ವಾಷಿಂಗ್ಟನ್:ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡೆನ್​ ಅವರು ಚುನಾಯಿತರಾಗಿರುವುದಾಗಿ ಘೋಷಣೆಯಾಗಿದ್ದರೂ, ಸುಲಭದಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸೋಲನ್ನು ಒಪ್ಪುತ್ತಿಲ್ಲ. ಮತ ಎಣಿಕೆಯಲ್ಲಿ ಅನ್ಯಾಯ ನಡೆದಿರುವುದಾಗಿ ಅವರು ಹೇಳುತ್ತಲೇ ಬಂದಿದ್ದು, ಇದಕ್ಕಾಗಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಇದಾಗಲೇ ಘೋಷಿಸಿದ್ದಾರೆ.
ಇದರ ಮೊದಲನೆಯ ಹಂತವಾಗಿ ಇದೀಗ ಭಾರಿ ಕುತೂಹಲ ಕೆರಳಿಸಿದ್ದ ಜಾರ್ಜಿಯಾ ರಾಜ್ಯದಲ್ಲಿ ಮರು ಮತ ಎಣಿಕೆ ಮಾಡಲು ನಿರ್ಧರಿಸಲಾಗಿದೆ!
ಜಾರ್ಜಿಯಾದಲ್ಲಿ ಕೊನೆ ಹಂತದವರೆಗೂ ಡೊನಾಲ್ಡ್​ ಟ್ರಂಪ್​ ಅವರೇ ಮುನ್ನಡೆ ಸಾಧಿಸಿದ್ದರು. ಅಂತಿಮ ಸುತ್ತಿನಲ್ಲಿ ಜೋ ಬೈಡೆನ್​ ಅವರು ಟ್ರಂಪ್​ ಅವರಿಗಿಂತ 14 ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿಯೇಬಿಟ್ಟರು.
ಇದನ್ನೂ ಓದಿ:ಗೆದ್ದೇ ಗೆಲ್ಲುವೆ ಎಂದು ಟ್ರಂಪ್​ ಟ್ವೀಟ್​ ಮಾಡಿದರೆ, ಮತ ಹಾಕಿ ಎಂದು ಪುತ್ರನ ಎಡವಟ್ಟು!
ಇಲ್ಲಿ ಏನೋ ಮೋಸ ಆಗಿದೆ ಎನ್ನುವುದು ಟ್ರಂಪ್​ ವಾದ. ಇಲ್ಲಿರುವ 16 ಎಲೆಕ್ಟ್ರೋಲ್​ಗಳಲ್ಲಿ ಭಾರಿ ವಂಚನೆ ಮತ್ತು ಚುನಾವಣೆಯ ದುಷ್ಕೃತ್ಯ ನಡೆದಿದೆ ಎಂದು ಅವರು ಆರೋಪಿಸಿದ್ದರು. ಇದನ್ನು ಜಾರ್ಜಿಯಾದ ಅಧಿಕಾರಿಗಳು ನಿರಾಕರಿಸಿದ್ದರು. ಆದರೂ ಮರು ಮತ ಎಣಿಕೆ ಮಾಡಲು ನಿರ್ಧರಿಸಲಾಗಿದೆ. ಆದ್ದರಿಂದ 150 ಕೌಂಟಿಗಳಲ್ಲಿ ಮರು ಮತ ಎಣಿಕೆ ನಡೆಯಲಿದೆ.
ಈ ಫಲಿತಾಂಶ ಏನೇ ಬಂದರೂ ಬೈಡೆನ್​ ಅವರದ್ದೇ ಗೆಲುವು ಎನ್ನಲಾಗಿದೆ. ಬೈಡೆನ್ ಈಗಾಗಲೇ 538 ಎಲೆಕ್ಟ್ರೋಲ್ ಮತಗಳ ಪೈಕಿ 279 ಮತಗಳನ್ನು ಗಳಿಸಿದ್ದಾರೆ. ಒಂದು ವೇಳೆ ಜಾರ್ಜಿಯಾದಲ್ಲಿ ಅವರಿಗೆ ಕಡಿಮೆ ಮತಗಳು ದೊರೆತರೂ ಅವರು ಅಧ್ಯಕ್ಷರಾಗಲು ಬೇಕಾಗುವಷ್ಟು ಮತಗಳಿಗೆ ಕೊರತೆ ಆಗುವುದಿಲ್ಲ’ ಎಂದು ವಿಶ್ಲೇಷಿಸಲಾಗಿದೆ.
ಗಗನಯಾತ್ರಿಗಳು ಆಕಾಶದಲ್ಲಿ ತಲೆಸ್ನಾನ ಮಾಡೋದು ಹೀಗೆ ನೋಡಿ…

ನಿರ್ಮಾಪಕ ಅಪ್ಪನ ಫಿಲ್ಮ್​ ಶೂಟಿಂಗ್​​ಗಾಗಿ ಮೇಕೆ ಕಳ್ಳರಾದ ‘ನಟ’ರು!

ಶಾಂಘೈ ವೇದಿಕೆಯಲ್ಲಿ ಭಾರತ ಬೆಂಬಲಿಸಿದ ರಷ್ಯಾ: ಪಾಕ್, ಚೀನಾಕ್ಕೆ ಭಾರಿ ಮುಖಭಂಗ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − eleven =
Remember me
