ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಇಂದಿನ ತನ್ನ ಟ್ವಿಟರ್​ ಖಾತೆಯಲ್ಲಿ ದಾಖಲೆ ಬರೆದಿದೆ. 10 ಲಕ್ಷ ಫಾಲೋವರ್ಸ್​ಗಳನ್ನು ಹೊಂದುವ ಮೂಲಕ ಹೊಸ ಮೈಲುಗಲ್ಲು ಸಾಧಿಸಿದೆ.
ಈ ಸಾಧನೆ ಮಾಡಿದ ಜಗತ್ತಿನ ಮೊದಲ ಕೇಂದ್ರಿಯ ಬ್ಯಾಂಕ್ ಎಂಬ ಖ್ಯಾತಿ ಪಡೆದಿದೆ ಆರ್​ಬಿಐ.ವಿಶ್ವದಲ್ಲಿ ಯಾವುದೇ ದೇಶದ ಕೇಂದ್ರಿಯ ಬ್ಯಾಂಕ್ ಕೂಡಾ ಈ ಸಾಧನೆ ಮಾಡಿಲ್ಲ. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರಲ್ಲಿ ಆರ್‌ಬಿಐ 10 ಲಕ್ಷ ಹಿಂಬಾಲಕರನ್ನು ಪಡೆದುಕೊಂಡಿದೆ ಎಂದು ಬ್ಯಾಂಕ್​ ಹೇಳಿದೆ.
ಅಮೆರಿಕದ ಫೆಡರಲ್ ರಿಸರ್ವ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್​ಗಳು ಇಲ್ಲಿಯವರೆಗೆ ಟಾಪ್​ 1 ಸ್ಥಾನದಲ್ಲಿ ಇದ್ದವು. ಇದೀಗ ಅವುಗಳನ್ನು ಹಿಂದಿಕ್ಕಿ, ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವ ಅತ್ಯಂತ ಜನಪ್ರಿಯ ಕೇಂದ್ರಿಯ ಬ್ಯಾಂಕ್​ ಎಂದು ಆರ್​ಬಿಐ ಗುರುತಿಸಿಕೊಂಡಿದೆ. ಅಮೆರಿಕದ ಫೆಡರಲ್ ಬ್ಯಾಂಕ್ 6,77,000 ಹಿಂಬಾಲಕರನ್ನು ಮಾತ್ರ ಹೊಂದಿದೆ.
RBI Twitter account reaches one million followers today. A new milestone. Congratulations to all my colleagues in RBI.
— Shaktikanta Das (@DasShaktikanta)November 22, 2020

ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ 5.9 ಲಕ್ಷ ಹಿಂಬಾಲಕರನ್ನು ಹೊಂದಿದೆ. ಬ್ರೆಜಿಲ್ ಸೆಂಟ್ರಲ್ ಬ್ಯಾಂಕ್ 3.8 ಲಕ್ಷ ಹಾಗೂ ಬ್ಯಾಂಕ್ ಆಫ್ ಇಂಗ್ಲೆಂಡ್ 3.17 ಲಕ್ಷ ಹಿಂಬಾಲಕರು ಹಾಗೂ ಕೆನಡಾ ಬ್ಯಾಂಕ್ 1.8 ಲಕ್ಷ ಹಾಗೂ ಬ್ಯಾಂಕ್ ಆಫ್ ಆಸ್ಟ್ರೇಲಿಯಾ 49,200 ಹಿಂಬಾಲಕರನ್ನು ಮಾತ್ರ ಗಳಿಸಿದೆ ಎಂದು ಟ್ವಿಟ್ಟರ್ ಅಂಕಿ ಅಂಶ ಹೇಳಿದೆ.
ನನ್ನ ಸಹೋದ್ಯೋಗಿಗಳಿಗೆ ಅಭಿನಂದನೆಗಳು. ಹೊಸ ಮೈಲುಗಲ್ಲು ಆಗಿದೆ ಎಂದು ಗವರ್ನರ್ ಶಕ್ತಿಕಾಂತ್ ದಾಸ್ ಟ್ವೀಟ್ ಮಾಡಿದ್ದಾರೆ.ಆರ್ ಬಿಐ ಟ್ವೀಟರ್ ಖಾತೆಯಲ್ಲಿ ಲಭ್ಯವಿರುವ ಹೊಸ ಮಾಹಿತಿ ಪ್ರಕಾರ, ಸೆಪ್ಟೆಂಬರ್ 27 ರಂದು 9 ಲಕ್ಷ 66 ಸಾವಿರ ಇದ್ಧ ಫಾಲೋವರ್ಸ್ ಸಂಖ್ಯೆ ಇದೀಗ 1 ಮಿಲಿಯನ್ ಅಥವಾ 10 ಲಕ್ಷಕ್ಕೆ ಫಾಲೋವರ್ಸ್ ಸಂಖ್ಯೆ ಏರಿಕೆಯಾಗಿದೆ.
ಇದೇ ರೀತಿ ಬ್ಯಾಂಕ್ ಆಫ್ ಫ್ರಾನ್ಸ್, ಡ್ಯುಯೆಚ್ ಬುಂಡೆಸ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಜಪಾನ್ ಕ್ರಮವಾಗಿ 37,100, 30,000 ಹಾಗೂ 28,900 ಹಿಂಬಾಲಕರನ್ನು ಹೊಂದಿವೆ. ಬ್ಯಾಂಕ್ ಆಫ್ ಸ್ಪೇನ್ 15, 900 ಹಾಗೂ ಬ್ಯಾಂಕ್ ಆಫ್ ಇಟಲಿ 14,500 ಹಿಂಬಾಲಕರನ್ನು ಗಳಿಸಿವೆ.
ಮತಯಾಚನೆ ವೇಳೆ ಮೃತಪಟ್ಟ ಬಿಜೆಪಿ, ಕಾಂಗ್ರೆಸ್​ ಅಭ್ಯರ್ಥಿಗಳು!

ಪಕ್ಕಾ ಕಳ್ಳಿಯಾದ ‘ಮಿಸ್​ ದೆಹಲಿ’- ಬಾಯ್​ಫ್ರೆಂಡ್​ ಜತೆ ಮಜಾ ಮಾಡಹೋಗಿ ಸಿಕ್ಕಿಬಿದ್ಳು ಸುಂದರಿ!

ಅಪ್ಪನ ಜೀವಕ್ಕೆ ಕುತ್ತು ತಂದ ನೌಕರಿ- ಮಗನಿಂದಲೇ ಭೀಕರ ಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
