ಅಯೋಧ್ಯೆ:ಶತ ಶತಮಾನಗಳ ಕನಸಾಗಿರುವ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಯಾಗಿದ್ದು, ಇನ್ನೇನು ಅಲ್ಲಿ ಕಟ್ಟಡ ನಿರ್ಮಾಣವಾಗಬೇಕಿದೆಯಷ್ಟೇ.
ಈ ನಡುವೆಯೇ ಹಿಂದೂ-ಮುಸ್ಲಿಂ ಭಾವೈಕ್ಯಕ್ಕೆ ಕೊಳ್ಳಿ ಇಡುವಂಥ ಹೇಳಿಕೆಗಳು ಕೇಳಿ ಬರುತ್ತಲೇ ಇವೆ. ಇಂಥ ಕೋಮು ಪ್ರಚೋದಕ ನುಡಿಗಳ ನಡುವೆಯೇ ಎರಡೂ ಧರ್ಮದ ಕಲಾಕಾರರು ಸೇರಿ ಅಪೂರ್ವವಾದಂಥ, ಐತಿಹಾಸಿಕ ಉಡುಗೊರೆಯೊಂದನ್ನು ರಾಮಮಂದಿರಕ್ಕೆ ನೀಡಲು ಸಿದ್ಧತೆ ನಡೆಸಿದ್ದಾರೆ.
ಹೌದು. ಇದು ಅಷ್ಟಧಾತುಗಳನ್ನು ಒಳಗೊಂಡಿರುವ ಘಂಟೆ. ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ ಮತ್ತು ಪಾದರಸದಿಂದ ತಯಾರಿಸಲಾದ ಈ ಘಂಟೆ ಭಾರತದ ಅತಿ ದೊಡ್ಡ ಗಾತ್ರದ ಘಂಟೆಯಾಗಿದೆ ಎಂದು ವರ್ಕ್ ಶಾಪ್ಮಾ ಲೀಕ ವಿಕಾಸ್‌ ಮಿಥಲ್‌ ಹೇಳಿದ್ದಾರೆ.
ಕುಶಲಕರ್ಮಿ ದೌ ದಯಾಳ್ ನೇತೃತ್ವದ ತಂಡ ಈ ಘಂಟೆಯನ್ನು ನಿರ್ಮಿಸಿದೆ. ಕುಶಲಕರ್ಮಿ ಇಕ್ಬಾಲ್‌ ಮಿಸ್ತ್ರಿ ಇದರ ವಿನ್ಯಾಸ ಮಾಡಿದ್ದಾರೆ.
ಇದೇ ಮೊದಲು ಇಷ್ಟು ಬೃಹತ್‌ ಗಾತ್ರದ ಘಂಗಂಟೆಯನ್ನು ತಯಾರಿಸುತ್ತಿದ್ದೇವೆ. ಇದರ ತೂಕ 2,100 ಕೆ.ಜಿ. ಆಗಲಿದೆ. ಇಕ್ಕೆ ಸುಮಾರು 21 ಲಕ್ಷ ರೂಪಾಯಿ ತಗುಲಲಿದೆ.
ಇದನ್ನೂ ಓದಿ:ರಾಮಮಂದಿರ ನೆಲಸಮ ಮಾಡಿ ಮಸೀದಿ ಕಟ್ಟುವೆವು- ಮುಸ್ಲಿಂ ಸಂಘದ ಟ್ವೀಟ್‌
ರಾಮಮಂದಿರಕ್ಕಾಗಿ ಇದನ್ನು ತಯಾರಿಸುತ್ತಿದ್ದೇವೆ ಎಂಬ ಅಂಶ ನಮಗೆ ಇನ್ನಷ್ಟು ಉತ್ಸಾಹ ನೀಡುತ್ತಿದೆ. ಯಾವುದೇ ಲೋಪವಾಗದಂತೆ ಎಚ್ಚರವಹಿಸುತ್ತಿದ್ದೇವೆ ಎಂದು ದೌ ದಯಾಳ್ ಅವರು ಹೇಳಿದರು.
ವಿಕಾಸ್‌ ಮಿಥಲ್ ಅವರಿಗೆ 2,100 ತೂಕದ ಘಂಟೆ ಸಿದ್ಧಗೊಳಿಸುವಂತೆ ನಿರ್ಮೋಹಿ ಅಖಾಡವು ಸೂಚಿಸಿತ್ತು. ನಾವು ಇದನ್ನು ಮಂದಿರಕ್ಕೆ ಕೊಡುಗೆ ನೀಡಲು ಉದ್ದೇಶಿಸಿದ್ದೇವೆ ಎಂದು ಶಾಪ್ ನ ಆದಿತ್ಯ ಮಿಠ್ಟಲ್ ಹೇಳಿದರು. ಇದಕ್ಕೂ ಮುನ್ನ ದಯಾಳ್ ಅವರು 101 ಕೆ.ಜಿ ತೂಕದ ಗಂಟೆಯನ್ನು ಸಿದ್ಧಪಡಿಸಿದ್ದು, ಉತ್ತರಾಖಂಡದ ಕೇದಾರನಾಥ ದೇವಸ್ಥಾನದಲ್ಲಿ ಅದು ಬಳಕೆಯಾಗುತ್ತಿದೆ.
ಅಲ್ಲಿ ಹಿಂದೆಯೂ ಬಾಬರಿ ಮಸೀದಿ ಇತ್ತು, ಮುಂದೆಯೂ ಇರಲಿದೆ- ಯಾವ ತೀರ್ಪೂ ಲೆಕ್ಕಕ್ಕಿಲ್ಲ ಎಂದು ಟ್ವೀಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
