ಮುಂಬೈ:ಉದ್ಯಮಿ ರಾಜ್​ಕುಂದ್ರಾ ಬ್ಲೂ ಫಿಲ್ಮ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ನಟಿ ಶಿಲ್ಪಾ ಶೆಟ್ಟಿಯ ಮನೆಗೆ ಧಾವಿಸಿರುವ ಮುಂಬೈ ಕ್ರೈಂಬ್ರ್ಯಾಂಚ್​ ಪೊಲೀಸರು ಅವರ ವಿಚಾರಣೆ ನಡೆಸುತ್ತಾರೆ ಎನ್ನಲಾಗಿದೆ. ಪತಿಯ ಈ ಉದ್ಯೋಗದ ಬಗ್ಗೆ ಅವರಿಗೆ ತಿಳಿದಿತ್ತಾ ಎನ್ನುವ ವಿಚಾರವನ್ನು ತನಿಖೆಯ ನಂತರ ಪೊಲೀಸರು ಬಹಿರಂಗಪಡಿಸಬೇಕಿದೆ.
ಈ ನಡುವೆಯೇ ಕುಂದ್ರಾ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ಮುಂಬೈ ಕೋರ್ಟ್ ಜುಲೈ 27ರ ವರೆಗೆ ವಿಸ್ತರಿಸಿದೆ. ನೀಲಿ ಚಿತ್ರ ತಯಾರಿಕೆಗೆ ಕುರಿತಂತೆ ಪೊಲೀಸರು ತನಿಖೆ ಮುಂದುವರೆಸಿದ್ದು, ಹಲವಾರು ಬ್ಯಾಂಕ್​ಗಳಲ್ಲಿ ಕುಂದ್ರಾ ಹಣದ ಹೊಳೆ ಹರಿಸಿರುವುದನ್ನು ಗಮನಿಸಿದ್ದಾರೆ.
ಬ್ಲೂ ಫಿಲ್ಮ್ಂ ಮಾಡಿ ಅದನ್ನು ವಿದೇಶಕ್ಕೆ ರವಾನೆ ಮಾಡುತ್ತಿದ್ದ ಕುಂದ್ರಾ ಆಫ್ರಿಕಾದ ಬ್ಯಾಂಕ್​ನಲ್ಲಿಯೂ ಹಣ ಇಟ್ಟಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಇದರ ತನಿಖೆಗೆ ಮುಂದಾಗಿದ್ದಾರೆ. ಜತೆಗೆ ನಟಿ ಶಿಲ್ಪಾ ಶೆಟ್ಟಿ ಅವರ ವಿಚಾರಣೆ ಕೈಗೊಳ್ಳುವ ಸಾಧ್ಯತೆ ಇದೆ.
ಕುಂದ್ರಾ ಅವರನ್ನು ಜುಲೈ 19 ರ ರಾತ್ರಿ ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ. ಇವರ ಪೊಲೀಸ್ ಕಸ್ಟಡಿ ಅವಧಿ ಇಂದು (ಶುಕ್ರವಾರ) ಅಂತ್ಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಮತ್ತೆ ತಮ್ಮ ವಶಕ್ಕೆ ಪಡೆದಿದ್ದಾರೆ.
ಬ್ಲೂ ಫಿಲ್ಮ್‌ ನೇರಪ್ರಸಾರಕ್ಕೆ ಪ್ಲ್ಯಾನ್‌- ಪೊಲೀಸರಿಗೆ 25 ಲಕ್ಷ ರೂ. ಲಂಚ? ಇ- ಮೇಲ್‌ನಿಂದ ರಹಸ್ಯ ಸ್ಫೋಟ!

ಬೇರೆಯವರಿಗೆ ಹೃದಯಕೊಟ್ಟಾಕೆಗೆ ಅನ್ಯಾಯ ಮಾಡಲಾರೆ ಎಂದು ಪತ್ನಿಯನ್ನು ಪ್ರಿಯಕರನಿಂದ ಒಪ್ಪಿಸಿದ ಪತಿ!

ನವಜೋತ್​ ಸಿಂಗ್​ ಸಿಧು ಪದಗ್ರಹಣ ಸಮಾರಂಭಕ್ಕೆ ತೆರಳುತ್ತಿದ್ದ ಮೂವರು ಕಾಂಗ್ರೆಸ್​ ಕಾರ್ಯಕರ್ತರ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + fourteen =
Remember me
