ನ್ಯೂಯಾರ್ಕ್​:ಸಾಮಾಜಿಕ ಜಾಲತಾಣದಲ್ಲಿ ಮನಸ್ಸಿಗೆ ಬಂದ ವಿಷಯಗಳನ್ನು ಶೇರ್​ ಮಾಡುವುದನ್ನು ಕೆಲವರು ನೋಡಬಾರದು ಎಂದು ಅಂದುಕೊಳ್ಳುವವರು ಅನೇಕರು. ಅದರಲ್ಲಿಯೇ ಅಪ್ಪ-ಅಮ್ಮ ಸೇರಿದಂತೆ ಸಂಬಂಧಿಕರಿಗೆ ತಮ್ಮ ಜಾಲತಾಣದ ಸಿಗಬಾರದು ಎಂದುಕೊಂಡು ಅವರನ್ನು ಬ್ಲಾಕ್​ ಮಾಡುತ್ತಾರೆ. ಹೀಗೆಯೇ ಮಗನೊಬ್ಬ ಅಪ್ಪನನ್ನೇ ಬ್ಲಾಕ್​ ಮಾಡಿ ಪೇಚಿಗೆ ಸಿಲುಕಿರುವ ಘಟನೆ ಇದು.
ಇಲ್ಲಿ ಯುವಕನೊಬ್ಬ ತನ್ನ ತಂದೆಯನ್ನು ಫೇಸ್​ಬುಕ್​ ಖಾತೆಯಿಂದ ಬ್ಲಾಕ್​ ಮಾಡಿದ್ದ. ಇದು ಅಪ್ಪನಿಗೆ ತಿಳಿಯಿತು. ಮಗನಿಗೆ ಬುದ್ಧಿ ಕಲಿಸಲು ಯುವತಿಯೊಬ್ಬಳ ಹೆಸರಿನಲ್ಲಿ, ಒಂದು ಸುಂದರಿಯ ಫೋಟೋ ಹಾಕಿಕೊಂಡು ಫೇಕ್​ ಅಕೌಂಟ್​ ಸೃಷ್ಟಿ ಮಾಡಿ ಮಗನ ಜತೆ ಚಾಟ್​ ಮಾಡತೊಡಗಿದ. ಈ ಯುವತಿಯನ್ನು ನೋಡಿ ಮಗ ಮನಸೋತು ಗಾಢವಾಗಿ ಪ್ರೀತಿಸಲು ಶುರು ಮಾಡಿದ.
ಹೀಗೆ ಅನೇಕ ತಿಂಗಳು ಇಬ್ಬರ ನಡುವೆ ಪ್ರೀತಿ, ಪ್ರೇಮದ ಸಂಭಾಷಣೆ, ಕೆಲವು ಫೋಟೋಗಳ ಹಂಚಿಕೆ ಎಲ್ಲವೂ ನಡೆಯಿತು. ಆ ಯುವತಿಯನ್ನು ಭೇಟಿ ಮಾಡುವ ಇಚ್ಛೆಯನ್ನು ಮಗ ವ್ಯಕ್ತಪಡಿಸಿದಾಗ ಕೊನೆಗೆ ಮಗನಿಗೆ ತಿಳಿದದ್ದು ಈ ಯುವತಿ ತನ್ನ ಅಪ್ಪನೇ ಎಂದು!
ಇದು ಇತ್ತೀಚಿಗೆ ಬಿಡುಗಡೆಯಾದ “ಐ ಲವ್ ಮೈ ಡ್ಯಾಡ್” ಎಂಬ ಹಾಲಿವುಡ್ ಚಿತ್ರದ ಕಥೆ. 31 ವರ್ಷದ ಜೇಮ್ಸ್ ಮೊರೋಸಿನ್ ಎಂಬ ನಿರ್ಮಾಪಕ ಈ ಚಿತ್ರವನ್ನು ತೆಗೆದಿದ್ದು, ಇದರಲ್ಲಿ ಬೆಕ್ಕಾ ಎಂಬ ಹುಡುಗಿಯನ್ನು ಹೀರೋ ಲವ್​ ಮಾಡುವ ಕಥೆ ಇದೆ. ಆದರೆ ಅಸಲಿಗೆ ಇದು ಸಿನಿಮಾ ಕಥೆಯಲ್ಲ, ಬದಲಿಗೆ ಜೇಮ್ಸ್ ಮೊರೋಸಿನ್​ನ ನೈಜ ಕಥೆ.
ಈ ಕುರಿತು ಜೇಮ್ಸ್ ಮೊರೋಸಿನ್​ ಈಗ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಇದು ನನ್ನದೇ ಕಥೆ. ನನ್ನ ಅಪ್ಪನನ್ನು ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್​ ಮಾಡಿದ ಬಳಿಕ ಬೆಕ್ಕಾ ಎಂಬ ಯುವತಿಯ ಹೆಸರಿನಲ್ಲಿ ಖಾತೆ ತೆರೆದು ಚಾಟ್​ ಮಾಡಲು ಶುರು ಮಾಡಿದ್ದರು. ನಾನು ನಿಜಕ್ಕೂ ಹುಡುಗಿಯೇ ಎಂದುಕೊಂಡು ಲವ್​ ಮಾಡಿದ್ದೆ. ಕೊನೆಗೆ ನಿಜ ಗೊತ್ತಾಗಿ ಆಕಾಶವೇ ಕಳಚಿ ಬಿದ್ದಂತಾಯಿತು ಎಂದಿದ್ದಾರೆ.
ಆದ್ದರಿಂದ ಯಾವುದೇ ಹುಡುಗಿಯ ಪ್ರೊಫೈಲ್​ನಿಂದ ಫ್ರೆಂಡ್​ ರಿಕ್ವೆಸ್ಟ್​ ಬಂದರೆ ಸರಿಯಾಗಿ ಪರಿಶೀಲಿಸಿ ಮುಂದುವರೆಯಿರಿ, ಇಲ್ಲದಿದ್ದರೆ ನನ್ನ ಕಿಲಾಡಿ ಅಪ್ಪನಂಥವರೂ ಇರುತ್ತಾರೆ ಎಂದು ಜೇಮ್ಸ್ ಮೊರೋಸಿನ್ ಚಟಾಕಿ ಹಾರಿಸಿದ್ದಾರೆ.
‘ಹಿಂದೂಗಳಲ್ಲದವರಿಗೆ ಅವಕಾಶ ಕೊಡಬಾರ್ದು ಅಂತ ನಿಮ್​ ಕಾಂಗ್ರೆಸ್​ನವರೇ ಮಾಡಿರೋ ರೂಲ್ಸ್​ ಇಲ್ಲಿದೆ ನೋಡ್ಕೋಳಿ…’

ಕೈಲಾಸದಲ್ಲಿಯೂ ನಿತ್ಯಾನಂದ ಲೈಂಗಿಕ ದೌರ್ಜನ್ಯ? ವಿದೇಶಿ ಶಿಷ್ಯೆಯಿಂದ ಮೇಲ್​ ಮೂಲಕ ದೂರು ದಾಖಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + one =
Remember me
