ಬೆಂಗಳೂರು:ಸುಮಾರು 900 ಕಿಲೋ ಮೀಟರ್‌ ದೂರದಿಂದ ಬಂದ ಅಭಿಮಾನಿಯೊಬ್ಬ ತಮ್ಮನ್ನು ಭೇಟಿಯಾಗಲು ಆಗದೇ ನಿರಾಸೆಯಿಂದ ವಾಪಸ್‌ ಹೋಗಿರುವ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.
ತೆಲಂಗಾಣದ ಆಕಾಶ್ ತ್ರಿಪಾಠಿ ಎಂಬ ಅಭಿಮಾನಿ ವಿರಾಜಪೇಟೆಗೆ ಕಳೆದ ವಾರ ಬಂದಿದ್ದ. ತೆಲಂಗಾಣದಿಂದ ರೈಲಿನ ಮೂಲಕ ಮೈಸೂರಿಗೆ ಬಂದು ನಂತರ ಗೂಡ್ಸ್ ಗಾಡಿಯಲ್ಲಿ ವಿರಾಜಪೇಟೆಗೆ ಬಂದಿದ್ದ. ರಶ್ಮಿಕಾ ಅವರ ಮನೆಯ ವಿಳಾಸ ತಿಳಿಯದೇ ಇಡೀ ರಾತ್ರಿ ಮನೆಗಾಗಿ ಹುಡುಕಾಡಿದ್ದ. ವಿರಾಜಪೇಟೆಯ ಮಗ್ಗುಲ ಗ್ರಾಮಕ್ಕೆ ತೆರಳಿದ ಯುವಕ ರಶ್ಮಿಕಾ ಮನೆ ಎಲ್ಲಿ ಎಂದು ಸ್ಥಳೀಯರನ್ನು ವಿಚಾರಿಸಿದ್ದ. ಆತನ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆತನಿಗೆ ಎಚ್ಚರಿಕೆ ನೀಡಿ ವಿರಾಜಪೇಟೆ ಪೊಲೀಸರು ವಾಪಸ್ ಕಳುಹಿಸಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ನೋಡಿದ ರಶ್ಮಿಕಾ, ಟ್ವೀಟ್‌ ಮಾಡಿ, ಖಂಡಿತವಾಗಿಯೂ ಮುಂದೊಂದು ದಿನ ನಿಮ್ಮನ್ನು ಭೇಟಿಯಾಗುವೆ ಎಂದು ಭರವಸೆ ನೀಡಿದ್ದಾರೆ.
‘ಅಷ್ಟು ದೂರದಿಂದ ನನ್ನನ್ನು ಕಾಣಲು ಬಂದಿದ್ದೀರಿ. ಆದರೆ ನಿಮ್ಮನ್ನು ಭೇಟಿ ಆಗದಿರುವುದಕ್ಕೆ ವಿಷಾದಿಸುತ್ತೇನೆ. ಮುಂದೊಂದು ದಿನ ನಿಮ್ಮನ್ನು ಭೇಟಿಯಾಗುವೆ. ನನ್ನ ಮೇಲೆ ನಿಮ್ಮ ಪ್ರೀತಿ ಇದೆ ರೀತಿ ಇರಲಿ. ಆದರೆ, ಹೀಗೆ ದೂರದಿಂದ ಕಷ್ಟಪಟ್ಟು ನನ್ನನ್ನು ಭೇಟಿಯಾಗುವ ತೊಂದರೆ ತೆಗೆದುಕೊಳ್ಳಬೇಡಿ, ಒಮ್ಮೆ ಭೇಟಿಯಾಗುವ ಸಂದರ್ಭ ಬರಬಹುದು’ ಎಂದು ಅಭಿಮಾನಿಯನ್ನು ಸಂತೈಸಿದ್ದಾರೆ.
Guys it just came to my notice that one of you had travelled super far and have gone home to see me..Please don’t do something like that.. i feel bad that I didn’t get to meet you🥺 I really really hope to meet you one day❤️ but for now show me love here.. I’ll be happy! 🌸🥰
— Rashmika Mandanna (@iamRashmika)June 27, 2021

ಆರು ವರ್ಷ ಕರ್ನಾಟಕದಲ್ಲಿ ಸದ್ದುಮಾಡಿದ್ದ ‘ಅಗ್ನಿಸಾಕ್ಷಿ’ಯೀಗ ಮಹಾರಾಷ್ಟ್ರದಲ್ಲಿ ‘ಸೋನಾಚಿ ಪಾವಲೆ’

ಮತ್ತೊಂದು ಮಗುವನ್ನು ಪರಿಚಯಸುತ್ತಿರುವೆ ಎಂದು ಅಭಿಮಾನಿಗಳಿಗೆ ಶಾಕ್‌ ನೀಡಿದ ನಟಿ ರಾಧಿಕಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − four =
Remember me
