ಮುಂಬೈ:42 ವರ್ಷದ ನಟಿ ರಾಖಿ ಸಾವಂತ್‌ ರಿತೇಶ್​ ಎಂಬುವವರನ್ನು ಮದುವೆಯಾಗಿರುವ ಸುದ್ದಿ ಸಕತ್​ ವೈರಲ್​ ಆಗಿತ್ತು. ಆದರೆ ಇದು ನಿಜವೇ, ಸುಳ್ಳೇ ಎಂದು ಅನೇಕ ಅಭಿಮಾನಿಗಳಲ್ಲಿ ಸಂದೇಹ ಶುರುವಾಗಿತ್ತು. ಏಕೆಂದರೆ ರಿತೇಶ್​ ಜತೆ ರಾಖಿಯ ಮದುವೆಯಾಗಿದೆ ಎಂದು ಹೇಳಲಾಗುತ್ತಿದ್ದರೂ ಆ ರಿತೇಶ್‌ ಯಾರು ಎಂಬುದು ಯಾರಿಗೂ ತಿಳಿದಿರಲಿಲ್ಲ.
ನಂತರ ಈ ಸುದ್ದಿಗೆ ಸ್ಪಷ್ಟನೆ ನೀಡಿದ್ದ ರಾಖಿ ಸಾವಂತ್‌ ಸಹೋದರ ರಾಕೇಶ್‌, ತಮ್ಮ ಸಹೋದರಿ ಮದುವೆಯಾಗಿರುವುದು ನಿಜ ಎಂದು ಹೇಳಿದ್ದರು. ರಿತೇಶ್‌ ಬಗ್ಗೆ ಸಹಜವಾಗಿಯೇ ನನಗೆ ಕೆಲವು ಅನುಮಾನಗಳಿದ್ದವು. ಆದರೆ, ಅವರನ್ನು ಭೇಟಿ ಆದ ಬಳಿಕ ಅನುಮಾನಗಳೆಲ್ಲ ಮರೆಯಾದವು. ಅವರನ್ನು ಮದುವೆ ಆಗಿದ್ದು ರಾಖಿಯ ಅತ್ಯುತ್ತಮ ನಿರ್ಧಾರ ಎಂದು ನನಗೆ ಅನಿಸುತ್ತದೆ ಎಂದು ಸಹೋದರ ರಾಕೇಶ್​ ಹೇಳಿದ್ದರು.

ನಂತರ ಬಿಗ್​ಬಾಸ್​ ಮನೆ ಹೊಕ್ಕಿದ್ದ ರಾಖಿ ಸಾವಂತ ತಮ್ಮ ಖಾಸಗಿ ಜೀವನದ ಹಲವು ವಿಚಾರಗಳನ್ನ ಹಂಚಿಕೊಂಡಿದ್ದರು. ಕಿರಿಕಿರಿ, ಜಗಳದಿಂದ ಮನರಂಜನೆ ಕಳೆದುಕೊಂಡಿದ್ದ ಬಿಗ್​ಬಾಸ್​ ಮನೆಯೊಳಕ್ಕೆ ಜೀವಂತಿಕೆ ತುಂಬಿದ್ದರು ರಾಖಿ.
ಇದೀಗ ಅವರು ಬಿಗ್‍ಬಾಸ್ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ತಮ್ಮ ಗುಟ್ಟುಗುಟ್ಟಾಗಿರುವ ಮದುವೆಯ ಬಗ್ಗೆ ವಿಚಾರ ಹಂಚಿಕೊಂಡಿರುವ ನಟಿ, ತಾನು ರಿತೇಶ್​ನನ್ನು ಮದುವೆಯಾಗಿರುವುದು ನಿಜ. ಆದರೆ ಆತನಿಗೆ ಮೊದಲೇ ಮದುವೆಯಾಗಿ ಮಕ್ಕಳಿದ್ದ ವಿಷಯ ನನಗೆ ತಿಳಿದಿರಲಿಲ್ಲ. ಒಂದು ವೇಳೆ ನನಗೆ ಇದು ಮೊದಲೇ ತಿಳಿದಿದ್ದರೆ ನಾನು ಆತನ ಸಂಸಾರವನ್ನು ಒಡೆಯುತ್ತಿರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಬಿಗ್‍ಬಾಸ್ ಮನೆಯಲ್ಲಿಯೂ ಖಾಸಗಿ ಜೀವನದ ಬಗ್ಗೆ ಹಂಚಿಕೊಂಡಿದ್ದರೂ ಮದುವೆ ವಿಷಯ ತಿಳಿಸಿರಲಿಲ್ಲ. ಇದಕ್ಕೆ ಕಾರಣ ಹೇಳೀರುವ ರಾಖಿ, ಕೆಲವು ಕಾರಣಗಳಿಂದ ಮದುವೆಯ ವಿಷಯ ಬಹಿರಂಗ ಮಾಡಿರಲಿಲ್ಲ. ರಿತೇಶ್​ನನ್ನು ತುಂಬಾ ಪ್ರೀತಿಸಿ, ಇಷ್ಟಪಟ್ಟು ಮದುವೆ ಮಾಡಿಕೊಂಡೆ. ಆದರೆ ಆತನಿಗೆ ಮದುವೆಯಾಗಿರುವುದು ತಿಳಿದು, ತುಂಬಾ ಬೇಸರವಾಯಿತು. ಆತನೊಂದು ಬಾಳುವ ಅದೃಷ್ಟ ನನಗಿಲ್ಲ ಎಂದು ಹೇಳುತ್ತಾ ಕಣ್ಣೀರು ಸುರಿಸಿದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ


ಏನು ಬೇಕಾದ್ರೂ ಕೊಡ್ತೀನಿ, ಮಜಾ ಮಾಡೋಣ ಬಾ ಎಂದ ಸರ್ಕಾರಿ ಆಸ್ಪತ್ರೆ ನೌಕರ- ದೂರು ದಾಖಲು

ತಾಳಿ ಕಟ್ಟುವ ಮೊದಲು ಬಾಲಕಿಗೆ ಜೀವದಾನ- ಮದುಮಗನಿಂದ ನಡೆಯಿತು ಒಂದು ಅಪೂರ್ವ ಕಾರ್ಯ

ಅಂತ್ಯಸಂಸ್ಕಾರಕ್ಕೆ ಪುತ್ರನೇ ಬೇಕೆ? ಅಪ್ಪನ ಶವ ಹೆಗಲಮೇಲೆ ಹೊತ್ತರು- ಚಿತೆಗೆ ಕೊಳ್ಳಿ ಇಟ್ಟ ಪುತ್ರಿಯರು

ಪತಿಗೆ ಗೊತ್ತಿಲ್ಲದಂತೆ ಆಗಾಗ್ಗೆ ನನ್ನನ್ನು ಸೇರಲು ಒಪ್ಪಿದ್ದಾಳೆ- ಇದು ತಪ್ಪೋ, ಸರಿಯೊ?

ನಂಗೆ ಬಿಟ್ಟು ನೀನ್ಯಾಕೆ ಬಂದ್ಯಲೆ… ನಾ ಬಂದ್ರೆ ನಿಂಗೆ ಏನಾಯ್ತಲೇ… ಇಬ್ಬರು ಚಾಲಕರ ಜಗಳದಲ್ಲಿ ಬಸ್ಸಾಯ್ತು ಸೀಜ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 10 =
Remember me
