ಕಾನ್ಪುರ:ಐಶ್ವರ್ಯ ರೈ, ಸಲ್ಮಾನ್‌ ಖಾನ್‌ ಹಾಗೂ ಅಜಯ್‌ ದೇವಗನ್‌ ನಟಿಸಿರುವ ಹಮ್‌ ದಿಲ್‌ ದೇಚು ಕೆ ಸನಮ್‌ ಚಿತ್ರ 1999ರಲ್ಲಿ ಭಾರಿ ಜನಪ್ರಿಯತೆ ಗಳಿಸಿತ್ತು. ನಟಿ ಬೇರೊಬ್ಬನನ್ನು ಪ್ರೀತಿಸಿ ಮನೆಯವರ ಒತ್ತಾಯದ ಮೇಲೆ ಇನ್ನಾರನ್ನೋ ಮದುವೆಯಾಗುತ್ತಾಳೆ. ಆದರೆ ಪತಿಗೆ ಆಕೆಯ ಪ್ರಿಯಕರನ ವಿಷಯ ತಿಳಿದು, ಹರಸಾಹಸಪಟ್ಟು ಆತನನ್ನು ಹುಡುಕಿ ಪತ್ನಿಯನ್ನು ಒಪ್ಪಿಸಲು ಮುಂದಾಗುತ್ತಾನೆ ಎನ್ನುವುದು ಈ ಸಿನಿಮಾದ ಕಥೆ.
ಆದರೆ ಇವೆಲ್ಲಾ ಚಿತ್ರದಲ್ಲಿ ಮಾತ್ರ ಸಾಧ್ಯಬಿಡಿ… ನಿಜ ಜೀವನದಲ್ಲಿ ಆಗಲ್ಲಾ ಎನ್ನುವವರೇ ಹೆಚ್ಚು. ಆದರೆ ನಿಜಕ್ಕೂ ಅಂಥ ಘಟನೆಗಳು ಆಗಾಗ್ಗೆ ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೊಂದು ಬೆಳಕಿಗೆ ಬರುತ್ತದೆ. ಅಂಥದ್ದೇ ಒಂದು ಘಟನೆ ನಡೆದಿರುವುದು ಉತ್ತರ ಪ್ರದೇಶದ ಗುರುಗ್ರಾಮದಲ್ಲಿ.
ಅಕೌಂಟೆಂಟ್ ಆಗಿರುವ ಪಂಕಜ್ ಶರ್ಮಾ ಮತ್ತು ಅವರ ಪತ್ನಿ ಕೋಮಲ್‌ ಅವರ ಕಥೆಯಿದು. ಇವರ ಮದುವೆ ಇದೇ ಮೇ ತಿಂಗಳಿನಲ್ಲಿ ನಡೆದಿದೆ. ಆದರೆ ಮೊದಲ ರಾತ್ರಿಯೇ ಪತ್ನಿ ಹತ್ತಿರ ಬರಲು ಒಪ್ಪಲಿಲ್ಲ. ಆಗ ಗಂಡ ಕಾರಣ ಕೇಳಿದಾಗ ಪತ್ನಿ ತನ್ನ ಲವ್‌ ಸ್ಟೋರಿ ಬಿಚ್ಚಿಟ್ಟಿದ್ದಾಳೆ. ಆ ದಿನದಿಂದ ಗಂಡನ ಮನೆಯವರ ಜತೆಯೂ ಆಕೆ ಬೆರೆಯುತ್ತಿರಲಿಲ್ಲ. ಇಷ್ಟವಿಲ್ಲದ ಮದುವೆ ಇದು ಎಂದು ಗಂಡನ ಮುಂದೆ ಹೇಳಿದ್ದಾಳೆ.
