ಬೆಂಗಳೂರು:ಸದಾ ಸಾಮಾಜಿಕ ಜಾಲತಾಣದಲ್ಲಿ ಬಿಜಿ ಇರುವ ನಟಿಯರ ಪೈಕಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ವಿವಾದ ಇಲ್ಲದಿದ್ದರೆ ನನಗೆ ಭಯವಾಗುತ್ತದೆ ಎಂದು ಹೇಳಿಕೆ ಕೊಟ್ಟು ಸದಾ ವಿವಾದದಲ್ಲಿಯೇ ಇರಬಯಸುವ ಸುಳಿವು ಕೊಟ್ಟಿರುವ ಈ ನಟಿಯ ಕೈಯೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅವರು ತಮ್ಮ ಇನ್​ಸ್ಟಾಗ್ರಾಮ್‌ನಲ್ಲಿ ಒಂದು ಫೋಟೋ ಶೇರ್​ ಮಾಡಿಕೊಂಡಿದ್ದರು. ಅದು ಅವರ ಕೈ ಫೋಟೋ. ಕೈ ಹಸ್ತದ ಭಾಗ ಮಾತ್ರ ಬಿಳಿಯಾಗಿದ್ದರೆ, ಉಳಿದವು ಕಪ್ಪಾಗಿವೆ. ಇದೇನು ಎಂದು ತಿಳಿಯದ ಅವರ ಅಭಿಮಾನಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ತಮ್ಮ ನೆಚ್ಚಿನ ತಾರೆಯ ಕೈಗೆ ಏನು ಆಯಿತು ಎಂದು ಹಲವರು ಪ್ರಶ್ನಿಸಿದ್ದಾರೆ.
ಅದಕ್ಕೆ ಅಭಿಮಾನಿಗಳಿಗೆ ಉತ್ತರಿಸಿ ಯಾರೂ ಭಯಪಡುವ ಅಗತ್ಯವಿಲ್ಲ ಎಂದಿರುವ ನಟಿ, ತಮ್ಮ ಕೈಗೆ ಏನಾಗಿದೆ ಎಂದು ಹೇಳಿದ್ದಾರೆ. ಇದು ತೆಲುಗಿನ ಪುಷ್ಪ ಸಿನಿಮಾದ ವೇಳೆ ಕ್ಲಿಕ್ಕಿಸಿಕೊಂಡಿರುವ ಫೋಟೋ. ಇದರಲ್ಲಿ ಅವರು ಹಳ್ಳಿ ಹುಡುಗಿ ಗೆಟಪ್​. ಆದ್ದರಿಂದ ಅವರ ಮೈಬಣ್ಣ ಕಪ್ಪು ಮಾಡಲಾಗಿದೆ. ಅಸಲಿಗೆ ಚೆಂದುಳ್ಳಿ ಚೆಲುವೆಯಂತೆ ಬಿಳಿಬಣ್ಣ ಹೊಂದಿರುವ ರಶ್ಮಿಕಾರ ಮೈಬಣ್ಣ ಈ ಚಿತ್ರಕ್ಕಾಗಿ ಕಪ್ಪಾಗಿದೆ. ಆದರೆ ಮಧ್ಯಾಹ್ನ ಊಟದ ಬ್ರೇಕ್​ನಲ್ಲಿ ಅಂಗೈ ತೊಳೆದುಕೊಂಡಾಗ ಅವರ ಅಸಲಿ ಬಣ್ಣ ಕೈಯ ಹಸ್ತಕ್ಕೆ ಬಂದಿದೆ. ನಕಲಿ ಬಣ್ಣ ಅಂದ್ರೆ ಮೇಕಪ್‌ ಉಳಿದ ಭಾಗದಲ್ಲಿ ಕಾಣುತ್ತಿದೆ.
ಈ ಬಗ್ಗೆ ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ. ಅಂದಹಾಗೆ ‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್​ಗೆ ಜೋಡಿಯಾಗಿ ರಶ್ಮಿಕಾ ನಟಿಸಿದ್ದು, ಇದರಲ್ಲಿ ಶ್ರೀವಲ್ಲಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಪೋಸ್ಟರ್​ ಮತ್ತು ಹಾಡು ರಿಲೀಸ್​ ಆಗಿವೆ. ಡಿ.17ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ‘ಪುಷ್ಪ’ ಚಿತ್ರ ತೆರೆಕಾಣಲಿದೆ.
‘ಪದ್ಮಶ್ರೀ’ ಪಡೆದ ಪಾಕ್‌ನ ಯೋಧ! 50 ವರ್ಷಗಳ ಹಿಂದೆಯೇ ಜಾರಿಯಾಗಿದೆ ಗಲ್ಲುಶಿಕ್ಷೆ: ಇವರ ಕಥೆಯೇ ರೋಚಕ…

‘ಈಜೋದನ್ನು, ಮೀನು ಹಿಡಿಯೋದನ್ನು ಚಡ್ಡಿದೋಸ್ತ್‌ಗೆ ಕಲಿಸಿದ್ದೆ… 30ಕ್ಕೆ ಬರ್ತೇನೆ, ನಾಟಿಕೋಳಿ ಸಾಂಬಾರ್‌ ಮಾಡು ಎಂದಿದ್ರು… ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 9 =
Remember me
