೀನಾ… ಮಾಸ್ಕ್​ ಸೋಲ್ಡ್​ ಔಟ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − three =
Remember me
