ನೈಜೇರಿಯಾ:ಅತ್ಯಾಚಾರದ ಪ್ರಕರಣಗಳ ವರದಿಯಾದಾಗಲೆಲ್ಲ, ಮಹಿಳಾ ಸಂಘಟನೆಗಳು ಸೇರಿದಂತೆ ಬಹುತೇಕ ಮಂದಿ ಹೇಳುವುದು ಒಂದೇ ಒಂದು ಶಿಕ್ಷೆ, ಅದೇ ಅತ್ಯಾಚಾರ ಮಾಡಿದ ಭಾಗವನ್ನೇ ಕಟ್​ ಮಾಡಬೇಕು ಎನ್ನುವುದು.
ಅತ್ಯಾಚಾರದ ವಿರುದ್ಧದ ಆಕ್ರೋಶ, ಅಸಹನೆ, ಸಂತ್ರಸ್ತೆಯ ನರಕದ ಬಾಳು ಎಲ್ಲವನ್ನೂ ನೋಡಿದಾಗ ಅತ್ಯಾಚಾರಿಗೆ ಗಲ್ಲುಶಿಕ್ಷೆಗಿಂತಲೂ ಘೋರವಾದದ್ದು ಈ ಶಿಕ್ಷೆ ಎನ್ನುವ ಮಾತೇ ಎಲ್ಲೆಡೆ ಕೇಳಿಬರುತ್ತದೆ.
ಆದರೆ ಕೆಲವು ಕಾನೂನು ತೊಡಕುಗಳಿಂದಾಗಿ ಇಂಥ ನಿಯಮ ಬಹುಶಃ ಎಲ್ಲಿಯೂ ಜಾರಿಯಾಗಿಲ್ಲ.
ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ, ಕಲ್ಲು ಹೊಡೆದು ಸಾಯಿಸುವುದು, ಜೀವಾವಧಿ ಜೈಲು ಶಿಕ್ಷೆ ಹೀಗೆ ವಿವಿಧ ರೀತಿಯ ಶಿಕ್ಷೆ  ಬೇರೆ ಬೇರೆ ದೇಶಗಳಲ್ಲಿ ನೀಡಲಾಗುತ್ತದೆ. ಯಾವ ಶಿಕ್ಷೆಗೂ ಬಗ್ಗದ ಅತ್ಯಾಚಾರಿಗಳು ಗಡಗಡ ಎನ್ನುವಂಥ ಕಾನೂನನ್ನು ನೈಜೇರಿಯಾ ಜಾರಿಗೊಳಿಸಿದೆ. ಅದೇ ಅತ್ಯಾಚಾರಿಯ ವೃಷಣವನ್ನು ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಿ, ಆತ ಇನ್ನೆಂದೂ ಸೆಕ್ಸ್​ ಮಾಡುವ ಸಾಹಸಕ್ಕೆ ಕೈಹಾಕದಂತೆ ಮಾಡಲಾಗುತ್ತದೆ. ಈ ರೀತಿ ಶಸ್ತ್ರಚಿಕಿತ್ಸೆಗೆ ಒಳಗಾದ ಅಪರಾಧಿ ಎಂದಿಗೂ ಲೈಂಗಿಕ ಕ್ರಿಯೆ ನಡೆಸಲು ಶಕ್ತನಾಗುವುದಿಲ್ಲ.
ಇದನ್ನೂ ಓದಿ:ಚೀನಾ ಔಷಧ ಕಂಪೆನಿಯಿಂದ ಸೋರಿಕೆ: ಪುರುಷರ ಕಾಡಲಿದೆ ಈ ಮಹಾಮಾರಿ ಬ್ಯಾಕ್ಟೀರಿಯಾ!
ನೈಜೀರಿಯಾದಲ್ಲಿ ಅತ್ಯಾಚಾರದ ವರದಿಗಳಲ್ಲಿ ಭಾರೀ ಹೆಚ್ಚಳಕಂಡುಬಂದ ಹಿನ್ನೆಲೆಯಲ್ಲಿ, ಅದರಲ್ಲಿಯೂ ಕರೊನಾ ವೈರಸ್​ನ ಈ ದಿನಗಳಲ್ಲಿಯೂ ಅತ್ಯಾಚಾರ ಹೆಚ್ಚಾಗುತ್ತಿರುವ ಕಾರಣ, ಅತ್ಯಾಚಾರಿಗಳಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ನೈಜೀರಿಯಾ ದೇಶದ ಕಾಡುನ ರಾಜ್ಯದ ಗವರ್ನರ್ ನಾಸಿರ್ ಅಹ್ಮದ್ ಎಲ್ ರುಫಾಯಿ ಇಂಥದ್ದೊಂದು ಕಾನೂನು ಜಾರಿಗೆ ತಂದಿದ್ದಾರೆ.
ಅತ್ಯಾಚಾರಿಗಳು ಮತ್ತು ಲೈಂಗಿಕ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಹಿಳಾ ಸಂಘಟನೆಗಳು ಕರೆ ನೀಡಿರುವ ಹಿನ್ನಲೆಯಲ್ಲಿ ಹೊಸದಾಗಿ ಈ ರೀತಿಯಾಗಿ ಕಾನೂನು ತಿದ್ದುಪಡಿ ಮಾಡಲಾಗಿದೆ.
ಅತ್ಯಾಚಾರ ಆರೋಪ ಸಾಬೀತಾದರೆ ಶಸ್ತ್ರಚಿಕಿತ್ಸೆಯ ಮೂಲಕ ವೃಷಣಕ್ಕೆ ಕತ್ತರಿ ಹಾಕಲಾಗುತ್ತದೆ. ಇದರಿಂದಾಗಿ ಆತ ಇನ್ನೆಂದೂ ಲೈಂಗಿಕ ಕ್ರಿಯೆ ಮಾಡುವ ತಾಕತ್ತು ಹೊಂದುವುದಿಲ್ಲ. ಇದರ ಜತೆಗೆನೇ, 14 ವರ್ಷ ಮೇಲ್ಪಟ್ಟವರ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. 14 ವರ್ಷದೊಳಗಿನ ಮಗುವಿನ ಮೇಲೆ ಅತ್ಯಾಚಾರ ಎಸಗಿದವರಿಗೆ ನೈಜೀರಿಯಾದಲ್ಲಿ ಹೊಸ ಕಾನೂನಿನ ಅನ್ವಯ ಮರಣದಂಡನೆ ಶಿಕ್ಷೆ ಯಾಗಲಿದೆ.
ಆಕೆ ಕರೆನ್ಸಿ ಹಾಕಿಸಿಕೊಂಡಳು, ಅಂಗಡಿಯವ ಮೆಸೇಜ್​ ಕಳಿಸಿದ – ಹತ್ತಿರ ಕರೆದಾಕೆ ಮಾಡಿದ್ದೇನು?

