ಮುಂಬೈ:ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಅವರನ್ನು ಗುಂಡಿಟ್ಟು ಕೊಲೆ ಮಾಡಿರುವ ಬೆನ್ನಲ್ಲೇ ಇದೀಗ ಮಾಜಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಮನು ಪಂಜಾಬಿ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ನಾವು ಕೇಳದೇ ಇರುವಷ್ಟು ಹಣ ಕೊಡದೇ ಇದ್ದಲ್ಲಿ ಸಿದ್ದು ಮೂಸೆವಾಲಾ ಅವರಂತೆ ಗುಂಡಿಕ್ಕಿ ಸಾಯಿಸುವುದಾಗಿ ಕೊಲೆ ಬೆದರಿಕೆ ಹಾಕಲಾಗಿದೆ.
ಹಿಂದಿಯ ‘ಬಿಗ್ ಬಾಸ್ 10’ ರ ಸ್ಪರ್ಧಿ ಮನು ಪಂಜಾಬಿ ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಸಿಧು ಮೂಸೆವಾಲಾ ರೀತಿಯಲ್ಲಿಯೇ ನಿನ್ನನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಬಂದಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಕೂಡ ಪೋಸ್ಟ್ ಮಾಡಿದ್ದಾರೆ. 10 ಲಕ್ಷ ರೂಪಾಯಿಗಳನ್ನು ನೀಡುವಂತೆ ಇ-ಮೇಲ್ ಕಳುಹಿಸಿದ್ದ ಎಂದು ತಿಳಿದು ಬಂದಿದೆ.
ದೂರನ್ನು ಸ್ವೀಕರಿಸಿದ ತಕ್ಷಣ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಬೆದರಿಕೆ ಹಾಕಿದ್ದ 31 ವರ್ಷದ ವ್ಯಕ್ತಿಯನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ. ಇದಕ್ಕಾಗಿ ಮನು ಪಂಜಾಬಿ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಈ ನಡುವೆ ಕಳೆದ ಮೇ 29ರಂದು ಗುಂಡಿಗೆ ಬಲಿಯಾದ ಸಿಧು ಮೂಸೆವಾಲಾ ಅವರ ತನಿಖೆ ಚುರುಕುಗೊಳಿಸಿರುವ ಪೊಲೀಸರು ಪ್ರಿಯವ್ರತ್ ಫೌಜಿ ಮತ್ತು ಕುಲದೀಪ್ ಅಲಿಯಾಸ್ ಕಾಶಿಶ್ ಎಂಬುವವರನ್ನು ಬಂಧಿಸಿದ್ದಾರೆ. ಶೂಟರ್‌ಗಳು 58 ಬಾರಿ ತಮ್ಮ ಅಡಗುತಾಣಗಳನ್ನು ಬದಲಾಯಿಸಿರುವುದು ತನಿಖೆಯಿಂದ ಬಯಲಾಗಿದೆ.
ಹತ್ಯೆ ಬಳಿಕ ಇವರು ಸಾರ್ವಜನಿಕ ಸಾರಿಗೆ ಅಥವಾ ಕಾರನ್ನು ಬಳಸದೇ ಮುಂಡ್ರಾ ಬಂದರಿಗೆ ತೆರಳಿದ್ದರು. ಅಲ್ಲಿ ದೆಹಲಿ ಪೊಲೀಸರು ಬರೋಯ್‌ನಲ್ಲಿರುವ ಖರಿ-ಮಿಥಿ ರಸ್ತೆಯಿಂದ ಇವರನ್ನು ಬಂಧಿಸಿದ್ದಾರೆ.
ಮೊದಲು ರುಂಡ ಕತ್ತರಿಸಿ, ಇದು ದೇವರ ನಿಯಮ ಎಂದೇ ಹೇಳಿಕೊಡುತ್ತಾರೆ: ರಾಜ್ಯಪಾಲ ಆರೀಫ್ ಖಾನ್​

ಯಶ್​ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್​: ಕೆಜಿಎಫ್​- 2 ಇನ್ಮುಂದೆ ನೋಡ್ಬೋದು ಉಚಿತವಾಗಿ!

‘ಆ ಇನ್ಸ್‌ಪೆಕ್ಟರ್‌ನ ರೌಡಿಸಂ ನನ್ನತ್ರ ನಡಿಯಲ್ಲ, ಎಲ್ಲಾ ಮಾಡೇ ಬಂದವ ನಾನು… ಮೂರನೇ ಕಣ್ಣು ಬಿಟ್ರೆ ಅಷ್ಟೇ..’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + ten =
Remember me
