ಚೆನ್ನೈ:ಮುತ್ತೈದೆಯ ಗುರುತುಗಳಲ್ಲಿ ಒಂದಾಗಿರುವ ಮಂಗಳಸೂತ್ರಕ್ಕೆ ಹಿಂದೂ ಧರ್ಮದಲ್ಲಿ ಅದರದ್ದೇ ಆದ ಒಂದು ಪವಿತ್ರ ಭಾವನೆಯಿದೆ. ಆದರೆ ಇಂದಿನ ಕೆಲವು ಯುವತಿಯರಿಗೆ ಅದು ಕೇವಲ ಫ್ಯಾಷನ್. ಮಂಗಳಸೂತ್ರ ಹಾಕಿದರೇನು, ಬಿಟ್ಟರೇನು ಎನ್ನುವ ಪ್ರಶ್ನೆ ಅವರದ್ದು. ಇಂಥ ಯುವತಿಯರು, ಮಹಿಳೆಯರಿಗೆ ಇದೀಗ ಶಾಕಿಂಗ್​ ಎನ್ನುವಂಥ ತೀರ್ಪೊಂದು ಹೈಕೋರ್ಟ್​ನಿಂದ ಹೊರಬಂದಿದೆ.
ಪತಿ ಕಟ್ಟಿದ ಮಂಗಳಸೂತ್ರವನ್ನು ಆತ ಬದುಕಿರುವಾಗಲೇ ತೆಗೆದು ಇಡುವುದು, ಗಂಡನಿಗೆ ನೀಡುವ ಅತಿ ಹೆಚ್ಚಿನ ಮಾನಸಿಕ ಕ್ರೌರ್ಯ ಎಂದು ಮದ್ರಾಸ್​ ಹೈಕೋರ್ಟ್​ ಹೇಳಿದೆ. ಪ್ರೊಫೆಸರ್​ ಒಬ್ಬರು ತಮ್ಮ ಪತ್ನಿಗೆ ವಿಚ್ಛೇದನ ನೀಡಲು ಅನುಮತಿ ನೀಡಿರುವ ಕೋರ್ಟ್​, ಮಂಗಳಸೂತ್ರದ ಮಹತ್ವವನ್ನು ಸಾರಿ ಹೇಳಿದೆ. “ಮಹಿಳೆಯ ಕುತ್ತಿಗೆಯಲ್ಲಿನ ತಾಳಿಯು ಪವಿತ್ರವಾದ ವಿಷಯವಾಗಿದೆ. ಇದು ವೈವಾಹಿಕ ಜೀವನದ ನಿರಂತರತೆಯನ್ನು ಸೂಚಿಸುತ್ತದೆ. ಗಂಡನ ಸಾವಿನ ನಂತರವಷ್ಟೇ ಅದನ್ನು ತೆಗೆದುಹಾಕಲಾಗುತ್ತದೆ. ಆದರೆ ಆತ ಬದುಕಿರುವಾಗಲೇ ತಾಳಿ ತೆಗೆದು ಇಡುವುದು ಮಾನಸಿಕ ಕ್ರೌರ್ಯದ ಪರಾಕಾಷ್ಠೆಯಾಗಿದೆ. ಇದು ಪತಿಗೆ ಸಂಕಟವನ್ನು ಉಂಟು ಮಾಡುವುದು ಮಾತ್ರವಲ್ಲದೇ, ಭಾವನೆಗಳನ್ನು ನೋಯಿಸಬಹುದು’ ಎಂದು ಕೋರ್ಟ್​ ಹೇಳಿದೆ.
ಏನಿದು ಪ್ರಕರಣ?ಈರೋಡ್​ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಸಿ. ಶಿವಕುಮಾರ್ ಎಂಬುವವರು ವಿಚ್ಛೇದನಕ್ಕೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿ.ಎಂ. ವೇಲುಮಣಿ ಮತ್ತು ಎಸ್​. ಸೌಂದರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಒಂದು ಮಹತ್ವದ ಆದೇಶ ಹೊರಡಿಸಿದೆ.
