ಭುವನೇಶ್ವರ:ಸರಕು ಸಾಗಣೆ ರೈಲೊಂದು ಹಳಿ ತಪ್ಪಿದ ಪರಿಣಾಮ ಒಂಬತ್ತು ಬೋಗಿಗಳು ನದಿಗೆ ಬಿದ್ದಿರುವ ಭಯಾನಕ ಘಟನೆ ಒಡಿಶಾ ಸಮೀಪ ನಡೆದಿದೆ.
ಆಯಂಗುಲ್-ಟಾಲ್ಚೆರ್ ರೈಲ್ವೆ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ. ಇಂದು ಬೆಳಗಿನ ಜಾವ ಈ ಅನಾಹುತ ನಡೆದಿದೆ. ಫಿರೋಜ್ ಪುರ್‌ನಿಂದ ಖುದ್ರಾಗೆ ತೆರಳುತ್ತಿದ್ದ ಸರಕು ಸಾಗಣೆ ರೈಲು ಇದಾಗಿದೆ. ನಂದಿರಾ ಸೇತುವೆ ಬಳಿ ಹಳಿ ತಪ್ಪಿದ್ದರಿಂದ ಈ ಅಪಘಾತ ಸಂಭವಿಸಿದೆ.
ಗೋಧಿಯನ್ನು ಹೊತ್ತೊಯ್ಯುತ್ತಿದ್ದ ರೈಲು ಹಳಿ ತಪ್ಪಿದೆ. ಇನ್ನು ಎಂಜಿನ್​ ಟ್ರ್ಯಾಕ್​ ಮೇಲೆ ಇರುವುದರಿಂದ ರೈಲು ಚಾಲಕ ಮತ್ತು ಇತರೆ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ. ಒಂಬತ್ತು ಬೋಗಿಗಳು ನದಿಗೆ ಬಿದ್ದಿದ್ದು, ಘಟನೆಯಲ್ಲಿ ರೈಲಿನ ಚಾಲಕ, ಇತರ ಸಿಬ್ಬಂದಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ರೈಲು ಹಳಿತಪ್ಪಿದ ಘಟನೆ ನಡೆದ ನಂತರ ಈ ಮಾರ್ಗದಲ್ಲಿ ಸಂಚರಿಸುವ 12 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಭಾರೀ ಮಳೆ ಸುರಿಯುತ್ತಿದ್ದು, ಈ ಕಾರಣದಿಂದ ಅಪಘಾತ ಸಂಭವಿಸಿದೆ, ಕಳೆದ ಎರಡು ದಿನಗಳಿಂದ ಟಾಲ್ಚೆರ್ ಪ್ರದೇಶದಲ್ಲಿ ದಾಖಲೆಯ 394 ಮಿಲಿ ಮೀಟರ್ ಮಳೆಯಾಗಿತ್ತು.

ಅವರು ಕೊಟ್ಟ ನೀರು ಕುಡಿದೆ… ಎಚ್ಚರವಾದಾಗ ವಿಡಿಯೋ ತೋರಿಸಿದರು- ರೇಪ್‌ ಕೇಸ್‌ನಲ್ಲಿ ಸಂಸದ: ಎಫ್‌ಐಆರ್‌

ಹತ್ತು ದಿನಗಳಲ್ಲಿ ಈ 13 ಚಿತ್ರ ನೋಡಿದರೆ ನಿಮಗೆ ಸಿಗುತ್ತೆ 96 ಸಾವಿರ ರೂ! ಧೈರ್ಯ ಇದೆಯಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 6 =
Remember me