ಆಗಲೇ ಪಂಕಜ್‌ ಬಹುದೊಡ್ಡ ನಿರ್ಧಾರ ತೆಗೆದುಕೊಂಡು ಬಿಟ್ಟಿದ್ದಾರೆ. ಪತ್ನಿಯನ್ನು ಹೇಗಾದರೂ ಮಾಡಿ ಆಕೆಯ ಪತಿ ಪಿಂಟುವಿನ ಜತೆಗೆ ಸೇರಿಸುವುದೇ ಆ ನಿರ್ಧಾರ! ಕೊನೆಗೆ ತಮ್ಮ ನಿರ್ಧಾರವನ್ನು ಪತ್ನಿಯ ಅಪ್ಪ ಅಮ್ಮನಿಗೆ ಹೇಳಿದಾಗ ಅವರು ಶಾಕ್‌ ಆದರು. ಮಗಳಿಗೆ ಬುದ್ಧಿ ಹೇಳಲು ಮುಂದಾದರು. ಆದರೆ ಖುದ್ದು ಪಂಕಜ್‌ ಅವರೇ ಆಕೆಯ ಅಪ್ಪ-ಅಮ್ಮನ ಬಳಿ ಮಾತನಾಡಿ, ಈ ರೀತಿ ಇಷ್ಟವಿಲ್ಲದ ಮದುವೆಯಿಂದ ಏನೂ ಪ್ರಯೋಜನವಿಲ್ಲ. ಮನಸ್ಸು ಒಬ್ಬನಿಗೆ ದೇಹ ಮತ್ತೊಬ್ಬನಿಗೆ ಕೊಡುವುದು ಸುಲಭವಲ್ಲ ಎಂದು ಅತ್ತೆ-ಮಾವನಿಗೇ ಬುದ್ಧಿ ಹೇಳಿ ಪತ್ನಿಯ ಪ್ರಿಯಕರ ಬಳಿ ಹೋಗಿದ್ದಾರೆ.
ನಂತರ ಆಪ್ತ ಸಮಾಲೋಚಕರು ಪತಿ-ಪತ್ನಿ ಮತ್ತು ಪ್ರೇಮಿಯ ಜತೆ ಕೂತು ಮಾತುಕತೆ ನಡೆಸಿದ ಬಳಿಕ ಕೋಮಲ್‌ ತಾವು ಪಿಂಟುವನ್ನು ಬಿಟ್ಟು ಬರುವುದಿಲ್ಲ ಎಂದು ಅಂತಿಮ ನಿರ್ಧಾರ ಹೇಳಿದ್ದರಿಂದ ಪತಿ ಪಂಕಜ್‌ ಮರುಮಾತನಾಡದೇ ಅವರಿಬ್ಬರ ಮದುವೆಯನ್ನು ಖುದ್ದು ನಿಂತು ನೆರವೇರಿಸಿದ್ದಾರೆ!
ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದ್ದು, ಹಲವರು ಇಂಥ ಪತಿಯಂದಿರು ನಿಜ ಜೀವನದಲ್ಲಿಯೂ ಇರುತ್ತಾರಾ ಎಂದು ಅಚ್ಚರಿ ಪಟ್ಟಿದ್ದರೆ, ದೇವರಂಥ ಗಂಡ ಎಂದ್ರೆ ಇಂಥವರೇ ಇರಬೇಕು ಎಂದು ಇನ್ನು ಹಲವರು ಹೇಳಿದ್ದಾರೆ. ಕೆಲವರು ಮಾತ್ರ ಆತ ಪತ್ನಿಗೆ ಬುದ್ಧಿ ಹೇಳಿ ಸರಿದಾರಿಗೆ ತರಬೇಕಿತ್ತು ಎಂದು ಕಮೆಂಟ್‌ ಮಾಡಿದ್ದಾರೆ.
ದಲಿತನ ಮದ್ವೆಯಾದೆನೆಂದು ತಂದೆಯೇ ಅರೆನಗ್ನಗೊಳಿಸಿದರು… ಕರಾಳ ಘಟನೆ ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ…

ಏಕೈಕ ಪುತ್ರನ ಉಸಿರು ಇನ್ನೇನು ನಿಲ್ಲಲಿದೆ ಎಂದಾಗ ಅಪ್ಪ-ಅಮ್ಮ ತೆಗೆದುಕೊಂಡರು ಬಹು ದೊಡ್ಡ ನಿರ್ಧಾರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + seven =
Remember me
