ಮುಂಬೈ:ಕ್ಯೂಟ್​ ತಾರಾ ಜೋಡಿ ಎಂದು ಹೆಸರುವಾಸಿಯಾಗಿರುವ ಜೋಡಿ ಎಂದರೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್. ಲವ್ ಬರ್ಡ್ಸ್ ಎಂದೇ ಖ್ಯಾತಿ ಗಳಿಸಿರುವ ಈ ಜೋಡಿ ಈಗ ಅಪ್ಪ-ಅಮ್ಮ ಆಗುವ ಖುಷಿಯಲ್ಲಿ ಇದ್ದಾರೆ. ಕಲೆದ ಏಪ್ರಿಲ್ 14 ರಂದು ಮುಂಬೈನಲ್ಲಿ ಮದುವೆಯಾದ ಎರಡು ತಿಂಗಳಿನಲ್ಲಿಯೇ ಆಲಿಯಾ ಗರ್ಭಿಣಿಯಾಗಿರುವ ಸುದ್ದಿಯನ್ನು ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು.
ಕೆಲ ದಿನಗಳ ಹಿಂದೆ ಆಲಿಯಾ ಅವಳಿ ಮಕ್ಕಳ ತಾಯಿಯಾಗಲಿದ್ದಾಳೆ ಎಂದು ರಣಬೀರ್​ ಕಪೂರ್​ ಹೇಳಿದ್ದರು. ಇದು ಕೂಡ ಭಾರಿ ಸುದ್ದಿಯಾಗಿತ್ತು. ಆದರೆ ಇದೀಗ ತಮ್ಮ ಈ ಹೇಳಿಕೆ ಸತ್ಯವೋ, ಸುಳ್ಳೋ ಎಂಬುದರ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ರಣಬೀರ್​ ಕಪೂರ್​ ಮಾತನಾಡಿದ್ದಾರೆ.
ನಿಜಕ್ಕೂ ಆಲಿಯಾ ಗರ್ಭದಲ್ಲಿ ಇಬ್ಬರು ಮಕ್ಕಳು ಇದ್ದಾರೆಯೇ ಎಂದು ಪುನಃ ಕೇಳಿದ ಪ್ರಶ್ನೆಗೆ ರಣಬೀರ್​ ಕಪೂರ್​, ಅದನ್ನು ನಾನು ಈಗಲೇ ಹೇಳುವುದಿಲ್ಲ. ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ನನಗೆ ಆ್ಯಂಕರ್​ ಎರಡು ಸತ್ಯ ಮತ್ತು ಒಂದು ಸುಳ್ಳು ಹೇಳಿ ಎಂದು ಕೇಳಿದ್ದರು. ಆಗ ಮೂರು ವಿಷಯಗಳನ್ನು ನಾನು ಹೇಳಿದ್ದೇನೆ. ಅದರಲ್ಲಿ ಒಂದು ಅವಳಿ ಮಕ್ಕಳ ಕುರಿತು. ಆದ್ದರಿಂದ ಇದು ಸತ್ಯವೋ, ಸುಳ್ಳೋ ಎಂಬುದು ನಿಮ್ಮ ಊಹೆಗೆ ಬಿಟ್ಟ ವಿಷಯ ಎಂದಿದ್ದಾರೆ ರಣಬೀರ್​.
ಅಂದು ನಾನು ಹೇಳಿದ್ದು ಈ ಮೂರು ವಿಷಯಗಳು. ಅವುಗಳೆಂದರೆ: 1) ನಾನು ಅವಳಿ ಮಕ್ಕಳಿಗೆ ತಂದೆಯಾಗಲಿದ್ದೇನೆ 2) ನಾನು ಬಹಳ ದೊಡ್ಡ ಪೌರಾಣಿಕ ಚಿತ್ರದ ಭಾಗವಾಗಲಿದ್ದೇನೆ ಹಾಗೂ 3) ನಾನು ಕೆಲಸದಿಂದ ದೀರ್ಘ ವಿರಾಮ ತೆಗೆದುಕೊಳ್ಳುತ್ತೇನೆ ಎಂಬುದು. ಇವುಗಳಲ್ಲಿ ಯಾವುದೋ ಎರಡು ಸತ್ಯ ವಿಷಯಗಳು ಇದ್ದು, ಒಂದು ಸುಳ್ಳು ವಿಷಯ. ಅದು ಯಾವುದು ಎಂದು ಊಹೆ ಮಾಡಿಕೊಳ್ಳಿ. ನಾನು ಏನೂ ಮಾತನಾಡುವುದಿಲ್ಲ ಎಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.
ಅಭಿಮಾನಿಗಳು ತಲೆಗೆ ಹುಳ ಬಿಟ್ಟುಕೊಳ್ಳಲು ಕಾರಣ ಏನೆಂದರೆ, ಸದ್ಯ ರಣಬೀರ್ ಸದ್ಯ ಆಲಿಯಾ ಜೊತೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಪೌರಾಣಿಕ ಚಿತ್ರವಾದ್ದರಿಂದ ಈ ವಿಷಯ ನಿಜವೇ. ರಣಬೀರ್ ಇದಾಗಲೇ ಎರಡು ವರ್ಷ ಗ್ಯಾಪ್ ತೆಗೆದುಕೊಂಡಿದ್ದರು. ಆದ್ದರಿಂದ ಇನ್ನು ಮುಂದೆಯೂ ತೆಗೆದುಕೊಳ್ಳುತ್ತಾರೋ ಖಚಿತವಾಗಿಲ್ಲ. ಇದು ನಿಜವೇ ಆಗಿದ್ದರೆ, ಆಲಿಯಾ ಗರ್ಭದಲ್ಲಿ ಅವಳಿ ಮಕ್ಕಳು ಇರುವುದು ಸುಳ್ಳಾಗುತ್ತದೆ, ಇಲ್ಲದೇ ಹೋದರೆ ಅದು ನಿಜವಾಗುತ್ತದೆ ಎಂದೆಲ್ಲಾ ಅಭಿಮಾನಿಗಳ ಲೆಕ್ಕಾಚಾರ ಶುರುವಾಗಿದೆ.
ಕೊಟ್ಟ ಮಾತು ಉಳಿಸಿಕೊಂಡ ಗರ್ಭಿಣಿ ಆಲಿಯಾ ಭಟ್​: ಹಾಲಿವುಡ್​ ಶೂಟಿಂಗ್​ನಲ್ಲಿ ಬೇಬಿಬಂಪ್ ವೈರಲ್​

VIDEO: ಫಸ್ಟ್​ ನೈಟ್​ ಅನ್ನೋದೇ ಇಲ್ಲ- ನಟಿ ಆಲಿಯಾ ಭಟ್​ ಹೇಳಿಕೆಗೆ ಸುಸ್ತಾದ ಪತಿ ರಣಬೀರ್​ ಕಪೂರ್​

ನಿಮ್ಮ ಎಕ್ಸ್​ಗಳ ಜತೆ ಮಂಚಕ್ಕೆ ಹೋಗುವಿರಾ ಎಂದು ನಟಿಯರನ್ನು ಪ್ರಶ್ನಿಸಿದ ಕರಣ್​: ಸಾರಾ-ಜಾಹ್ನವಿ ಉತ್ತರ ಹೀಗಿತ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 4 =
Remember me
