ಚೆನ್ನೈ:ಸರ್ಕಾರಿ ಭೂಮಿಯ ಅಕ್ರಮ ಮಾರಾಟ ಮತ್ತು ಗಾಂಜಾ ಮಾರಾಟದ ಕುರಿತು ವರದಿ ಮಾಡುತ್ತಿದ್ದ ತಮಿಳುನಾಡಿನ ಟಿ.ವಿ. ಚಾನೆಲ್​ ಒಂದರ ವರದಿಗಾರನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ತಮಿಳನ್ ಟಿವಿ ಸುದ್ದಿವಾಹಿನಿಯ 29 ವರ್ಷದ ಪುತ್ತು ನೆಲ್ಲೋರ್ ನಿವಾಸಿ ಮೋಸೆಸ್ ಎಂಬ ಯುವಕ ಕೊಲೆಯಾಗಿದ್ದಾರೆ. ಈ ಘಟನೆ ತಮಿಳುನಾಡಿನ ಕುಂದ್ರತ್ತೂರ್‌ನಲ್ಲಿ ನಡೆದಿದೆ.
ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವರದಿ ಮಾಡಿದ್ದರಿಂದ ತಮ್ಮ ಮಗನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂದು ಮೋಸೆಸ್​ ಅವರ ಕುಟುಂಬಸ್ಥರು ಹೇಳುತ್ತಿದ್ದಾರೆ. ಸ್ಥಳೀಯ ಭಾಗದ ಸಮಾಜವಿರೋಧಿ ಚಟುವಟಿಕೆಗಳ ಕುರಿತು ಸುದ್ದಿ ನೀಡುವ ಸಲುವಾಗಿ ಇಲ್ಲಿನ ಗಾಂಜಾ ಮಾರಾಟ ಗುಂಪಿನ ಬಗ್ಗೆ ವರದಿ ಮಾಡಿದ್ದ. ಅದರ ಬಳಿಕ ಆ ಗುಂಪಿನಿಂದ ಬೆದರಿಕೆಗಳು ಬಂದಿದ್ದವು ಎಂದು ಕುಟುಂಬದವರು ಹೇಳಿದ್ದಾರೆ.
ಇದನ್ನೂ ಓದಿ:ಕಳ್ಳ ಮಗ ತಪ್ಪಿಸಿಕೊಂಡ- ಪೊಲೀಸರಿಗೆ ಖಾರದ ಪುಡಿ ಎರಚಿದ ಅಮ್ಮ ಸಿಕ್ಕಿಬಿದ್ಲು
ಆದರೆ ಪೊಲೀಸರು ಹೇಳುವುದೇ ಬೇರೆ. ಅಕ್ರಮ ಚಟುವಟಿಕೆಗಳ ವರದಿ ಮಾಡಿದ್ದ ಮೋಸೆಸ್​, ಈ ವರದಿಯನ್ನು ಬಿತ್ತರ ಮಾಡದೇ ಇರಲು ಆರೋಪಿಗಳಿಗೆ ಹಣದ ಬೇಡಿಕೆ ಒಡ್ಡಿದ್ದರು. ಆದ್ದರಿಂದ ಹತ್ಯೆ ಮಾಡಲಾಗಿದೆ ಎಂದಿದ್ದಾರೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಮೋಸೆಸ್ ಅವರನ್ನು ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಕುಡುಗೋಲಿನಿಂದ ದಾಳಿ ನಡೆಸಿದ್ದಾರೆ. ತಲೆ ಮತ್ತು ಕೈಗೆ ತೀವ್ರವಾಗಿ ಗಾಯಗೊಂಡಿದ್ದ ಮೋಸೆಸ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಅವರು ಮೃತಪಟ್ಟಿದ್ದಾರೆ.
ಕೊಲೆ ಕುರಿತಂತೆ ಮಾಹಿತಿ ನೀಡಿರುವ ಮೋಸೆಸ್​ ತಂದೆ, ‘ಭಾನುವಾರ ರಾತ್ರಿ ಮಗ ಮನೆಯಿಂದ ಹೊರಗೆ ಹೋಗಿದ್ದ. ಅಷ್ಟು ಹೊತ್ತಿಗಾಗಲೇ ಆತನ ಕಿರುಚಾಟ ಕೇಳಿಸಿತು. ಹೊರಬಂದು ನೋಡುವಷ್ಟದಲ್ಲಿ ಕುಡುಗೋಲಿನಿಂದ ಅವನ ಮೇಲೆ ದಾಳಿ ಮಾಡುತ್ತಿದ್ದರು. ನಂತರ ತಮ್ಮನ್ನು ನೋಡಿ ಅಲ್ಲಿಂದ ಪರಾರಿಯಾಗಿದ್ದಾರೆ’ ಎಂದಿದ್ದಾರೆ.
ಚಿಕನ್​ ಫಿಲ್ಲೆಟ್ಸ್​ ಹೆಸರು ಕೇಳುತ್ತಿದ್ದಂತೆಯೇ​ ಕೋಮಾದಿಂದ ಎದ್ದುಕುಳಿತ ಯುವಕ!

ಬಾಯ್​ಫ್ರೆಂಡ್​ ಜತೆ ಮದ್ವೆ ಮಾಡ್ಸಿ ಅಂತ ಬ್ಯಾನರ್​ ಏರಿಕುಳಿತ ಬಾಲಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
