ಬ್ರಿಟನ್‌:ಮಹಿಳೆಯೊಬ್ಬರ ಬ್ಯಾಗಿನಿಂದ ಇಲಿಮರಿಯೊಂದು ಹೊರಕ್ಕೆ ಜಿಗಿದು ಇಡೀ ಸೂಪರ್‌ಮಾರ್ಕೆಟ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿರುವ ಘಟನೆ ಬ್ರಿಟನ್‌ನಲ್ಲಿ ನಡೆದಿದೆ.
ಮಹಿಳೆಯೊಬ್ಬರು ಮಾಲ್‌ಗೆ ತೆಗೆದುಕೊಂಡು ಹೋಗಿದ್ದ ಬ್ಯಾಗ್‌ನಲ್ಲಿ ಇಲಿಮರಿಯೊಂದು ಹೊಕ್ಕಿಕೊಂಡು ಬಿಟ್ಟಿತ್ತು. ಅವರು ಸಾಕಿದ ಬೆಕ್ಕಿನಿಂದ ತಪ್ಪಿಸಿಕೊಳ್ಳಲು ಇಲಿ ಬ್ಯಾಗ್ ಸೇರಿತ್ತು. ಆದರೆ ಇದರ ಬಗ್ಗೆ ಮಹಿಳೆಗೆ ಅರಿವು ಇರಲಿಲ್ಲ. ಐಲ್ ಆಫ್ ವಿಟ್‌ನಲ್ಲಿರುವ ಮಾಲ್‌ಗೆ ಮಹಿಳೆ ಹೋಗಿದ್ದಾರೆ. ಅಷ್ಟರಲ್ಲಿ ಇಲಿ ಹೊರಕ್ಕೆ ಜಿಗಿದುಬಿಟ್ಟಿದೆ.
ಇದನ್ನು ನೋಡಿದ ಮಹಿಳೆ ಚೀರಿಕೊಂಡಿದ್ದಾಳೆ. ಅಲ್ಲಿದ್ದ ಸಿಬ್ಬಂದಿ ಬರುವಷ್ಟರಲ್ಲಿ ಇಲಿ ಎಲ್ಲಿಯೋ ಸೇರಿಕೊಂಡು ಬಿಟ್ಟಿದೆ. ಅಂಗಡಿಯಲ್ಲೆಲ್ಲಾ ಎರ‍್ರಾಬಿರ‍್ರಿ ಓಡಾಡಿದ ಇಲಿ ಕೊನೆಗೂ ಸಿಗಲೇ ಇಲ್ಲ. ಜನರು ಕೂಡ ಏನಾಯಿತು ಎಂದು ತಿಳಿಯದೇ ಚೆಲ್ಲಾಪಿಲ್ಲಿಯಾಗಿ ಓಡಿದ್ದರಿಂದ ಆತಂಕ ಸೃಷ್ಟಿಯಾಯಿತು.
ಇಲಿಯನ್ನು ಹುಡುಕುವ ಸಲುವಾಗಿ ಹಾಗೂ ಕೋವಿಡ್ ನಿಯಮದ ಉಲ್ಲಂಘನೆ ಆಗುತ್ತಿರುವ ಕಾರಣ, ಜನರನ್ನು ಹೊರಕ್ಕೆ ಕಳುಹಿಸಿ ಇಲಿ ಸಿಗುವವರೆಗೆ ಸ್ಟೋರ್‌ ಮುಚ್ಚಲಾಗುತ್ತಿದೆ ಎಂದು ಸಿಬ್ಬಂದಿ ಹೇಳಿದರು! ಸದ್ಯ ಇಲಿಗಾಗಿ ಶೋಧನಾ ಕಾರ್ಯ ನಡೆದಿದೆ.
ಸೈಡ್‌ ಎಫೆಕ್ಟು ಇಲ್ದೇ ಸಹಸ್ರಾರು ಮಂದಿ ಜೀವ ಉಳಿಸಿರೋ ಔಷಧಿಗೆ ಏಕೆ ಅಡ್ಡಗಾಲು? ಜಾಲತಾಣದಲ್ಲಿ ಆಕ್ರೋಶ

ಬ್ಯಾಂಕ್‌ಗೆ ಕೋಟ್ಯಂತರ ರೂ. ವಂಚನೆ: ದಶಕಗಳ ಕಾಲ ನೆಮ್ಮದಿಯಿಂದಿದ್ದ ನೀರವ್‌ ಮೋದಿ ಮಾವನೂ ಎಸ್ಕೇಪ್‌!

ಸನ್ನಿ ಲಿಯೋನ್‌ ತೊಟ್ಟ ಡ್ರೆಸ್‌ನ ಜಿಪ್‌ ಮೇಲೇರಿಸಲು ಮೇಕಪ್‌ಮೆನ್‌ ಹರಸಾಹಸ- ವಿಡಿಯೋ ವೈರಲ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 13 =
Remember me