ಕೌಟುಂಬಿಕ ಕೋರ್ಟ್​ ತಮಗೆ ವಿಚ್ಛೇದನ ನಿರಾಕರಿಸಿದ್ದನ್ನು ಪ್ರಶ್ನಿಸಿ ಪ್ರೊಫೆಸರ್​ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು. ಆದರೆ ಈ ಸಮಯದಲ್ಲಿ ಪತ್ನಿ ತನ್ನ ತಾಳಿ ಸರವನ್ನು ತೆಗೆದು ಇಟ್ಟಿರುವ ಬಗ್ಗೆ ನ್ಯಾಯಮೂರ್ತಿಗಳಿಗೆ ತಿಳಿಯಿತು. ತಾನು ತಾಳಿಯನ್ನು ಉಳಿಸಿಕೊಂಡು ಸರವನ್ನು ಮಾತ್ರ ತೆಗೆದಿದ್ದೇನೆ, ಅದನ್ನು ಬ್ಯಾಂಕ್​ ಲಾಕರ್​ನಲ್ಲಿ ಇಟ್ಟಿದ್ದೇನೆ ಎಂದು ಪತ್ನಿ ಕೋರ್ಟ್​ನಲ್ಲಿ ವಾದಿಸಿದ್ದಳು. ಆದರೆ, ಈ ವಾದವನ್ನು ಕೋರ್ಟ್​ ಮಾನ್ಯ ಮಾಡಲಿಲ್ಲ.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7 ಪ್ರಕಾರ ತಾಳಿ ಕಟ್ಟುವ ಅಗತ್ಯವಿಲ್ಲ ಎಂದು ಪತ್ನಿಯ ಪರ ವಕೀಲರು ವಾದಿಸಿದರು. ಆಕೆ ತಾಳಿಯನ್ನು ತೆಗೆದಿದ್ದರೂ ಅದೇನೂ ವೈವಾಹಿಕ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಕೀಲರು ಹೇಳಿದರು. ಅದಕ್ಕೆ ನ್ಯಾಯಮೂರ್ತಿಗಳು, ಯಾವುದೇ ವಿವಾಹಿತ ಹಿಂದೂ ಮಹಿಳೆ ಗಂಡ ಜೀವಂತ ಇರುವಾಗ ತಾಳಿಯನ್ನು ತೆಗೆಯುವುದಿಲ್ಲ ಎಂಬುದು ತಿಳಿದ ಸತ್ಯವಾಗಿದೆ ಎಂದರು.
ಇದು ತಾಳಿಯ ವಿಷಯವಾದರೆ, ಪತಿಯ ವಿರುದ್ಧ ಪತ್ನಿ ವಿನಾಕಾರಣ ಅನೈತಿಕ ಸಂಬಂಧದ ಆರೋಪ ಮಾಡಿರುವುದು ನ್ಯಾಯಮೂರ್ತಿಗಳ ಗಮನಕ್ಕೆ ಬಂದಿತು. 2011ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸವಾಗಿದ್ದರೂ, ಪತಿಯನ್ನು ಸೇರಲು ಆಕೆ ಯಾವುದೇ ರೀತಿಯ ಪ್ರಯತ್ನ ಮಾಡದೇ ಇರುವುದೂ ಕೋರ್ಟ್​ ಗಮನಕ್ಕೆ ಬಂತು. ಇವೆಲ್ಲಾ ಪರಿಗಣನೆಗೆ ತೆಗೆದುಕೊಂಡರೆ ಅರ್ಜಿದಾರ ಪ್ರೊಫೇಸರ್​ ವಿಚ್ಛೇದನಕ್ಕೆ ಅರ್ಹರು ಎಂದ ಕೋರ್ಟ್​, ಅವರ ಅರ್ಜಿಯನ್ನು ಮಾನ್ಯ ಮಾಡಿ ಡಿವೋರ್ಸ್​ಗೆ ಅನುಮತಿ ನೀಡಿದೆ. ಡಿವೋರ್ಸ್​ಗೆ ನಿರಾಕರಿಸಿದ ಕೌಟುಂಬಿಕ ಕೋರ್ಟ್​ ಆದೇಶವನ್ನು ರದ್ದು ಮಾಡಿದೆ.(ಏಜೆನ್ಸೀಸ್​)
ಮದ್ವೆಯಾಗ್ತೇನೆಂದು ನಂಬಿಸಿ ಟೆಕ್ಕಿಯಿಂದ 14 ಬಾರಿ ಗರ್ಭಪಾತ! ಡೆತ್​ನೋಟ್​ನಲ್ಲಿ ಬೆಚ್ಚಿಬೀಳಿಸೋ ಮಾಹಿತಿ

ಉನ್ನತ ಹುದ್ದೆ ಆಸೆ ತೋರಿಸಿ ಕೋಟಿ ಕೋಟಿ ಹಣ ಗುಳುಂ: ಸ್ಯಾಂಡಲ್​ವುಡ್​ ನಟ ಅರೆಸ್ಟ್​- ಕೇಸ್​ಗಳು ಒಂದಲ್ಲಾ… ಎರಡಲ್ಲಾ…

VIDEO: ‘ನೀನು ಸಿನಿಮಾಕ್ಕೆ ಸೆಲೆಕ್ಟ್​ ಆಗ್ಲಿಲ್ಲ, ಆದ್ರೆ ನನ್​ ಹೆಂಡ್ತಿ ಥರ ಇದ್ರೆ ತಿಂಗಳಿಗೆ 25 ಲಕ್ಷ ಕೊಡುವೆ ಅಂದಿದ್ದ ಉದ್ಯಮಿ!’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 18 =
Remember me
