ಮುಂಬೈ:ಇಂದು ಪ್ರೇಮಿಗಳ ದಿನ. ಎಲ್ಲೆಡೆ ಹಲವು ಪ್ರೇಮಿಗಳು, ದಂಪತಿ ಈ ದಿನವನ್ನು ಭಾರಿ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮದುವೆ ಮಾಡಿಕೊಳ್ಳಲು ಈ ದಿನಕ್ಕಾಗಿ ಕಾದಿರುವ ಜೋಡಿಗಳೂ ಇವೆ. ಆದರೆ ಇದರ ನಡುವೆಯೇ ಬಾಲಿವುಡ್‌ ನಟಿ ರಾಖಿ ಸಾವಂತ್‌ ತಮ್ಮ ದಾಂಪತ್ಯ ಜೀವನವನ್ನು ಪ್ರತ್ಯೇಕ ಮಾಡಲು ಇದೇ ದಿನವನ್ನು ಆಯ್ಕೆ ಮಾಡಿಕೊಂಡು ಸುದ್ದಿಯಾಗಿದ್ದಾರೆ.
ನಟಿ ರಾಖಿ ಸಾವಂತ್ ಅವರ ಪತಿ ಎಂದೇ ಹೇಳಲಾಗುತ್ತಿರುವ ರಿತೇಶ್ ಅವರು ಇಂದು ಪ್ರತ್ಯೇಕಗೊಳ್ಳಲಿದ್ದಾರೆ. ಈ ಕುರಿತು ರಾಖಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಸದಾ ಒಂದಿಲ್ಲೊಂದು ವಿವಾದಗಳ ಸುಳಿಯಲ್ಲಿಯೇ ಇರುವ ರಾಖಿ ಅವರ ಈ ವಿವಾಹದ ಕುರಿತು ಕೂಡ ಹಲವಾರು ಅನುಮಾನಗಳು ಇವೆ. ರಿತೇಶ್‌ ಅವರು ರಾಖಿಯ ಪತಿ ಹೌದೋ ಅಲ್ಲವೋ ಎಂಬ ಬಗ್ಗೆಯೂ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದರೂ ರಾಖಿ ಮಾತ್ರ ತಮ್ಮ ಸಂಬಂಧ ಇಂದಿಗೆ ಕೊನೆಗೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಅಂದಹಾಗೆ ರಾಖಿ ಹಿಂದಿಯ ಬಿಗ್‌ಬಾಸ್ ಸೀಜನ್‌ 15ರಲ್ಲಿ ಕಾಣಿಸಿಕೊಂಡಿದ್ದರು. ರಿತೇಶ್ ಕೂಡ ಇದರಲ್ಲಿ ಭಾಗವಹಿಸಿದ್ದರು. ರಾಖಿಯ ಜತೆ ರಿತೇಶ್‌ ಮದುವೆಯಾಗಿದೆ ಎಂದು ಹೇಳಲಾಗುತ್ತಿದ್ದರೂ, ರಿತೇಶ್‌ ಸದ್ಯ ಭಾರತದಲ್ಲಿ ಇಲ್ಲ. ಇದಾಗಲೇ ಮದುವೆಯಾಗಿ ಒಂದು ಮಗು ಹೊಂದಿರುವ ರಿತೇಶ್‌ ಆಕೆಗೆ ವಿಚ್ಛೇದನ ಕೊಡದೇ ರಾಖಿ ಜತೆ ಮದುವೆಯಾಗಿದ್ದಾರೆ ಎನ್ನಲಾಗಿದೆ. ಇವರ ಪ್ರೀತಿ ಹುಟ್ಟಿಕೊಂಡಿದ್ದೂ ಇದೇ ಬಿಗ್‌ಬಾಸ್‌ನಲ್ಲಿ ಎನ್ನಲಾಗಿದೆ.
ಇದು ಪ್ರೇಮಿಗಳ ದಿನದ ಮೊದಲು ಆಯಿತು. ಆದರೆ ಈ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಾನು ನಿಜವಾಗಿಯೂ ದುಃಖಿತಳಾಗಿದ್ದೇನೆ. ನಾನು ರಿತೇಶ್ ಜೀವನದಲ್ಲಿ ಉತ್ತಮವಾಗಲಿ ಎಂದು ಹಾರೈಸುತ್ತೇನೆ. ಆದರೆ ನಾನು ಜೀವನದ ಈ ಹಂತದಲ್ಲಿ ನನ್ನ ಕೆಲಸ ಮತ್ತು ನನ್ನ ಜೀವನದ ಮೇಲೆ ಕೇಂದ್ರೀಕರಿಸಬೇಕು. ನನ್ನನ್ನು ಸಂತೋಷದಿಂದ ಮತ್ತು ಆರೋಗ್ಯವಾಗಿರಿಸಿಕೊಳ್ಳಬೇಕು. ಯಾವಾಗಲೂ ನನ್ನನ್ನು ಅರ್ಥಮಾಡಿಕೊಂಡು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು ಎಂದು ರಾಖಿ ಬರೆದಿದ್ದಾರೆ.
ವ್ಯಾಲೆಂಟೈನ್ಸ್ ಡೇ ಎಂದು ಜೋಡಿ ಜತೆ ತಿರುಗ್ತೀರಾ? ಹಾಗಿದ್ರೆ ನಿಮ್‌ ಮದ್ವೆ ಜತೆ ಮೆರವಣಿಗೆ ಗ್ಯಾರೆಂಟಿ!

ಧಗಧಗ ಹೊತ್ತಿ ಉರಿದ ಬಿಗ್‌ಬಾಸ್‌ ಮನೆ! ಸ್ಥಳಕ್ಕೆ ಧಾವಿಸಿದ ನಾಲ್ಕು ಅಗ್ನಿಶಾಮಕ ವಾಹನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine − six =
Remember me
