ಮುಂಬೈ:ಬ್ಲೂಫಿಲ್ಮಂ ಹಗರಣದಲ್ಲಿ ಸಿಲುಕಿರುವ ಉದ್ಯಮಿ, ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಕುರಿತಂತೆ ದಿನದಿಂದ ದಿನಕ್ಕೆ ಹಲವು ಮಾಹಿತಿಗಳು ಪೊಲೀಸರಿಗೆ ಲಭ್ಯವಾಗುತ್ತಾ ಹೋಗುತ್ತಿದೆ. ರಾಜ್‌ ಕುಂದ್ರಾ ಜತೆ ಸಂಪರ್ಕದಲ್ಲಿ ಇರುವ ಎಲ್ಲರನ್ನೂ ಕರೆದು ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಈ ನಡುವೆಯೇ ಈ ನೀಲಿಚಿತ್ರ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಆರೋಪ ಹೊತ್ತ ನಟಿ, ಮಾಡೆಲ್‌ ಶೆರ್ಲಿನ್‌ ಚೋಪ್ರಾರನ್ನು ಕರೆಸಿಕೊಂಡಿರುವ ಪೊಲೀಸರು ಕೆಲ ದಿನಗಳಿಂದ ಅವರ ವಿಚಾರಣೆ ಮಾಡುತ್ತಿದ್ದಾರೆ. ಇದೀಗ ನಟಿ ಭಯಾನಕ ಎನ್ನುವಂಥ ಕೆಲವು ವಿಚಾರಗಳನ್ನು ಪೊಲೀಸರ ಮುಂದೆ ಇಟ್ಟಿದ್ದಾರೆ.
ರಾಜ್ ಕುಂದ್ರಾ ನನ್ನಿಂದ ಬೋಲ್ಡ್‌ ಎನಿಸುವ ಕೆಲವು ದೃಶ್ಯಗಳನ್ನು ಮಾಡಿಸಿಕೊಂಡಿದ್ದಾರೆ. ‘ರಾಜ್ ಕುಂದ್ರಾ ಅವರು ತಮ್ಮ ಕಂಪನಿಯಾಗಿರುವ ಆರ್ಮ್ಸ್‌ಪ್ರೈಮ್ ಜೊತೆಗಿನ ಒಪ್ಪಂದದ ಬಗ್ಗೆ ನನ್ನ ಬಳಿ ಮಾತನಾಡುತ್ತಾ ಕೆಲವೊಂದು ದೃಶ್ಯಗಳನ್ನು ಮಾಡಲು ಹೇಳಿದ್ದರು. ನಾನು ಒಪ್ಪಂದ ಮಾಡಿಕೊಂಡಿದ್ದೆ. ಅದರ ಅಂಗವಾಗಿ ಕಾಮಪ್ರಚೋದಕ, ಅರೆ ನಗ್ನ ಮತ್ತು ನಗ್ನ ವಿಷಯವನ್ನು ಚಿತ್ರೀಕರಿಸುತ್ತಿದ್ದರು.
ಅವುಗಳನ್ನು ತಮ್ಮ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ’ಈ ವಿಡಿಯೋಗಳನ್ನು ತಾವು ಪತ್ನಿ ಶಿಲ್ಪಾ ಶೆಟ್ಟಿಗೂ ತೋರಿಸುವುದಾಗಿ ಕುಂದ್ರಾ ನನ್ನ ಬಳಿ ಹೇಳಿಕೊಂಡಿದ್ದಾರೆ. ಇದನ್ನು ಶಿಲ್ಪಾ ಕೂಡ ಇಷ್ಟಪಡುತ್ತಿದ್ದರಂತೆ. ಇದನ್ನು ಕೇಳಿ ನನಗೆ ಸಂತೋಷವಾಗುತ್ತಿತ್ತು. ಶಿಲ್ಪಾ ಶೆಟ್ಟಿ ಮತ್ತು ಆಕೆಯ ಸಹೋದರಿ ಶಮಿತಾ ಶೆಟ್ಟಿ ಕೂಡ ಈ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಸಂಭಾಷಣೆಯ ಸಮಯದಲ್ಲಿ ರಾಜ್ ಕುಂದ್ರಾ ಹೇಳಿದ್ದರು’ ಎಂದು ಪೊಲೀಸರಿಗೆ ಶೆರ್ಲಿನ್‌ ವಿವರಿಸಿದ್ದಾರೆ.
