ನವದೆಹಲಿ:ರೈಲ್ವೆ ನಿಲ್ದಾಣದಲ್ಲಿ ಹಾಡುತ್ತಿದ್ದ ರಾನು ಮೊಂಡಲ್ ರಾತ್ರೋ ರಾತ್ರಿ ಸ್ಟಾರ್ ಆಗಿ ಕೊನೆಗೆ ಮತ್ತಷ್ಟು ವಿವಾದಕ್ಕೆ ಸಿಲುಕಿರುವ ವಿಷಯ ಎಲ್ಲರಿಗೂ ಚಿರಪರಿಚಿತ. ರಾಣಾಘಾಟ್ ನಿಲ್ದಾಣದಲ್ಲಿ ಇವರು ಹಾಡುತ್ತಿದ್ದ ಹಾಡನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದು, ರಾನು ಅವರ ಭವಿಷ್ಯವನ್ನೇ ಬದಲಾಯಿಸಿಬಿಟ್ಟಿತ್ತು. ರಾಣಾಘಾಟ್ ನಿಲ್ದಾಣದಿಂದ ಮುಂಬೈ ತನಕ ಅವರ ಪ್ರಯಾಣ ಬೆಳೆದದ್ದೇ ರೋಚಕ.
ಇವರ ರೋಚಕ ಜೀವನ ಕಥನವುಳ್ಳ ಬಯೋಪಿಕ್​ನ ಫಸ್ಟ್​ಲುಕ್​ ಈಗ ಬಿಡುಗಡೆಯಾಗಿದೆ. ‘ಏಕ್ ಪ್ಯಾರ್ ಕಾ ನಗ್ಮಾ ಹೈ’ ಈ ಬಯೋಪಿಕ್​ನ ಹೆಸರು. ಲತಾ ಮಂಗೇಶ್ಕರ್​ ಅವರು ಹಾಡಿದ್ದ ಇದೇ ಹಾಡನ್ನು ಹಾಡಿಯೇ ಅವರು ಖ್ಯಾತಿ ಪಡೆದ ಹಿನ್ನೆಲೆಯಲ್ಲಿ ಬಯೋಪಿಕ್​ಗೆ ಇದೇ ಹೆಸರನ್ನು ಇಡಲಾಗಿದೆ.
ರಾನು ಮೊಂಡಲ್ ರಾಣಾಘಾಟ್ ನಿಲ್ದಾಣದಲ್ಲಿ ಏಕೆ ಆಶ್ರಯ ಪಡೆಯಬೇಕಾಯಿತು ಎಂಬುದೂ ಸೇರಿದಂತೆ ಅವರ ಜೀವನದ ಏರಿಳಿತಗಳನ್ನು ಇದರಲ್ಲಿ ಚಿತ್ರಿಸಲಾಗಿದೆ. ತುಂಬಾ ಖ್ಯಾತಿಗೆ ಬಂದ ಬಳಿಕ ರಾನು ಅಭಿಮಾನಿಗಳನ್ನು ನಡೆಸಿಕೊಂಡ ರೀತಿಯಿಂದ ಹಲವರು ಅಸಮಾಧಾನ ವ್ಯಕ್ತಪಡಿಸಿ, ಕೊನೆಗೆ ಅವರು ಮೂಲೆ ಗುಂಪಾಗಿರುವುದು ಈಗ ಇತಿಹಾಸ. ಆದರೆ ಬಯೋಪಿಕ್​ ಮೂಲಕ ಮತ್ತೆ ರಾನು ಮುನ್ನೆಲೆಗೆ ಬಂದಿದ್ದಾರೆ.
ಈ ಬಯೋಪಿಕ್​ಗೆ ‘ಮಿಸ್ ರಾನು ಮಾರಿಯಾ’ ಎಂದು ಶೀರ್ಷಿಕೆ ಇಡಲಾಗುವುದು ಎಂದು ಮೊದಲು ಹೇಳಲಾಗಿತ್ತು. ಆದರೆ ಅಂತಿಮವಾಗಿ ‘ಏಕ್ ಪ್ಯಾರ್ ಕಾ ನಗ್ಮಾ ಹೈ’ ಎಂದು ಹೆಸರಿಡಲಾಗಿದೆ. ಈ ಬಯೋಪಿಕ್‌ನ ಚಿತ್ರಕಥೆಯನ್ನು ನಿರ್ದೇಶಕ ಹೃಷಿಕೇಶ್ ಮೊಂಡಲ್ ಬರೆದಿದ್ದಾರೆ. ‘ಸೇಕ್ರೆಡ್ ಗೇಮ್ಸ್’ ಖ್ಯಾತಿಯ ನಟಿ ಇಶಿಕಾ ಬಯೋಪಿಕ್‌ನಲ್ಲಿ ರಾನು ಮೊಂಡಲ್ ಪಾತ್ರವನ್ನು ನಿರ್ವಹಿಸಲಿದ್ದಾರೆ.
ರಾನು ಪಶ್ಚಿಮ ಬಂಗಾಳದವರು. ಹೀಗಾಗಿ, ಬೆಂಗಾಲಿ ಭಾಷೆಯಲ್ಲಿ ಮಾತ್ರ ಈ ಸಿನಿಮಾ ಮಾಡುವ ಆಲೋಚನೆ ಚಿತ್ರತಂಡದ್ದಾಗಿತ್ತು. ಆದರೆ, ರಾನುಗೆ ದೇಶಾದ್ಯಂತ ಪ್ರಚಾರ ಸಿಕ್ಕಿದೆ. ಈ ಕಾರಣಕ್ಕೆ ಹಿಂದಿ ಭಾಷೆಯಲ್ಲೂ ಸಿನಿಮಾ ಮಾಡುವ ಆಲೋಚನೆ ಚಿತ್ರತಂಡಕ್ಕೆ ಬಂದಿದೆ.(ಏಜೆನ್ಸಿಸ್​)
ವೈಎಸ್​ಆರ್​ ಹತ್ಯೆಗೆ ಸಂಚು ರೂಪಿಸಿದ್ದೇ ತೆಲಂಗಾಣ ಸಿಎಂ: ಪುತ್ರಿ ಹೇಳಿಕೆಗೆ ಭಾರಿ ಕೋಲಾಹಲ

ಆ ನಿರ್ದೇಶಕ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ: ಸ್ಯಾಂಡಲ್​ವುಡ್​ನಲ್ಲಿ ಮತ್ತೆ ME TOO- ನಟಿ ಆಶಿತಾ ಕಣ್ಣೀರು
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:18 − 6 =
Remember me
