ನವದೆಹಲಿ:ಮಹಾರಾಷ್ಟ್ರ ಬಿಕ್ಕಟ್ಟು ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ಬಂಡಾಯ ಶಾಸಕರಿಗೆ ಅನರ್ಹತೆಯ ನೋಟಿಸ್​ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಶಿವಸೇನಾ ಮುಖಂಡ ಏಕನಾಥ ಶಿಂದೆ ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ್ದಾರೆ. 16 ಶಾಸಕರಿಗೆ ಉಪಸಭಾಪತಿ ಹೊರಡಿಸಿದ್ದ ಅನರ್ಹತೆಯ ನೋಟಿಸ್​ ಅನ್ನು ಶಿಂಧೆ ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಿದ್ದಾರೆ. ತಮ್ಮ ಬದಲಿಗೆ ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರನ್ನು ಬೇರೆಯವನ್ನು ನೇಮಿಸಿರುವುದನ್ನೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಮಹಾ ವಿಕಾಸ್ ಆಘಾಡಿ ಸರ್ಕಾರದ ವಿರುದ್ಧ ಏಕನಾಥ ಶಿಂಧೆ ನೇತೃತ್ವದಲ್ಲಿ ಬಂಡಾಯ ಎದ್ದಿರುವ ಶಿವಸೇನೆಯ 16 ಜನ ಶಾಸಕರಿಗೆ ಮಹಾರಾಷ್ಟ್ರ ಉಪ ಸ್ಪೀಕರ್​ ನರಹರಿ ಜಿರ್ವಾಲ್ ಅನರ್ಹತೆಯ ನೋಟಿಸ್ ಜಾರಿ ಮಾಡಿದ್ದರು. ಜೂನ್​ 27ರೊಳಗೆ ಉತ್ತರಿಸುವಂತೆ ಸೂಚಿಸಿದ್ದರು. ಇದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಸುಪ್ರೀಂಕೋರ್ಟ್​ಗೆ ಸದ್ಯ ರಜೆ ಇದ್ದು, ರಜಾಕಾಲದ ಪೀಠದ ಮುಂದೆ ಅರ್ಜಿಯ ವಿಚಾರಣೆ ಇಂದು ಬರುವ ಸಾಧ್ಯತೆ ಇದೆ.
ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ನಲುಗುವಂತೆ ಮಾಡಿದ ಶಿಂಧೆ ಸಾಕಷ್ಟು ಸಂಖ್ಯೆಯ ನಿಷ್ಠಾವಂತ ಶಾಸಕರೊಂದಿಗೆ ಮುಂಬೈಯನ್ನು ತೊರೆದ ಒಂದು ದಿನದ ನಂತರ ಚೌಧರಿ ಅವರನ್ನು ಆ ಸ್ಥಾನಕ್ಕೆ ಅಜಯ್ ಚೌದರಿಯನ್ನು ಶಿವಸೇನೆ ಹೆಸರಿಸಿತ್ತು.
ಪತನದ ಅಂಚಲ್ಲಿ ಮಹಾರಾಷ್ಟ್ರ ಸರ್ಕಾರ- ಇ.ಡಿ ವಿರುದ್ಧ ಬೀದಿಯಲ್ಲಿ ಕೈ ನಾಯಕರು: ಮಾಲ್ಡೀವ್ಸ್​ಗೆ ಹಾರಿದ ಪ್ರಿಯಾಂಕಾ!

‘ಮಹಾ’ ರೆಬೆಲ್​ಗಳ ವಿಷ್ಯವೇ ನಂಗೆ ಗೊತ್ತಿಲ್ಲ, ಲಕ್ಷ್ಮಿ ತಾನಾಗೇ ಬಂದ್ರೆ ಬೇಡ ಅನ್ನೋಕೆ ಆಗತ್ತಾ? ಎಂದ ಅಸ್ಸಾಂ ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