18ರಿಂದ ಬದಲಾಗಿದೆ ಎಟಿಎಂ ವಿತ್​ಡ್ರಾ ರೂಲ್ಸ್​: ಇಲ್ಲಿದೆ ಮಾಹಿತಿ

ನಾಲ್ಕು ತಿಂಗಳಲ್ಲಿ ಕೆಲಸ ಕಳಕೊಂಡವರು 66 ಲಕ್ಷ- ವೈಟ್​ ಕಾಲರ್​ ಜಾಬ್​ನವರೇ ಅಧಿಕ!

ಗಂಡನ ಮನೆಗೆ ಕನ್ನ ಹಾಕಿ ನಟಿ ಎಸ್ಕೇಪ್​: ಪತಿರಾಯ ಅರೆಸ್ಟ್​- ಅಷ್ಟಕ್ಕೂ ಆಗಿದ್ದೇನು?

ಚೀನಾ ಕೈಗೊಂಬೆ ನೇಪಾಳದಿಂದ ಇದೆಂಥ ಉದ್ಧಟತನ: ಪಠ್ಯಪುಸ್ತಕ, ನಾಣ್ಯಗಳಲ್ಲಿ ಪ್ರಿಂಟ್​ ಮಾಡಿದ್ದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 + six =
Remember me
