ಬಟಾಲಾ (ಪಂಜಾಬ್​):ಒಂಬತ್ತು ದಿನಗಳ ನವರಾತ್ರಿ ಆಚರಣೆಗಳು ಭಾನುವಾರ ಮುಗಿಯುತ್ತಿದ್ದಂತೆ, ಪಂಜಾಬ್‌ನಲ್ಲಿ ರಾವಣ ಪ್ರತಿಕೃತಿ ಸುಡುವ ಸಮಾರಂಭ ನಡೆದಿತ್ತು. ಈ ಸಮಯದಲ್ಲಿ ಪ್ರತಿಕೃತಿಗೆ ಬೆಂಕಿ ಹಚ್ಚುತ್ತಿದ್ದಂತೆಯೇ ಅದು ಸ್ಫೋಟಗೊಂಡು ಆತಂಕದ ವಾತಾವರಣ ಸೃಷ್ಟಿಸಿತು.
‘ಬಟಾಲಾದ ಡಿಎವಿ ಶಾಲೆಯ ಸಮೀಪ ಮೈದಾನದಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ರಾವಣನ ಪ್ರತಿಕೃತಿಯನ್ನು ದಹಿಸಲು ಮುಂದಾದಾಗ ಅದು ಸ್ಫೋಟಗೊಂಡಿತು. ಇದರಿಂದ ಸುತ್ತಲೂ ಇದ್ದ ಜನರು ಚೆಲ್ಲಾಪಿಲ್ಲಿಯಾಗಿ ಓಡಿ ಹೋದರು.
ಇದನ್ನೂ ಓದಿ:ಕಲ್ಲಿದ್ದಲು ಹಗರಣ: ಕೇಂದ್ರದ ಮಾಜಿ ಸಚಿವನಿಗೆ ಮೂರು ವರ್ಷ ಜೈಲು
ಈ ಗುಂಪಿನ ನೇತೃತ್ವವನ್ನು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಶಾಸಕ ಅಶ್ವನಿ ಸೆಖ್ರಿ ವಹಿಸಿದ್ದರು. ಅವರು ಕೂಡ ಸ್ಥಳದಲ್ಲಿ ಹಾಜರು ಇದ್ದರು. ಸೆಖ್ರಿ ನೆಲಕ್ಕೆ ಬಿದ್ದರು ಆದರೆ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ ಎಂದು ಬಿಬಿಸಿ ಪಂಜಾಬಿ ವರದಿ ಮಾಡಿದೆ.
ಕೆಲವು ನಿಮಿಷಗಳವರೆಗೆ ಸುತ್ತಲೂ ಆತಂಕದ ಛಾಯೆ ಕವಿದಿತ್ತು. ಪ್ರತಿಕೃತಿಯ ಒಳಗೆ ಪ್ರತಿಸಲದಂತೆ ಈ ಬಾರಿಗೂ ಪಟಾಕಿಗಳನ್ನು ಇಡಲಾಗಿತ್ತು. ಆದರೆ ಈ ರೀತಿ ಸ್ಫೋಟಗೊಂಡಿದ್ದಕ್ಕೆ ಸರಿಯಾದ ಕಾರಣ ತಿಳಿದಿಲ್ಲ ಎನ್ನುತ್ತಿದ್ದಾರೆ ಸ್ಥಳೀಯರು.
ರಾವಣದ ದಹನದ ಕುರಿತಂತೆ ವಿಡಿಯೋ ಮಾಡಿಕೊಳ್ಳುತ್ತಿದ್ದ ಸ್ಥಳೀಯರ ಕ್ಯಾಮೆರಾದಲ್ಲಿ ಇದರ ವಿಡಿಯೋ ಚಿತ್ರೀಕರಣವಾಗಿದೆ. ಅದೀಗ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಆಗುತ್ತಿದ್ದು, ಅಸಂಖ್ಯ ಮಂದಿ ಅದನ್ನು ವೀಕ್ಷಣೆ ಮಾಡಿದ್ದಾರೆ.
ವಿಡಿಯೋಕ್ಕಾಗಿ ಇಲ್ಲಿ ಕ್ಲಿಕ್ಕಿಸಿ:https://www.facebook.com/VVani4U/videos/348835969729689
ಸೆಕ್ಸ್​ ದಂಧೆಗೆ ಆನ್​ಲೈನ್​ನಲ್ಲಿರುವ ಮಕ್ಕಳೇ ಟಾರ್ಗೆಟ್​- ಖತರ್ನಾಕ್​ ನಟ ಸಿಬಿಐ ಬಲೆಗೆ

ಕಲ್ಲಿದ್ದಲು ಹಗರಣ: ಕೇಂದ್ರದ ಮಾಜಿ ಸಚಿವನಿಗೆ ಮೂರು ವರ್ಷ ಜೈಲು

‘ಕ್ರಿಸ್ಮಸ್​ಗೆ ವಿಷ್ಣುಸಹಸ್ರನಾಮ ಪಾರಾಯಣ, ಈದ್​ಗೆ ಗಣಹೋಮ ಮಾಡ್ತಾರಾ?’

ವ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 − 8 =
Remember me
