ಮುಂಬೈ:ಬಾಲಿವುಡ್‌ ನಟಿ ರಾಖಿ ಸಾವಂತ್‌ ಇದಾಗಲೇ ಹಲವಾರು ಸಾಮಾಜಿಕ ಕಾರ್ಯಗಳನ್ನು ತೊಡಗಿಸಿಕೊಂಡಿದ್ದಾರೆ. ಇದರ ಹೊರತಾಗಿಯೂ ರಾಖಿ ಎಂದ ತಕ್ಷಣ ಬಹುತೇಕ ಮಂದಿಗೆ ಕಾಣಿಸುವುದು ನೀಲಿ ತಾರೆಯಾಗಿಯೇ. ಇದಕ್ಕಾಗಿಯೇ ಆಕೆ ಹಾಕುವ ಫೋಟೋ ಅಥವಾ ವಿಡಿಯೋಗಳಲ್ಲಿ ಟ್ರೋಲ್‌ ಮಾಡುವುದನ್ನೇ ಕಾಯುತ್ತಿರುತ್ತಾರೆ.
ಇಲ್ಲಿಯೂ ಹಾಗೆಯೇ ಆಗಿದೆ. ಯೋಗ, ಧ್ಯಾನ, ವರ್ಕ್‌ಔಟ್‌ನಲ್ಲಿಯೂ ರಾಖಿ ಸೈ. ಇದೇ ಕಾರಣಕ್ಕೆ ವರ್ಷ 43 ಆದರೂ ರಾಖಿ ಫಿಟ್‌ ಆಗಿದ್ದಾರೆ. ತಾವು ವ್ಯಾಯಾಮ ಮಾಡುತ್ತಿರುವ ವಿಡಿಯೋ ಒಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅವರು ಶೇರ್‌ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮ್ಮ ದೇಹವನ್ನು ಸಂಪೂರ್ಣ ತಿರುಗಿಸಿ ಅಚ್ಚರಿ ಮೂಡಿಸಿದ್ದಾರೆ. ಇಂಥದ್ದೊಂದು ಕಠಿಣ ವ್ಯಾಯಾಮ ಮಾಡುತ್ತಿರುವುದಕ್ಕೆ ಹಲವರು ಶ್ಲಾಘನೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಟ್ರೋಲ್‌ ಮಾಡುತ್ತಿದ್ದಾರೆ.
ಅಷ್ಟಕ್ಕೂ ಈ ವ್ಯಾಯಾಮ ನೋಡಿದಾಗ ಅದರಲ್ಲಿ ಟ್ರೋಲ್‌ ಮಾಡುವುದು ಏನಿದೆ ಎಂದು ಎನಿಸಬಹುದು. ಆದರೆ ಟ್ರೋಲಿಗರ ಬಾಯಿಗೆ ಈಕೆ ಹಾಕಿರುವ ಸ್ಪೋರ್ಟ್‌ ಬ್ರಾದ ಬಣ್ಣ ಆಹಾರವಾಗಿದೆ. ಇದರ ಬಣ್ಣ ಚರ್ಮದ ಬಣ್ಣವನ್ನೇ ಹೋಲುತ್ತದೆ. ಆದ್ದರಿಂದ ಕೆಲವರು ಈಕೆ ಯಾವುದೇ ದಿರಿಸು ಧರಿಸಿಲ್ಲ ಎಂದೂ, ಒಮ್ಮೆ ನೋಡಿದರೆ ಬಟ್ಟೆ ಹಾಕಿಕೊಂಡ ಹಾಗೆಯೇ ಕಾಣಿಸುವುದಿಲ್ಲ ಎಂದು ಟ್ರೋಲ್‌ ಮಾಡಿ ಅದನ್ನು ಶೇರ್‌ ಮಾಡುತ್ತಿದ್ದಾರೆ. ಅಂತೂ ಅವರವರ ಭಾವಕ್ಕೆ ಎಂಬಂತೆ ಈ ವಿಡಿಯೋ ಕಾಣಿಸುತ್ತಿದೆ.
ಇಲ್ಲಿದೆ ನೋಡಿ ವಿಡಿಯೋ:


A post shared by Rakhi Sawant (@rakhisawant2511)

VIDEO: ಅಂತಿಂಥ ಗಂಡ ಇವನಲ್ಲ… 28 ಪತ್ನಿಯರ ಸಮ್ಮುಖದಲ್ಲಿ 37ನೇ ಮದುವೆಯಾದ ‘ಪತಿದೇವ’!

ತೆರಿಗೆ ಕಟ್ಟಲು ದುಡ್ಡಿಲ್ಲ- ಜಾಲತಾಣದಲ್ಲಿ ದುಃಖ ತೋಡಿಕೊಂಡ ನಟಿ ಕಂಗನಾ ಏನು ಹೇಳಿದ್ದಾರೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
