ಮುಂಬೈ:ಇಂಟೀರಿಯರ್​ ಡಿಸೈನರ್​ ಒಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಿಪಬ್ಲಿಕ್​ ಟಿ.ವಿ.ಸಂಪಾದಕ ಅರ್ನಬ್​ ಗೋಸ್ವಾಮಿ ಅವರನ್ನು ಬಂಧಿಸಿ ಸುಪ್ರೀಂಕೋರ್ಟ್​ನಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಛೀಮಾರಿ ಹಾಕಿಸಿಕೊಂಡು ತಿಂಗಳುಗಳೇ ಕಳೆದಿವೆ. ಮಹಾರಾಷ್ಟ್ರ ಸರ್ಕಾರದ ಕೆಲವೊಂದು ನಿಯಮಗಳ ವಿರುದ್ಧ ಸತತ ಪ್ರಸಾರ ಮಾಡುತ್ತಿರುವ ಕಾರಣ, ಅರ್ನಬ್​ ಅವರನ್ನು ಮುಖ್ಯಮಂತ್ರಿಗಳ ಟಾರ್ಗೆಟ್​ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್​ ಕೂಡ ಈ ನಡೆಯನ್ನು ತೀವ್ರವಾಗಿ ಖಂಡಿಸಿತ್ತು.
ಇದರ ಬೆನ್ನಲ್ಲೇ ಇದೀಗ ಇನ್ನೊಂದು ಹೆಜ್ಜೆ ಇಟ್ಟಿರುವ ಸರ್ಕಾರ, ಇದೇ ಟಿ.ವಿಯ ಮುಖ್ಯ ಕಾರ್ಯ ನಿರ್ವಹಣಾಕಾರಿ ವಿಕಾಸ್ ಕಾಂಚನ ದಾನಿ ಅವರನ್ನು ಬಂಧಿಸಿದೆ. ನಕಲಿ ಟಿ.ಆರ್​.ಪಿಗೆ ಸಂಬಂಧಿಸಿದಂತೆ ಇದಾಗಲೇ ಅರ್ನಬ್​ ಗೋಸ್ವಾಮಿ ಅವರ ವಿರುದ್ಧವೂ ಕೇಸ್​ ದಾಖಲಾಗಿದ್ದು, ಅದಿನ್ನೂ ತನಿಖಾ ಹಂತದಲ್ಲಿದ್ದು, ಇದೀಗ ವಿಕಾಸ್​ ಅವರನ್ನು ಬಂಧಿಸಲಾಗಿದೆ.
ಬ್ರಾಡ್‍ಕಾಸ್ಟ್ ಆಡಿಯೆನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಹನ್ಸಾ ರಿಸರ್ಚ್ ಏಜೆನ್ಸಿ ಮುಖಾಂತರ ದೂರು ನೀಡಿದ್ದು, ಕೆಲವು ಚಾನೆಲ್‍ಗಳು ಟಿಆರ್​ಪಿಯನ್ನು ತಿರುಚಿವೆ ಎಂದು ಆರೋಪಿಸಲಾಗಿದೆ. ಕೆಲವು ಕುಟುಂಬಗಳಿಗೆ ಹಣ ನೀಡಿ ನಿರಂತರವಾಗಿ ಟಿವಿ ಆನ್ ಮಾಡಿಸಿ ಟಿಆರ್​​ಪಿಯನ್ನು ತಿರುಚಲಾಗಿದೆ ಎಂಬ ಆರೋಪವಿದೆ. ಬಾರ್ಕ್ ಸಂಸ್ಥೆ ನೀಡಿದ್ದ ದೂರಿನ ಪ್ರಕಾರ ಬಾಕ್ಸ್ ಸಿನಿಮಾ, ಫಕ್ತ್ ಮರಾಠಿ, ಮಹಾಮೂವಿ ಮತ್ತು ರಿಪಬ್ಲಿಕ್ ಟಿವಿಗಳು ಟಿಆರ್​ಪಿ ತಿರುಚುವ ಪ್ರಯತ್ನ ನಡೆಸಿವೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಅರ್ನಬ್​ ಗೋಸ್ವಾಮಿ ಬಂಧನ: ಸರ್ಕಾರಕ್ಕೆ ಸುಪ್ರೀಂ ತರಾಟೆ- ಹೈಕೋರ್ಟ್​ಗೂ ‘ಬುದ್ಧಿಮಾತು’
ಮಹಾರಾಷ್ಟ್ರ ಪೊಲೀಸರು ವಿಕಾಸ್​ ಅವರನ್ನು ಇಂದು ಬೆಳಗ್ಗೆ ಬಂಧಿಸಿದ್ದಾರೆ. ರಿಪಬ್ಲಿಕ್ ಮೀಡಿಯಾ ನೆಟ್‍ವರ್ಕ್‍ನ ಸಿಇಒ ವಿಕಾಸ್ ಅವರನ್ನು ಮುಂಬೈನಲ್ಲಿರುವ ಅವರ ನಿವಾಸದಲ್ಲಿ ಇಂದು ಬೆಳಗ್ಗೆ ಕ್ರೈಮ್ ಇಂಟಲಿಜೆನ್ಸಿ ಘಟಕದ ಪೊಲೀಸರು ಬಂಧಿಸಿದ್ದು, ಕೋರ್ಟ್​ಗೆ ಹಾಜರುಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಬಿಜೆಪಿಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಕಿಡಿ ಕಾರಿರುವ ಬಿಜೆಪಿ ಸಂಸದೆ ಮತ್ತು ವಕೀಲ ಮೀನಾಕ್ಷಿ ಲೇಖಿ ವಿಕಾಸ್​ ಅವರನ್ನು ಬಂಧಿಸಿರುವ ಹಿಂದಿರುವ ಉದ್ದೇಶ ಏನು ಎಂದು ಪ್ರಶ್ನಿಸಿದ್ದಾರೆ. ಟಿಆರ್​ಪಿ ತಿರುಚುವಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕಾಸ್​ ಅವರು ಮುಂಬೈ ಪೊಲೀಸರೊಂದಿಗೆ ಸಹಕರಿಸುತ್ತಿದ್ದಾರೆ. ಹೀಗಿರುವಾಗಿ ಅವರನ್ನು ಬಂಧಿಸುವ ಅಗತ್ಯವೇನು ಎಂದು ಪ್ರಶ್ನಿಸಿದ್ದಾರೆ.
7 ವರ್ಷ ಬಳಸಿಕೊಂಡು ಬೇರೆ ಮದ್ವೆಯಾಗಿದ್ದಾನೆ- ಸತ್ತುಹೋಗೋಣ ಎನಿಸುತ್ತಿದೆ, ಪ್ಲೀಸ್ ಏನಾದ್ರೂ ಪರಿಹಾರ ಹೇಳಿ…

ನಿಗೂಢವಾಗಿ ಮೃತಪಟ್ಟ’ಡರ್ಟಿ ಪಿಕ್ಚರ್’ ನಟಿ ಆರ್ಯಾ ಬ್ಯಾನರ್ಜಿ ಮರಣೋತ್ತರ ಪರೀಕ್ಷೆಯಲ್ಲಿ ಅಸಲಿಯತ್ತು ಬಯಲು…

ಮಚ್ಚೆಯಿಂದಾಗಿ ಮಗ ಅಂಜುತ್ತಿದ್ದ ಎಂದು ಈ ಅಪ್ಪ ಮಾಡಿದನೊಂದು ಉಪಾಯ- ಎಲ್ಲರಿಂದಲೂ ಭೇಷ್​ ಭೇಷ್​…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 12 =
Remember me