ಆದರೆ ಕೆಲವು ವಿಡಿಯೋಗೆ ನನಗೆ ಸರಿಯಾದ ಸಂಭಾವನೆ ಸಿಕ್ಕಿರಲಿಲ್ಲ. ಆದ್ದರಿಂದ ನಾನು ಒಪ್ಪಂದ ಮುರಿಯುವುದಾಗಿ ಹೇಳಿದೆ. ಆದರೆ ರಾಜ್ ಕುಂದ್ರಾ ಅದನ್ನು ನಿರಾಕರಿಸಿದರು. ಅನೇಕ ಸಲ ಅವರು ನನ್ನನ್ನು ದೈಹಿಕವಾಗಿ ಬಳಸಿಕೊಳ್ಳಲು ನೋಡಿದ್ದರು. ಶಿಲ್ಪಾ ಜತೆ ನನ್ನ ಸಂಬಂಧ ಚೆನ್ನಾಗಿಲ್ಲ ಎಂದು ಹೇಳಿ ನನ್ನನ್ನು ಬಳಸಿಕೊಳ್ಳಲು ಮುಂದಾಗಿದ್ದರು. ಆದರೆ ನಾನು ಅದನ್ನು ನಿರಾಕರಿಸಿದ್ದೆ. ಇವೆಲ್ಲಾ ಕಾರಣಗಳಿಂದ ನಾನು ಒಪ್ಪಂದ ಮುರಿಯಲು ನೋಡಿದರೂ ಅವರು ಕೇಳಲಿಲ್ಲ. ನಂತರ ವಿಡಿಯೋಗಳನ್ನು ಪೋರ್ನ್‌ ವೆಬ್‌ಸೈಟ್‌ಗಳಿಗೆ ಹಾಕಬಹುದು ಎಂಬ ಭಯದಿಂದ ನಾನು ಸುಮ್ಮನಾದೆ’ ಎಂದಿದ್ದಾರೆ ಶೆರ್ಲಿನ್‌.
ಒಪ್ಪಂದವಿಲ್ಲದೆ ಮಾಡಿದ ಈ ಮೂರು ವಿಡಿಯೋಗಳಿಗೆ ರಾಜ್ ಕುಂದ್ರಾ ತನ್ನ ಹಣವನ್ನು ಇನ್ನೂ ನೀಡಿಲ್ಲ. ಆಗ ನಾನೇ ಶಿಲ್ಪಾ ಶೆಟ್ಟಿಗೆ ಹಣ ನೀಡಲು ಮನವಿ ಮಾಡಿಕೊಂಡಿದ್ದೆ. ಈಗ ವಿವಾದಕ್ಕೆ ಒಳಗಾಗಿರುವ ಪೋರ್ನ್‌ ಆ್ಯಪ್‌ ಹಾಟ್‌ಶಾಟ್‌ಗಳಿಗಾಗಿ ವೀಡಿಯೊಗಳನ್ನು ಮಾಡಲು ರಾಜ್ ಕುಂದ್ರಾ ಆಫರ್ ನೀಡಿದ್ದರೂ ತನಗೆ ಹಲವಾರು ಬಾರಿ ಆಫರ್ ನೀಡಿದ್ದರೂ ನಾನು ಅದಕ್ಕೆ ಕೆಲಸ ಮಾಡಲಿಲ್ಲ ಎಂದು ಪೊಲೀಸರಿಗೆ ವಿವರಿಸಿದ್ದಾರೆ ಶೆರ್ಲಿನ್‌, ವಿಚಾರಣೆ ಮುಂದುವರೆದಿದೆ.
ಬ್ಲೂಫಿಲ್ಮ್ಂ ಕೇಸ್‌ನಲ್ಲಿ ಅಪ್ಪ ಜೈಲುಪಾಲು- ಅಮ್ಮನ ಕಣ್ಣೀರು: ಇನ್‌ಸ್ಟಾಗ್ರಾಂನಲ್ಲಿ ಮಗನ ಪೋಸ್ಟ್‌

ಕುಂದ್ರಾರ ಆದಾಯ ಮೂಲ ಯಾವ್ದು? ಅಂಥದ್ದೇನು ಕಂಡು ಅವ್ರನ್ನ ಮದ್ವೆಯಾಗಿದ್ರಿ ಎಂದಾಗ ಶಿಲ್ಪಾ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
