ಲಖನೌ:ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರದಲ್ಲಿ ಪ್ರೇಮಿ ಬಂದು ‘ನಿಲ್ಲಿ…’ ಎನ್ನುವ ಮೂಲಕ ಮದುವೆಯನ್ನು ನಿಲ್ಲಿಸುವ ದೃಶ್ಯಗಳನ್ನು ಚಲನಚಿತ್ರಗಳಲ್ಲಿ ನೋಡಿರುತ್ತೇವೆ. ಆದರೆ ಅಸಲಿಗೆ ಅಂಥದ್ದೇ ಒಂದು ಘಟನೆ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ.ಮದುವೆ ಮಂಟಪದೊಳಗೆ ನುಗ್ಗಿದ ಪ್ರಿಯರಕನೊಬ್ಬ ತನ್ನ ಪ್ರೇಯಸಿಗೆ ಸಿಂಧೂರವನ್ನು ಇಟ್ಟಿದ್ದಾನೆ. ವರ ವಧುವಿಗೆ ಮಾಲೆ ಹಾಕುತ್ತಿದ್ದಂತೆಯೇ ಓಡೋಡಿ ಬಂದಿರುವ ಪ್ರಿಯಕರ ಜೇಬಿನಲ್ಲಿ ತಂದಿರುವ ಸಿಂಧೂರವಿಟ್ಟು ಅಲ್ಲಿಗೆ ಮದುವೆ ಕಾರ್ಯ ಮುಗಿಸಿದ್ದಾನೆ. ಮುಹೂರ್ತಕ್ಕೆ ಸರಿಯಾಗಿ ಸಿಂಧೂರವಿಟ್ಟಿದ್ದಾನೆ!ಇದರ ವಿಡಿಯೋ ಇದೀಗ ವೈರಲ್‌ ಆಗಿದ್ದು, ಜನರು ದಂಗುಬಡಿದಿದ್ದಾರೆ.ಅಸಲಿಗೆ ಆಗಿದ್ದೇನೆಂದರೆ ಈ ಯುವಕ, ಯುವತಿಯ ಪ್ರೇಮಿ. ಆತ ನೌಕರಿಗಾಗಿ ಬೇರೆ ನಗರಕ್ಕೆ ಹೋದ ಸಂದರ್ಭವನ್ನೇ ಕಾದು, ಯುವತಿಯನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಯುವತಿ ಬೇಡ ಎಂದರೂ ಕೇಳದೇ ಮದುವೆ ನಡೆದಿದೆ. ಈ ಸಂದರ್ಭದಲ್ಲಿ ಯುವತಿ ವಿಷಯವನ್ನು ಪ್ರೇಮಿಗೆ ಹೇಳಿದ್ದು, ಆತ ಮುಹೂರ್ತಕ್ಕೆ ಸರಿಯಾಗಿ ಬಂದು ಸಿಂಧೂರವಿಟ್ಟಿದ್ದಾನೆ. ಅಲ್ಲಿದ್ದವರು ತಡೆಯಲು ಯತ್ನಿಸಿದರೂ ಅದು ಸಫಲವಾಗಲಿಲ್ಲ.ಇಲ್ಲಿದೆ ನೋಡಿ ವಿಡಿಯೋ:
In UP's Gorakhpur, a spurned youth gatecrashed an ongoing wedding and applied vermilion to the to-be bride. Families and relatives tried to overpower him resulting in a major ruckus at the venue.@SaumyaShandily3@anantmsr@vandanaMishraP2pic.twitter.com/nZPKHl7VVi— Vivek Pandey | विवेक पांडेय (@VivekPandeygkp)December 7, 2021
In UP's Gorakhpur, a spurned youth gatecrashed an ongoing wedding and applied vermilion to the to-be bride. Families and relatives tried to overpower him resulting in a major ruckus at the venue.@SaumyaShandily3@anantmsr@vandanaMishraP2pic.twitter.com/nZPKHl7VVi
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
