ನವದೆಹಲಿ:ಕಳೆದ ಅಕ್ಟೋಬರ್‌ನಲ್ಲಿ ಮೃತಪಟ್ಟ ಮಾಜಿ ಸಚಿವ ರಾಮ್​ ವಿಲಾಸ್​ ಪಾಸ್ವಾನ್​ ಅವರ ಸಂಬಂಧಿ ಲೋಕ ಜನಶಕ್ತಿ ಪಕ್ಷ ಸಂಸದ ಪ್ರಿನ್ಸ್​ ರಾಜ್ ಪಾಸ್ವಾನ್​ ವಿರುದ್ಧ ಇದೇ ಪಕ್ಷದ ಕಾರ್ಯಕರ್ತೆ ಅತ್ಯಾಚಾರ ಪ್ರಕರಣ ದಾಖಲು ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಿನ್ಸ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.
ಮೂರು ತಿಂಗಳ ಹಿಂದೆ ಯುವತಿಯೊಬ್ಬಳು ನೀಡಿರುವ ದೂರಿನ ಆಧಾರದ ಮೇಲೆ ದೆಹಲಿಯ ಕನಾಟ್​​ ಪ್ರದೇಶದಲ್ಲಿ ಎಫ್‌ಐಆರ್‌ ದಾಖಲಾಗಿದೆ. ಯುವತಿಯ ದೂರಿನ ಆಧಾರದ ಮೇಲೆ ಈ ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು. ಕೋರ್ಟ್‌ ನಿರ್ದೇಶನದಂತೆ ಪ್ರಿನ್ಸ್ ರಾಜ್​ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ.
ಯುವತಿ ಹೇಳಿರುವುದೇನು?ನಾನು ಜನಶಕ್ತಿ ಪಕ್ಷದ ಕಾರ್ಯಕರ್ತೆಯಾಗಿರುವ ಹಿನ್ನೆಲೆಯಲ್ಲಿ ಆಗಾಗ್ಗೆ ಪ್ರಿನ್ಸ್​ ರಾಜ್​ರನ್ನು ಭೇಟಿಯಾಗುತ್ತಿದೆ. ಅವರ ಸಂಪರ್ಕದಲ್ಲಿ ಇದ್ದೆ. ಅದೊಂದು ದಿನ ಪಕ್ಷದ ಸಭೆ ಇತ್ತು. ಆಗ ನನಗೆ ನೀರಡಿಕೆ ಆಗಿ ನೀರಿನ ಬಾಟಲ್​ ತೆಗೆದುಕೊಂಡೆ. ಅಲ್ಲಿಯೇ ಇದ್ದ ಪ್ರಿನ್ಸ್​ ರಾಜ್​ ನಾನು ಬೇರೆ ನೀರು ಕೊಡುತ್ತೇನೆ ಎಂದು ಹೇಳಿ ಗ್ಲಾಸ್​​ನಲ್ಲಿ ನೀರು ಕೊಟ್ಟರು.
ಅದನ್ನು ಕುಡಿದ ಮೇಲೆ ಏನಾಯಿತೋ ಗೊತ್ತಿಲ್ಲ. ಆನಂತರ ತಿಳಿದದ್ದು ಎಚ್ಚರ ತಪ್ಪಿದೆ ಎಂದು. ಎಚ್ಚರ ಆಗುತ್ತಿದ್ದಂತೆಯೇ ನನ್ನ ತಲೆ ಪ್ರಿನ್ಸ್​ ರಾಜ್​ ಭುಜದ ಮೇಲೆ ಇತ್ತು. ಅವರ ನಡವಳಿಕೆ ನೋಡಿ ನನಗೆ ಅನುಮಾನ ಬಂದು ಏನಾಯಿತು ಎಂದು ತುಂಬಾ ಸಲ ಕೇಳಿದಾಗ ಮೊದಮೊದಲು ಏನೂ ಹೇಳಲಿಲ್ಲ. ಆ ಮೇಲೆ ಒಂದು ವಿಡಿಯೋ ತೋರಿಸಿದರು. ಅದರಲ್ಲಿ ನನ್ನ ಮೇಲೆ ರೇಪ್‌ ಮಾಡಿರುವುದು ತಿಳಿಯಿತು. ಆದರೆ ವಿಡಿಯೋದಲ್ಲಿ ಯಾರದ್ದೇ ಮುಖ ಕಾಣಿಸುತ್ತಿಲ್ಲ. ಈಗ ಅದೇ ವಿಡಿಯೋ ಇಟ್ಟುಕೊಂಡು, ನನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದಾರೆ, ಇಲ್ಲದಿದ್ದರೆ ವಿಡಿಯೋ ಲೀಕ್ ಮಾಡುವ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಯುವತಿ ಹೇಳಿಕೆ ನೀಡಿದ್ದಾರೆ.
ಆದರೆ ಇವೆಲ್ಲಾ ಸುಳ್ಳು ಎಂದಿದ್ದಾರೆ ಪ್ರಿನ್ಸ್​ ರಾಜ್​. ಈ ಹಿಂದೆ ಯುವತಿ ದೂರು ದಾಖಲು ಮಾಡುತ್ತಿದ್ದಂತೆಯೇ ಈ ಹಿಂದೆ ಪತ್ರಿಕಾ ಹೇಳಿಕೆಯನ್ನೂ ಅವರು ಬಿಡುಗಡೆ ಮಾಡಿದ್ದರು. ಜತೆಗೆ ಯುವತಿ ವಿರುದ್ಧವೂ ದೂರು ದಾಖಲು ಮಾಡಿದ್ದರು.

ಹತ್ತು ದಿನಗಳಲ್ಲಿ ಈ 13 ಚಿತ್ರ ನೋಡಿದರೆ ನಿಮಗೆ ಸಿಗುತ್ತೆ 96 ಸಾವಿರ ರೂ! ಧೈರ್ಯ ಇದೆಯಾ?

ಗಂಟೆಗಟ್ಟಲೆ ಬಾಲಕಿಯ ಕೊರಳಿಗೆ ಸುತ್ತಿಕೊಂಡ ನಾಗರಹಾವು- ಅಸಹಾಯಕನಾದ ಉರಗ ತಜ್ಞ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
