ನವದೆಹಲಿ:ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ ಯಾವುದೇ ದೇಶ ಏಕಕಾಲದಲ್ಲಿ ಭಾರತದ ವಿರುದ್ಧ ಸಮರ ಸಾರಿದರೆ ಸಂಘರ್ಷ ಎದುರಿಸಲು ನಮ್ಮ ಸೇನೆ ಸರ್ವಸನ್ನದ್ಧವಾಗಿದೆ ಎಂದು ಭಾರತೀಯ ವಾಯುಸೇನೆಯ ಮುಖ್ಯಸ್ಥ ಆರ್​.ಕೆ.ಎಸ್ ಭದುರಿಯಾ ಹೇಳಿದ್ದಾರೆ.ಭಾರತೀಯ ವಾಯುಸೇನೆಗೆ ರಾಫೆಲ್ ಯುದ್ಧ ವಿಮಾನ ಸೇರ್ಪಡೆ ನಮ್ಮ ಶಕ್ತಿ-ಸಾಮರ್ಥ್ಯವನ್ನು ಬಳಿಷ್ಠಗೊಳಿಸಿದೆ. ಭಾರತೀಯ ವಾಯುಸೇನೆ ಶೀಘ್ರಗತಿಯಲ್ಲಿ ಬದಲಾಗುತ್ತಿದ್ದು, ಅತ್ಯಾಧುನಿಕ ಅವಕಾಶಗಳಿಗೆ ತೆರೆದುಕೊಳ್ಳುವ ಮೂಲಕ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಿದೆ. ಯಾವುದೇ ಆಕಸ್ಮಿಕತೆಯನ್ನು ಎದುರಿಸಲು ನಾವು ಬಲವಾಗಿ ನಿಯೋಜಿಸಲ್ಪಟ್ಟಿದ್ದೇವೆ ಎಂದು ಭದುರಿಯಾ ಹೇಳಿದರು.ದೆಹಲಿಯಲ್ಲಿ ಇಂದು ನಡೆದ ವರ್ಚುವಲ್ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಚೀನಾದ ಯಾವುದೇ ದುಸ್ಸಾಹಸಕ್ಕೆ ಉತ್ತರ ನೀಡುವ ಸಾಮರ್ಥ್ಯ ಭಾರತೀಯ ಸೇನೆಗೆ ಇದೆ. ಎದುರಾಳಿಗಳು ಎಷ್ಟೇ ಬಲಶಾಲಿಯಾಗಿದ್ದರೂ ಅವರ ಯಾವುದೇ ಆಕ್ರಮಣಕಾರಿ ನಿಲುವಿಗೆ ತಕ್ಕ ಉತ್ತರ ನೀಡಲು ತಾವು ಸಿದ್ಧ ಎಂದೂ ಭದುರಿಯಾ ಹೇಳಿದ್ದಾರೆ.
ಇದನ್ನೂ ಓದಿ:ಚುನಾವಣಾಧಿಕಾರಿಯಾಗಿ ತೃತೀಯ ಲಿಂಗಿ: ಇತಿಹಾಸ ಸೃಷ್ಟಿಸಿದ ಬಿಹಾರಪೂರ್ವ ಲಡಾಖ್​ನಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಕುರಿತಂತೆ ಮಾತನಾಡಿದ ಅವರು, ಚೀನಾ-ಭಾರತ ನಡುವಿನ ಸೌಹಾರ್ದ ಮಾತುಕತೆ ಪ್ರಕ್ರಿಯೆ ಕಡಿಮೆ ಮತ್ತು ನಿಧಾನವಾಗುತ್ತಿದ್ದು, ಚೀನಾ ಸೇನೆ ಎಲ್ ಎಸಿ ಅತಿಕ್ರಮಣ ಮಾಡುವುದು ಸರಿಯಲ್ಲ. ಚೀನಾ ಸೇನೆಯ ನಿಲುವ ನಮ್ಮಲ್ಲಿ ಅಚ್ಚರಿಯನ್ನುಂಟು ಮಾಡಿದೆ. ನಾವು ಎಂದಿಗೂ ಇದನ್ನು ನಿರೀಕ್ಷಿಸಿರಲಿಲ್ಲ ಎಂದರು.ಗಡಿಯಲ್ಲಿ ಭಾರತೀಯ ಸೇನೆ ಸರ್ವ ಸನ್ನದ್ಧವಾಗಿದೆ. ಮುಂದಿನ ಮೂರು ತಿಂಗಳ ಲಡಾಖ್ ಪರಿಸ್ಥಿತಿ ಭಾರತ ಮತ್ತು ಚೀನಾ ನಡುವಿನೆ ಮಾತುಕತೆಯ ಮೇಲೆ ಆಧಾರಿತವಾಗಿರುತ್ತದೆ. ಇದು ಫಲಪ್ರದವಾಗುವ ವಿಶ್ವಾಸ ಇದೆ. ಚೀನಾ ಸರ್ಕಾರ ಕೂಡ ಮಾತುಕತೆಗೆ ಮುಂದಾಗಿರುವುದು ಸಕಾರಾತ್ಮಕ ನಡೆಯಾಗಿದೆ. ಆದರೂ ನಾವು ಸೇನೆ ನಿಯೋಜನೆಯಿಂದ ಹಿಂದೆ ಸರಿಯುವುದಿಲ್ಲನಮ್ಮ ಗಡಿಯಲ್ಲಿ ಸೈನಿಕರ ನಿಯೋಜಿಸುವ ಅಧಿಕಾರ ನಮಗಿದೆ ಎಂದರು.ಈಗಾಗಲೇ ನಾವು ರಫೇಲ್ ಯುದ್ಧ ವಿಮಾನಗಳು, ಚಿನೂಕ್ಸ್, ಅಪಾಚೆ ಹೆಲಿಕಾಪ್ಟರ್​ಗಳನ್ನು ಗಡಿಯಲ್ಲಿ ಕಾರ್ಯನಿಯೋಜಿಸಿದ್ದೇವೆ. ಮುಂದಿನ 3 ವರ್ಷಗಳಲ್ಲಿ ನಾವು ರಫೇಲ್ ಮತ್ತು ಎಲ್​ಸಿಎ ಮಾರ್ಕ್ 1 ಸ್ಕ್ವಾರ್ಡನ್​ಗಳು ಪೂರ್ಣ ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವುದನ್ನು ನೋಡಲಿದ್ದೇವೆ ಎಂದು ಮಾಹಿತಿ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
