ನವದೆಹಲಿ: ದೇಶದ ಹಲೆವೆಡೆ ಮಳೆಯ ಆರ್ಭಟ ಜೋರಾಗಿದೆ. ಇದು ಎಷ್ಟರಮಟ್ಟಿಗೆ ಎಂದರೆ ಭಾರತದಲ್ಲಿ 121 ವರ್ಷಗಳಲ್ಲಿ ಇದು ಎರಡನೆಯ ಬಾರಿ ಮಹಾಮಳೆ ಎಂದು ದಾಖಲೆ ಸೃಷ್ಟಿಸಿದೆ. ಈ ದಾಖಲೆಯಾಗಿರುವುದು ಮೇ ತಿಂಗಳಿನಲ್ಲಿ. ಈ ಕುರಿತು ಭಾರತೀಯ ಹವಾಮಾನ ಇಲಾಖೆ ತನ್ನ ಮಾಸಿಕ ವರದಿಯಲ್ಲಿ ವಿವರಿಸಿದೆ.
2021ರ ಮೇ ತಿಂಗಳಿನಲ್ಲಿ ದೇಶಾದ್ಯಂತ 107.9 ಮಿ.ಮೀ ಮಳೆ ದಾಖಲಾಗಿದ್ದು, ದೀರ್ಘಾವಧಿ ಸರಾಸರಿ ಮಳೆಗಿಂತ 74% ಹೆಚ್ಚು ಮಳೆ ದಾಖಲಾಗಿದೆ. 1990ರಲ್ಲಿ 110.7 ಮಿ.ಮೀ ಮಳೆ ದಾಖಲಾಗಿದ್ದು, 1901ರ ನಂತರ ಎರಡನೇ ಬಾರಿ ಮೇ ತಿಂಗಳಿನಲ್ಲಿ ಅತಿ ಹೆಚ್ಚು ದಾಖಲಾಗಿದೆ ಎಂದು ಇಲಾಖೆ ವಿವರಣೆ ನೀಡಿದೆ.
ಇದಕ್ಕೆ ಕಾರಣ, ಒಂದರ ಮೇಲೊಂದರಂತೆ ಬಂದು ಅಪ್ಪಳಿಸಿರುವ ಚಂಡಮಾರುತ, ಅರಬ್ಬೀ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಮೇ ತಿಂಗಳಿನಲ್ಲಿ ಒಂದರ ನಂತರ ಒಂದು ಕಾಣಿಸಿಕೊಂಡ ತೌಕ್ತೆ ಹಾಗೂ ಯಾಸ್ ಚಂಡಮಾರುತಗಳು ಇದಕ್ಕೆ ಕಾರಣ ಎಂದು ಅದು ಹೇಳಿದೆ. ಅದರ ಜತೆಗೆ, ಮೇ ತಿಂಗಳಿನಲ್ಲಿ ಭಾರತದಲ್ಲಿ ಸರಾಸರಿ 34.18 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. 1901ರ ನಂತರ ಇಷ್ಟು ಕಡಿಮೆ ಪ್ರಮಾಣದ ತಾಪಮಾನ ದಾಖಲಾಗಿರುವುದು ಇದು ನಾಲ್ಕನೇ ಬಾರಿ ಎಂದು ಇಲಾಖೆ ಹೇಳಿದೆ.
1917ರ ಮೇ ತಿಂಗಳಿನಲ್ಲಿ 32.68 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದನ್ನು ಅತ್ಯಂತ ಕಡಿಮೆ ತಾಪಮಾನ ಎನ್ನಲಾಗಿತ್ತು. ಇದಾದ ಮೇಲೆ 1977ರಲ್ಲಿ 33.84 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು ಎಂದು ಅದು ಮಾಹಿತಿ ನೀಡಿದೆ.
ಲಸಿಕೆ ಹಾಕಿಸಿಕೊಂಡ ಸರ್ಟಿಫಿಕೇಟ್‌ನಲ್ಲಿ ಡಿಟೇಲ್ಸ್‌ ತಪ್ಪಾಗಿದೆಯೆ? ಸರಿ ಮಾಡುವುದು ಬಲು ಸುಲಭ

ಶೂಟಿಂಗ್‌ ಇಲ್ಲ, ಉದ್ಯೋಗವೂ ಇಲ್ಲ ಎನ್ನುತ್ತಲೇ ಎಫ್‌ಬಿ ಲೈವ್‌ನಲ್ಲಿ ಆತ್ಮಹತ್ಯೆಗೆ ನಟನ ಯತ್ನ

ಅವಳ ಜತೆ ದೈಹಿಕ ಸಂಪರ್ಕವೇ ಆಗಿಲ್ಲ, ಮಗು ನನ್ನದ್ಹೇಗಾಗುತ್ತೆ ಎಂದ ಸಂಸದೆ ಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 3 =
Remember me
