ನವದೆಹಲಿ:ನಾವು ಯಾರಿಗಾದರೂ ಫೋನ್​ನಿಂದ ಕರೆ ಮಾಡಿದಾಗ ಕೋವಿಡ್ -19 ಜಾಗೃತಿ ಕುರಿತು ಕಾಲರ್ ಟ್ಯೂನ್​ನಲ್ಲಿ ಅಮಿತಾಭ್​ ಬಚ್ಚನ್​ ಅವರ ಧ್ವನಿ ಕೇಳಿಸುತ್ತದೆ. ಕೋವಿಡ್​ ಕುರಿತು ಜಾಗೃತಿ ತೆಗೆದುಕೊಳ್ಳುವಂತೆ ಅದರಲ್ಲಿ ಅಮಿತಾಭ್​ ಹೇಳಿದ್ದಾರೆ. ಆದರೆ ಇದನ್ನು ತೆಗೆದುಹಾಕುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್​) ಸಲ್ಲಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿರುವ ರಾಕೇಶ್ ಎಂಬ ವ್ಯಕ್ತಿ ಈ ಅರ್ಜಿ ಸಲ್ಲಿಸಿದ್ದಾರೆ.
ಅಮಿತಾಭ್​ ಬಚ್ಚನ್​ ಅವರ ಧ್ವನಿಗೆ ಈ ಪರಿಯ ಆಕ್ಷೇಪ ಏಕೆ ಎಂದು ಅರ್ಜಿಯಲ್ಲಿ ನಮೂದಿಸಿರುವ ರಾಕೇಶ್​ ಅವರು, ಅಮಿತಾಭ್​ ಅವರಿಗೆ ಈ ಧ್ವನಿಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಶುಲ್ಕವನ್ನು ಪಾವತಿಸುತ್ತದೆ. ಆದರೆ ರಾಷ್ಟ್ರಕ್ಕೆ ಶ್ರೇಷ್ಠ ಸೇವೆ ಸಲ್ಲಿಸುತ್ತಿರುವ ಕೆಲವು ಕರೊನಾ ವಾರಿಯರರ್ಸ್​ ಅನ್ನು ನಿರ್ಲಕ್ಷಿಸಿ ಅಮಿತಾಭ್​ ಬಚ್ಚನ್​ ಅವರಿಗೆ ಹಣ ನೀಡುವ ಮೂಲಕ ಈ ರೀತಿ ಜಾಗೃತಿ ಮೂಡಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಕರೊನಾದ ಈ ಸಮಯದಲ್ಲಿ ಎಷ್ಟೋ ಬಡವರಿಗೆ ಹಣಕಾಸಿನ ಅಗತ್ಯವಿದೆ. ಕೋವಿಡ್​ ವಾರಿಯರ್ಸ್​ ಅಮೋಘ ಕೊಡುಗೆಗಳನ್ನು ನೀಡುತ್ತಿದ್ದಾರೆ. ಕೆಲವು ಕರೊನಾ ವಾರಿಯರ್ಸ್​ ತಮ್ಮ ದುಡುಮೆಯ ಹಣವನ್ನು ಅಗತ್ಯ ಇರುವವರಿಗೆ ನೀಡುತ್ತಿದ್ದಾರ. ಇಂಥವರಿಗೆ ನೆರವಾಗುವ ಬದಲು ನಟನಿಗೆ ಈ ರೀತಿ ಶುಲ್ಕವನ್ನು ಪಾವತಿಸುವುದು ಸರಿಯಲ್ಲ ಎನ್ನುವುದು ಅರ್ಜಿದಾರರ ವಾದ.
ಆದರೆ ನಟ ಅಮಿತಾಭ್​ ಬಚ್ಚನ್​ ಸಮಾಜ ಸೇವಕರಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿಲ್ಲ, ಇವರು ಕರೊನಾ ವಾರಿಯರ್ಸ್​ ಕೂಡ ಅಲ್ಲ. ಆದ್ದರಿಂದ ಅವರ ಧ್ವನಿ ಏಕೆ ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ.
ಅರ್ಜಿದಾರರ ಪರವಾಗಿ ವಕೀಲರಾದ ಎ.ಕೆ. ದುಬೆ ಮತ್ತು ಪವನ್ ಕುಮಾರ್ ವಾದ ಮಂಡಿಸುತ್ತಿದ್ದಾರೆ. ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠದ ಮುಂದೆ ಈ ಅರ್ಜಿ ಇಂದು ವಿಚಾರಣೆಗೆ ಬಂದಿತ್ತು. ವಿಚಾರಣೆಯನ್ನು ಕೋರ್ಟ್​ ಜನವರಿ 18ಕ್ಕೆ ಮುಂದೂಡಿದೆ.
ಪತ್ನಿಗೊಂದು, ಆಕೆಗೊಂದು ಮನೆ: ಹೆಂಡ್ತಿ ಕೈಲೇ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಕೊಪ್ಪಳದ ಇಂಜಿನಿಯರ್​!

‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’

ಅನೇಕ ಮಕ್ಕಳಲ್ಲಿ ಇಬ್ಬರಿಗೆ ಮಾತ್ರ ವಿಲ್​ ಮಾಡಿದರೆ ಮುಂದೆ ಸಮಸ್ಯೆ ಆಗತ್ತಾ?

‘ಅಲ್ಲಾ ಸ್ವಾಮಿ… 10 ವರ್ಷ ನಿಮ್ದೇ ಸರ್ಕಾರ ಇತ್ತಲ್ಲ… ಆವಾಗ್ಯಾಕೆ ಭಾರತ ರತ್ನ ಕೊಟ್ಟಿಲ್ಲ?’

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − 3 =
Remember me
