ಭರತಪುರ (ರಾಜಸ್ಥಾನ):ಹುಡುಗಿಯೇ ಸಿಗುತ್ತಿಲ್ಲ ಎಂದು ಅನೇಕ ವರ್ಷ ನೊಂದು ಬೆಂದುಹೋಗಿದ್ದ ಯುವಕನೊಬ್ಬ ಕೊನೆಗೆ ಮೂರು ಲಕ್ಷ ರೂಪಾಯಿಯನ್ನು ಕೊಟ್ಟು ಹುಡುಗಿಯೊಬ್ಬಳನ್ನು ವಿವಾಹವಾದರೆ, ಮದುವೆಯಾಗಿ 13 ದಿನಕ್ಕೆ ಆಕೆ ಪರಾರಿಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಭರತಪುರ ಜಿಲ್ಲೆಯ ಬಯಾನಾ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ಮದರ್ ಗ್ರಾಮದ ನಾರಾಯಣ ಸಿಂಗ್ ಗುರ್ಜರ್ ಎಂಬಾತ ಈಗ ಹಣವನ್ನೂ ಕಳೆದುಕೊಂಡು, ಪತ್ನಿಯನ್ನೂ ಕಳೆದುಕೊಂಡು ಗೋಳೋ ಎನ್ನುತ್ತಿದ್ದು ಪತ್ನಿಯನ್ನು ಹುಡುಕಿಕೊಡಿ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ.
ನಾರಾಯಣ ಸಿಂಗ್​ಗೆ ಹುಡುಗಿಯೇ ಸಿಕ್ಕಿರಲಿಲ್ಲ. ನಂತರ ಅದೇ ಗ್ರಾಮದ ಹುಡುಗಿಯೊಬ್ಬಳನ್ನು ನೋಡಿ ಮದುವೆಯಾಗುವ ಇಚ್ಛೆ ಆಯ್ತು. ನಂತರ ಆ ಯುವತಿಯ ತಂದೆಗೆ ಮೂರು ಲಕ್ಷ ರೂಪಾಯಿ ಹಣವನ್ನು ನೀಡಿ ಆಕೆಯನ್ನು ಮದುವೆಯಾದ.
ಯುವತಿಯ ತಂದೆ ಮೂರು ಲಕ್ಷ ಪಡೆದು ಮಗಳನ್ನು ಮದುವೆಯನ್ನೇನೋ ಮಾಡಿಕೊಟ್ಟರು. ಆದರೆ ಮಗಳು ಮದುವೆಗೆ ಒಪ್ಪಿದ್ದಾಳೋ ಇಲ್ಲವೋ ಕೇಳಲೇಇಲ್ಲ.ತಾನು ಇಷ್ಟಪಟ್ಟ ಹುಡುಗಿ ಸಿಕ್ಕಳು ಎನ್ನುವ ಖುಷಿಯಲ್ಲಿದ್ದ ಯುವಕ ನಾರಾಯಣ ಮದುಮಗಳ ಜತೆ ಕನಸು ಕಾಣಲು ಶುರುಮಾಡಿದ. ಮದುವೆಯಾದ ದಿನದಿಂದಲೂ ಒಂದೊಂದು ನೆಪ ಹೇಳಿ ಆತನಿಂದ ದೂರವಿದ್ದ ಮದುಮಗಳು ಕೊನೆಗೂ 13ನೇ ದಿನ ಮದುಮಗನ ಜತೆ ಸೇರಲು ಒಪ್ಪಿದಳು. ಆ ದಿನಕ್ಕಾಗಿ ಹವಣಿಸುತ್ತಿದ್ದ ಮದುಮಗ ನಾರಾಯಣ ಮನೆಯೆಲ್ಲಾ ಹುಡುಕಾಡಿದರೂ ಹೆಂಡತಿಯೇ ಕಾಣಿಸಲಿಲ್ಲ.
ನಂತರ ಪೊಲೀಸ್​ ಠಾಣೆಗೆ ದೂರು ದಾಖಲಾದಾಗಲೇ ಗೊತ್ತಾಗಿದ್ದು, ಆತನ ಪತ್ನಿ ಬೇರೆ ಯುವಕನ ಜತೆ ಎಸ್ಕೇಪ್​ ಆಗಿದ್ದಾಳೆ ಎಂದು! ಪತ್ನಿ ಸುನಿತಾಳನ್ನು ವಾಪಸ್​ ಕರೆತನ್ನಿ ಎಂದು ಮಾವನ ಮನೆಯ ದುಂಬಾಲು ಬಿದ್ದಿದ್ದಾನೆ ಈ ಮದುಮಗ.
ತಾಳಿ ಕಟ್ಟಿಸಿಕೊಳ್ಳಲು ಒಪ್ಪದ ಬಾಲಕಿಯ ಕತ್ತನ್ನೇ ಸೀಳಿ ಭೀಕರವಾಗಿ ಕೊಂದ ಪಾಪಿ ಯುವಕ!

ಸಿಡಿ ಕೇಸ್​ನಲ್ಲಿ ಸಿಕ್ಕಾಕೊಂಡಿರೋ ಆಂಟಿ ನನ್ನನ್ನು ಪ್ರೀತಿಸ್ತೇನೆ ಅಂತ ದುಂಬಾಲು ಬಿದ್ದಿದ್ದಾಳೆ- ಹೇಗೆ ತಪ್ಪಿಸಿಕೊಳ್ಳಲಿ?

ಗಂಡನ ಮನೆಯಲ್ಲಿ ಹಿಂಸೆ- ಹೊಂದಿಕೊಂಡು ಹೋಗು ಎನ್ನುವ ತಾಯಿ… ಪ್ಲೀಸ್​ ನನಗೆ ದಾರಿ ತೋರಿ…

ವಿಷವನ್ನೇನಾದ್ರೂ ಟೆಸ್ಟ್​ ಮಾಡೋಕೆ ಆಗತ್ತೇನ್ರಿ? ಅವಕಾಶ ಕೊಟ್ರೆ ಮುಗೀತು ಅಲ್ಲಿಗೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three + three =
Remember me
