ಮುಂಬೈ:ಬಾಲಿವುಡ್‌ನ ಪ್ರಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಅವರು ತಮ್ಮ ನೃತ್ಯ ನಿರ್ದೇಶನದ ಮೂಲಕ ಹೆಸರು ಮಾಡಿದವರು. ಆದರೆ ಈಗ ಅವರ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾರೆ. ಇದಕ್ಕೆ ಕಾರಣ, ಅವರು ಇದ್ದಕ್ಕಿದ್ದಂತೆಯೇ ತಮ್ಮ ಫೋಟೋ ಹಾಕಿರುವುದು!
ಅವರ ಫೋಟೋದಲ್ಲಿ ಅಂಥದ್ದೇನಿದೆ ಎಂದರೆ ಅವರು ಒಂದಲ್ಲ, ಎರಡಲ್ಲ ಬರೋಬ್ಬರಿ 40 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ! ಕಳೆದ ವರ್ಷ 105 ಕೆಜಿ ಇದ್ದವರು ಈಗ 65 ಕೆಜಿ ಆಗಿದ್ದಾರೆ. ತಮ್ಮ ಹಳೆಯ ಮತ್ತು ಹೊಸ ಫೋಟೋಗಳನ್ನು ಪತಿಯ ಜತೆ ಶೇರ್‌ ಮಾಡಿಕೊಂಡಿರುವ ಅವರು ತೂಕ ಇಳಿಸಿಕೊಳ್ಳಲು ತಾವು ಪಟ್ಟಿರುವ ಶ್ರಮಗಳ ಕುರಿತು ವಿವರಣೆ ನೀಡಿದ್ದಾರೆ. ಜತೆಗೆ ತೂಕ ಹೆಚ್ಚು ಇದ್ದುದರಿಂದ ತಾವು ಎಷ್ಟು ಮಾನಸಿಕವಾಗಿ ಸಮಸ್ಯೆ ಎದುರಿಸಬೇಕಾಯಿತು ಎಂದೂ ಹೇಳಿದ್ದಾರೆ.
ಅಂದಹಾಗೆ ಇವರ ಹೆಸರು ಲೀಸೆಲ್. 40 ಕೆಜಿ ತೂಕ ಕಡಿಮೆ ಮಾಡಿಕೊಂಡಿರುವ ಇವರಿಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ. ಈ ಬಗ್ಗೆ ಬರೆದುಕೊಂಡಿರುವ ಅವರು, ಇದಕ್ಕೆ ತುಂಬ ಪರಿಶ್ರಮ ಬೇಕಾಗುತ್ತದೆ. ಈ ದೊಡ್ಡ ಹೋರಾಟ ನಡೆಸಲೇಬೇಕು ಎಂದು ತೀರ್ಮಾನಿಸಿದ್ದೆ. ಮೊದಲು ಅದನ್ನು ಮನಸ್ಸಿಗೆ ತಂದುಕೊಂಡೆ. ಏಕೆಂದರೆ ಮನಸ್ಸು ಮಾಡದ ಹೊರತೂ ಯಾವುದೂ ಸಾಧ್ಯವಿಲ್ಲ. ಆದ್ದರಿಂದ ತೂಕ ಇಳಿಕೆಗೆ ಬೇಕಾದ ಡಯೆಟ್‌, ವ್ಯಾಯಾಮ ಎಲ್ಲವನ್ನೂ ಮಾಡಿ ಇಂದು ಹೀಗೆ ಆಗಿದ್ದೇನೆ ಎಂದಿದ್ದಾರೆ.
ಪತ್ನಿಯ ಶ್ರಮದ ಬಗ್ಗೆ ರೇಮೋ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಲೀಸೆಲ್‌ ಹೋರಾಡಿದ್ದನ್ನು ನಾನು ಕಂಡಿದ್ದೇನೆ. ಅಸಾಧ್ಯವಾಗಿದ್ದನ್ನು ಆಕೆ ಸಾಧಿಸಿ ತೋರಿಸಿದ್ದಾಳೆ. ಇದೆಲ್ಲವೂ ಮನಸ್ಸಿಗೆ ಸಂಬಂಧ ಪಟ್ಟಿದ್ದಾಗಿದೆ. ನೀನು ಸಾಧಿಸಿದ್ದೀಯ. ನಿನ್ನ ಬಗ್ಗೆ ಹೆಮ್ಮೆ ಆಗುತ್ತದೆ. ನೀನು ನನಗಿಂತಲೂ ಗಟ್ಟಿಯಾಗಿದ್ದೀಯ. ನನಗೆ ನೀನೇ ಸ್ಫೂರ್ತಿ ಎಂದು ಅವರು ಪತ್ನಿಯನ್ನು ಬಣ್ಣಿಸಿದ್ದಾರೆ.

‘ಮೀ ಟೂ’ ಕೇಸ್‌ನಲ್ಲಿ ನೂತನ ಸಿಎಂ: ಐಎಎಸ್‌ ಅಧಿಕಾರಿಗೆ ಮೆಸೇಜ್‌ ಕಳುಹಿಸಿದ್ದ ಸಿಂಗ್‌ಗೆ ಬಂತು ಗ್ರಹಚಾರ

ದ್ವಿತೀಯ ಪಿಯುಸಿ ರಿಸಲ್ಟ್‌- ಚಾಲೆಂಜ್ ಮಾಡಿ ಪರೀಕ್ಷೆ ತೆಗೆದುಕೊಂಡವರಲ್ಲಿ 36 ವಿದ್ಯಾರ್ಥಿಗಳು ಫೇಲ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 18 =
Remember me
