ಚೆನ್ನೈ:ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ, ಸಂಸದ ರಾಹುಲ್‌ ಗಾಂಧಿ ಈಗಾಗಲೇ ಆಡಿರುವ ಹಲವು ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಾಸ್ಪದ ಎಂಬಂತೆ ವೈರಲ್‌ ಆಗುತ್ತಿವೆ. ಅದರಲ್ಲಿಯೂ ಚೆನ್ನೈ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿಯವರ ವಿಡಿಯೋ ತುಣುಕುಗಳಂತೂ ಎಷ್ಟರಮಟ್ಟಿಗೆ ಜನಪ್ರಿಯವಾಗಿವೆ ಎಂದರೆ ಮಾತು ಕೇಳುವ ಮೊದಲೇ ಕಮೆಂಟ್‌ಗಳು ಶುರುವಾಗುತ್ತವೆ.
ಈಗ ಅವರು ಆಡಿರುವ ಮಾತು ಮಾತ್ರ ಹಾಸ್ಯದ ಬದಲಾಗಿ ಹಲವರನ್ನು ಕೆರಳಿಸಿವೆ. ಅದೇನೆಂದರೆ ಚೀನಾದ ಗಡಿಗೆ ಕಾರ್ಮಿಕರನ್ನು, ರೈತರನ್ನು ಹಾಗೂ ಇತರ ಕೆಲಸಗಾರರನ್ನು ನಿಯೋಜನೆ ಮಾಡಿದರೆ ಭಾರತೀಯ ಸೈನಿಕರ ಅಗತ್ಯವೇ ಚೀನಾ ಗಡಿಗೆ ಬೀಳಲ್ಲ ಎಂದು ಹೇಳಿದ್ದಾರೆ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿಯಾಗಿರುವ ರಾಹುಲ್‌ ಗಾಂಧಿ.
Congress is still using Rahul Gandhi for campaign …now they should have the guts to digest such speeches of his as well 👇pic.twitter.com/jbzbUJr4hx
— Sambit Patra (@sambitswaraj)January 24, 2021

ಇವರು ಆಡಿರುವ ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರಿ ಸದ್ದು ಮಾಡುತ್ತಿದೆ. ನೆಟ್ಟಿಗರು ಇದನ್ನು ಹಾಸ್ಯದ ರೂಪದಲ್ಲಿ ತೆಗೆದುಕೊಂಡು ವೈರಲ್‌ ಮಾಡುತ್ತಿದ್ದರೆ, ಇನ್ನು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಹುಲ್‌ ಗಾಂಧಿಯವರ ಈ ಮಾತಿಗೆ ಬಿಜೆಪಿ ತೀವ್ರವಾಗಿ ಕೆಂಡಾಮಂಡಲವಾಗಿದೆ. ಈ ರೀತಿಯ ಮಾತನಾಡುವ ಮೂಲಕ ರಾಹುಲ್‌ ಗಾಂಧಿ ಭಾರತೀಯ ಯೋಧರನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥವರನ್ನು ಕಾಂಗ್ರೆಸ್ ಹೇಗೆ ಸಹಿಸಿಕೊಂಡಿದೆ? ಯಾರನ್ನೋ ಟೀಕಿಸುವ ಭರದಲ್ಲಿ ಹುಚ್ಚುಹುಚ್ಚಾಗಿ ಮಾತನಾಡುವುದು ಸರಿಯಲ್ಲ ಎಂದು ಕೆಲವರು ಹೇಳಿದ್ದರೆ, ಈ ಪ್ರಧಾನಿ ಅಭ್ಯರ್ಥಿಗೆ ತಾವು ಏನು ಮಾತನಾಡುತ್ತಿದ್ದೇವೆ ಎಂದು ಮೈಮೇಲೆ ಪರಿಜ್ಞಾನ ಇದೆಯೇ ಎಂದು ಪ್ರಶ್ನಿಸಿದ್ದಾರೆ.
"If you use India's Labourers, Farmers and Workers, you don't need the Army, Navy & Air Force standing at the border. China will not have the guts to come inside."
It is a shame that@RahulGandhihas belittled the bravery and sacrifices of Our Armed Forces.#WhoIsRahulGandhipic.twitter.com/o16uy7oG7A
— C T Ravi 🇮🇳 ಸಿ ಟಿ ರವಿ (@CTRavi_BJP)January 24, 2021

ಕಾಂಗ್ರೆಸ್‌ ಪಕ್ಷದ ಪರವಾಗಿ ಇನ್ನೂ ರಾಹುಲ್‌ ಗಾಂಧಿಯವರನ್ನೇ ಕಳುಹಿಸುವ ಧೈರ್ಯ ಕಾಂಗ್ರೆಸ್‌ಗೆ ಇದೆಯೇ ಎಂದು ಬಿಜೆಪಿ ಮುಖಂಡ ಸಂಬಿತ್‌ ಪಾತ್ರ ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ. ಈ ರೀತಿ ಮಾತನಾಡುವ ಮೂಲಕ ಭಾರತೀಯ ಯೋಧರ ತ್ಯಾಗ, ಬಲಿದಾನಕ್ಕೆ ರಾಹುಲ್‌ ಗಾಂಧಿ ಅಪಮಾನ ಮಾಡಿದ್ದಾರೆ ಎಂದು ಸಿ.ಟಿ.ರವಿ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನೆಟ್ಟಿಗರು ಕೂಡ ಸಾಕಷ್ಟು ರೀತಿಯಲ್ಲಿ ರಾಹುಲ್‌ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಂತಿ ಮಾತುಕತೆ ನಡುವೆಯೇ ಚೀನಾದಿಂದ ಕುತಂತ್ರ ಬುದ್ಧಿ- ಗಡಿಯಲ್ಲಿ ಸಂಘರ್ಷ: ಹಲವರಿಗೆ ಗಾಯ

ತಮಿಳ್ನಾಡು ಇಂಡಿಯಾ ಆದ್ರೆ, ಇಂಡಿಯಾ ತಮಿಳ್ನಾಡು- ತಮಿಳ್ನಾಡು ಇಂಡಿಯಾ ಅಲ್ಲದಿದ್ರೆ ಇಂಡಿಯಾ ತಮಿಳ್ನಾಡು ಅಲ್ಲ…

ಪ್ರಧಾನಿಗೆ ದೇಶದ ಬಗ್ಗೆ ಕಾಳಜಿ ಇಲ್ಲ ಎಂದು ಅಮೆರಿಕದಿಂದ ರಾಹುಲ್​ ಗಾಂಧಿ ಟ್ವೀಟ್​!

ಕಾಂಗ್ರೆಸ್‌ಗೆ ಬಿಗ್‌ ಶಾಕ್‌! ಚೀನಾ ಜತೆ ಗುಟ್ಟುಗುಟ್ಟು ಒಪ್ಪಂದ ಸುಪ್ರೀಂಕೋರ್ಟ್‌ಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + thirteen =
Remember me
