ಮುಂಬೈ:ಸದ್ಯ ಸಿನಿ ಕ್ಷೇತ್ರದಲ್ಲಿ ಕೇಳಿಬರುತ್ತಿರುವ ಕೆಲವು ತಾರೆಯರ ಪೈಕಿ ಪುಷ್ಪಾ ಚಿತ್ರದ ಮೂಲಕ ನ್ಯಾಷನಲ್​ ಕ್ರಶ್​ ಆಗಿರೋ ರಶ್ಮಿಕಾ ಮಂದಣ್ಣ ಹೆಸರು ಕೂಡ ಒಂದು. ಈಗ ಈಕೆ ಡಾನ್ಸ್​ ಮಾಡುವುದರಿಂದ ಹಿಡಿದು ಏನೇ ಮಾತನಾಡಿದರೂ ಅದು ಭಾರಿ ವೈರಲ್​ ಆಗುತ್ತಿದೆ.
ಇಂಥ ಬೆಡಗಿ ಈಗ ಸ್ವಯಂವರದ ವಿಷಯದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಭ್​ ಬಚ್ಚನ್​ ಜತೆ ‘ಗುಡ್ ಬೈ’ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಸಂದರ್ಶನವೊಂದರಲ್ಲಿ ಸ್ವಯಂವರ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ‘ಗುಡ್ ಬೈ’ ಚಿತ್ರದ ಪ್ರಮೋಷನ್​ ಸಮಯದಲ್ಲಿ ಯೂಟ್ಯೂಬ್​ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ವಯಂವರದ ಕುರಿತು ರಶ್ಮಿಕಾ ಮಾತನಾಡಿದ್ದಾರೆ. ವಿಕಾಸ್ ಬೇಹ್ಲ್ ನಿರ್ದೇಶನದ ಫ್ಯಾಮಿಲಿ ಕಾಮಿಡಿ ಎಂಟರ್‌ಟೈನರ್ ಚಿತ್ರದಲ್ಲಿ ಬಿಗ್‌ಬಿ ಹಾಗೂ ರಶ್ಮಿಕಾ ತಂದೆ ಮಗಳಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಶುಕ್ರವಾರ ವಿಶ್ವದಾದ್ಯಂತ ಸಿನಿಮಾ ತೆರೆಗೆ ಬರುತ್ತಿದೆ.
ಇದರ ಪ್ರಮೋಷನ್​ ಸಂದರ್ಭದಲ್ಲಿ, ಸ್ವಯಂವರದ ಕುರಿತು ಪ್ರಶ್ನೆ ಕೇಳಲಾಯಿತು. ‘ಒಂದು ವೇಳೆ ನೀವು ಸ್ವಯಂವರ ನಡೆಸಿದರೆ ಅದರಲ್ಲಿ ಯಾರೆಲ್ಲಾ ಇರಬೇಕು ಎಂದು ಬಯಸುತ್ತೀರಿ’ ಎಂದು ಸಂದರ್ಶಕ ಕೇಳಿದಾಗ ರಶ್ಮಿಕಾ ಮೂವರ ಹೆಸರನ್ನು ಹೇಳಿದ್ದಾರೆ. ಅವರೆಂದರೆ ವಿಜಯ್, ಅಲ್ಲು ಅರ್ಜುನ್ ಹಾಗೂ ರಣಬೀರ್​ ಕಪೂರ್​ ಅವರ ಹೆಸರನ್ನು ರಶ್ಮಿಕಾ ಹೇಳಿದ್ದಾರೆ.
ವಿಜಯ್​ ಜತೆ ರಶ್ಮಿಕಾ ವರಸುಡು ಚಿತ್ರದಲ್ಲಿ ನಟಿಸುತ್ತಿದ್ದರೆ, ಸೂಪರ್​ಹಿಟ್​ ಚಿತ್ರ ಪುಷ್ಪದಲ್ಲಿ ಅಲ್ಲು ಅರ್ಜನ್​ ಜತೆ ನಟಿಸಿದ್ದಾರೆ. ಇವರ ಜತೆ ರಣಬೀರ್​ ಕಪೂರ್​ ಕೂಡ ಇವರಿಗೆ ತುಂಬಾ ಇಷ್ಟವಂತೆ. ಆದರೆ ಈ ಮೂವರಲ್ಲಿ ಕೊನೆಗೆ ಯಾರನ್ನು ವರಿಸುತ್ತಾರೆ ಎಂದು ಮಾತ್ರ ಅವರು ಹೇಳಲಿಲ್ಲ. ಈ ಬಗ್ಗೆ ಕಮೆಂಟ್​ಗಳಲ್ಲಿ ಅವರಿಗೆ ಪ್ರಶ್ನೆ ಕೇಳಲಾಗುತ್ತಿದ್ದು, ಮೂವರೂ ಬೇಕಾ ಎಂದು ತಮಾಷೆ ಮಾಡಿದ್ದಾರೆ. ಈ ಮೂವರಿಗೂ ಮದ್ವೆಯಾಗಿದ್ದು, ಅವರ ಪತ್ನಿಯರ ಕಥೆಯೇನಮ್ಮಾ ಎಂದು ಇನ್ನು ಹಲವರು ಪ್ರಶ್ನಿಸಿದ್ದಾರೆ.(ಏಜೆನ್ಸೀಸ್​)
ಸಾಮಿ ಸಾಮಿ ಅಂತ ಕುಣಿದದ್ದೇ ತಪ್ಪಾಯ್ತಾ..? ರಶ್ಮಿಕಾ ಮಂದಣ್ಣ ಆಸ್ಪತ್ರೆಗೆ ದಾಖಲು!
40ರ ಹರೆಯದ ನಟಿ ಅನುಷ್ಕಾಗೆ ಕೂಡಿಬಂತು ಕಂಕಣ ಭಾಗ್ಯ: ಆದರೆ ಆತ ಸುದ್ದಿ ಮಾಡಿದವನಲ್ಲ!

ಆ ನಿರ್ದೇಶಕ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ: ಸ್ಯಾಂಡಲ್​ವುಡ್​ನಲ್ಲಿ ಮತ್ತೆ ME TOO- ನಟಿ ಆಶಿತಾ ಕಣ್ಣೀರು
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:19 + fifteen =
Remember me
