ಲಖನೌ:ಮನುಷ್ಯ ಕೆಲವೊಮ್ಮೆ ಎಷ್ಟು ನೀಚಮಟ್ಟಕ್ಕೆ ಇಳಿಯುತ್ತಾನೆ ಎನ್ನುವುದನ್ನು ನೆನೆಸಿಕೊಂಡರೆ ಭಯವಾಗುವಂಥ ಘಟನೆಯೊಂದು ಲಖನೌದಲ್ಲಿ ನಡೆದಿದೆ.
ತಾಳಿ ಕಟ್ಟಿದ ಗಂಡನೇ ಸ್ನೇಹಿತರ ಜತೆಗೂಡಿ 28 ವರ್ಷದ ತನ್ನ ಹೆಂಡತಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ! ಅಷ್ಟೇ ಅಲ್ಲದೇ ಎರಡು ದಿನಗಳವರೆಗೆ ಆಕೆಯನ್ನು ಕೂಡಿಹಾಕಿ ಸ್ನೇಹಿತರ ಜತೆ ಅತ್ಯಾಚಾರ ಎಸಗಿ ನಂತರ ರೈಲ್ವೆ ಟ್ರ್ಯಾಕ್‌ ಬಳಿ ಬೀಸಾಕಿ ಹೋಗಿದ್ದಾನೆ!
ಸರ್ಕಾರಿ ಅಂಬ್ಯುಲೆನ್ಸ್ ಸರ್ವಿಸ್‌ನಲ್ಲಿ ಕೆಲಸ ಮಾಡುತ್ತಿರುವವನೇ ಈ ಕುಕೃತ್ಯ ಎಸಗಿರುವ ಆರೋಪಿ. ಈತನ ಮದುವೆ ಸಂತ್ರಸ್ತೆಯ ಜತೆ 2016 ಏಪ್ರಿಲ್ 24ರಂದು ನಡೆದಿದೆ. ಮದುವೆಯಾದ ದಿನದಿಂದಲೂ ವರದಕ್ಷಿಣೆಗಾಗಿ ಹೆಂಡತಿಗೆ ದೈಹಿಕವಾಗಿ ದೌರ್ಜನ್ಯ ಎಸಗುತ್ತಿದ್ದ ಈ ಪಾಪಿ.
2018ರಲ್ಲಿ ಮಹಿಳೆ ಗರ್ಭಿಣಿಯಾಗಿದ್ದರು. ಆದರೆ ಕುಡಿದು ಬಂದಿದ್ದ ಈ ಆರೋಪಿ, ಅದೊಂದು ದಿನ ಆಕೆಗೆ ವರದಕ್ಷಿಣೆಗಾಗಿ ಥಳಿಸಿದ್ದರಿಂದ ಮಹಿಳೆಯ ಗರ್ಭಪಾತವಾಗಿತ್ತು. ಇನ್ನು ಸಹಿಸಲಾಗದ ನೋವು ಅನುಭವಿಸಿದ್ದ ಪತ್ನಿ ಪೊಲೀಸರಿಗೆ ದೂರು ದಾಖಲು ಮಾಡಿದ್ದರು.
ಇದನ್ನೂ ಓದಿ:ನೋಟ್‌ ಮೇಲಿನ ವೈರಸ್‌ ಹೋಗಿಸಲು ಈ ದಂಪತಿ ಏನ್‌ ಮಾಡಿದ್ರು ನೋಡಿ…!
ಇದರಿಂದ ಹೆಂಡತಿ ಮೇಲೆ ಕಿಡಿ ಕಾರತೊಡಗಿದ್ದ ಪತಿ, ಪತ್ನಿಯನ್ನೇ ಅಪಹರಣ ಮಾಡಿಕೊಂಡು ಹೋಗಿದ್ದ. ಇದು ನಡೆದದ್ದು ಇದೇ ಜುಲೈ 24ರಂದು. ಅಪಹರಿಸಿದ ಬಳಿಕ ಮಹಿಳೆಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ನಿರಂತರ 2 ದಿನಗಳ ಕಾಲ ಅತ್ಯಾಚಾರವೆಸಗಿರುವ ಆತ, ತನ್ನ ಮೂವರು ಸಹೋದ್ಯೋಗಿಗಳನ್ನು ಕರೆದುಕೊಂಡು ಬಂದಿದ್ದಾನೆ. ಅವರಿಗೂ ಅತ್ಯಾಚಾರ ಎಸಗುವಂತೆ ಹೇಳಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಅವರು ಕೂಡ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಇಷ್ಟೇ ಅಲ್ಲದೇ. ಎರಡು ದಿನಗಳವರೆಗೆ ಹಿಂಸೆ ನೀಡಿದ ನಂತರ ಮಹಿಳೆಯನ್ನು ಶಾಹಿ ರೈಲ್ವೇ ನಿಲ್ದಾಣದ ಬಳಿ ಬಿಸಾಕಿ ಹೋಗಿದ್ದಾರೆ. ಮಾನಸಿಕ ಹಾಗೂ ದೈಹಿಕವಾಗಿ ಜರ್ಜರಿಯಾಗಿದ್ದ ಸಂತ್ರಸ್ತೆ ಅದ್ಹೇಗೋ ಮಾಡಿ ರೈಲ್ವೆ ಟ್ರ್ಯಾಕ್‌ನಿಂದ ತಪ್ಪಿಸಿಕೊಂಡು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾಳೆ.
ಘಟನೆ ಸಂಬಂಧ ನಾಲ್ವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ ಎಫ್‍ಐಆರ್‌ನಲ್ಲಿ ಮಾತ್ರ ಸಾಮೂಹಿಕ ಅತ್ಯಾಚಾರದ ಪ್ರಕರಣ ದಾಖಲಿಸಿಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಮಹಿಳೆ ಪೊಲೀಸ್ ಅಧೀಕ್ಷಕರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ಪ್ಯಾಂಟಿನೊಳಗೆ ಹಾವು: ರಾತ್ರಿಯಿಡೀ ಕದಲದೇ ಕಳೆದ! ವಿಡಿಯೋ ನೋಡಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six − 2 =
Remember me
