ಮುಂಬೈ:ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲುಪಾಲಾಗಿ ಈಗ ಜಾಮೀನಿನ ಮೇಲೆ ಹೊರಗೆ ಬಂದಿರುವ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಮತ್ತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಪೋರ್ನ್‌ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣದ ಅಕ್ರಮ ವರ್ಗಾವಣೆ ಕೇಸ್‌ನಲ್ಲಿ ಇವರ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
2019ರಲ್ಲಿ ಕುಂದ್ರಾ ಆರ್ಮ್ಸ್ ಪ್ರೈಮ್ ಮೀಡಿಯಾ ಲಿಮಿಟೆಡ್ ಎಂಬ ಕಂಪೆನಿ ಶುರು ಮಾಡಿದ್ದರು, ಇದರ ಜತೆಗೆ ಹಾಟ್‌ಶಾಟ್ಸ್ ಎಂದು ಆ್ಯಪ್‌ ಅಭಿವೃದ್ಧಿಪಡಿಸಿದದರು, ಈ ಆ್ಯಪ್‌ ಅನ್ನು ಇಂಗ್ಲೆಂಡ್‌ ಮೂಲದ ಕಂಪೆನಿಯಾಗಿರುವ ಕೆನ್ರಿನ್‌ಗೆ ಮಾರಾಟ ಮಾಡಲಾಯಿತು. ಆದರೆ ಅಚ್ಚರಿಯ ವಿಷಯ ಎಂದರೆ ಈ ಕಂಪೆನಿಯ ಸಿಇಒ ಪ್ರದೀಪ್ ಬಕ್ಷಿ ರಾಜ್ ಕುಂದ್ರಾ ಅವರ ಸೋದರ ಮಾವ ಎಂದು ಇಡಿ ನಡೆಸಿದ ವಿಚಾರಣೆಯಿಂದ ತಿಳಿದು ಬಂದಿದೆ.
ಹಾಟ್‌ಶಾಟ್ಸ್ ಆ್ಯಪ್‌ ನಿರ್ವಹಣೆಗಾಗಿ, ಕುಂದ್ರಾ ತಮ್ಮ ವಿಯಾನ್ ಇಂಡಸ್ಟ್ರೀಸ್ ಕೆನ್ರಿನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 13 ಬ್ಯಾಂಕ್ ಖಾತೆಗಳೊಂದಿಗೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದಾರೆ. ಈ ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಈಗ ಕುಂದ್ರಾ ಸಿಕ್ಕಿಬಿದ್ದಿದ್ದಾರೆ. ಏಕೆಂದರೆ ಅಸಲಿಗೆ ಹಾಟ್‌ಶಾಟ್ಸ್ ಅಪ್ಲಿಕೇಶನ್ ಪೋರ್ನ್ ಚಲನಚಿತ್ರಗಳಿಗೆ ವೇದಿಕೆಯಾಗಿದ್ದು, ಅಕ್ರಮವಾಗಿ ಭಾರತದಲ್ಲಿ ನಿರ್ಮಿಸಲಾಗಿದೆ ಮತ್ತು ಚಂದಾದಾರಿಕೆ ನೀಡಲು ಹಾಟ್‌ಶಾಟ್ಸ್ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿರುವುದು ಬೆಳಕಿಗೆ ಬಂದಿದೆ. ಆದರೆ ಚಂದಾದಾರರ ಮೂಲಕ ಗಳಿಸಿದ ಹಣದ ಮೊತ್ತವನ್ನು ಕುಂದ್ರಾ ಅವರ ಕಂಪನಿ ವಿಯಾನ್ ಇಂಡಸ್ಟ್ರೀಸ್ ಹೆಸರಿನಲ್ಲಿ ವಹಿವಾಟಿಗೆ ಬಳಸಲಾಗಿತ್ತು.
ಇವರನ್ನು ಜಾರಿ ನಿರ್ದೇಶನಲಾಯದ ಅಧಿಕಾರಿಗಳು ಈಗ ಮತ್ತೆ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಇನ್ನೆಷ್ಟು ಅಕ್ರಮಗಳು ಹೊರಬರಲಿವೆಯೇ ಎಂದು ಕಾದುನೋಡಬೇಕಿದೆ.
ಪ್ರಿಯಕರನ ಲೈಂಗಿಕ ಆಸೆ ಈಡೇರಿಸಲು ಮಗಳನ್ನೇ ಆತನ ಬಳಿ ಬಿಟ್ಟ ಪಾಪಿ ತಾಯಿ!
ಮದುವೆ ಗಿಫ್ಟ್​ ತೆರೆದ ವಧು-ವರರು ಆಸ್ಪತ್ರೆಗೆ ದಾಖಲು! ಅಕ್ಕನ ಬಾಯ್​ಫ್ರೆಂಡ್​ ತಂದಿಟ್ಟ ಮಹಾ ಸಂಕಟ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
