ನವದೆಹಲಿ:ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ನಾಲ್ಕು ಮದುವೆಯಾಗುವ ಅವಕಾಶವಿದೆ. ಆದರೆ ಮದುವೆಯಾಗಿ ಬರುವ ಪತ್ನಿಯರ ಹಕ್ಕಿಗೆ ಸಂಬಂಧಿಸಿದಂತೆ ಗುಜರಾತ್‌ ಹೈಕೋರ್ಟ್‌ ಮಹತ್ವದ ತೀರ್ಪೊಂದನ್ನು ನೀಡಿದೆ. ಅದೇನೆಂದರೆ, ಪತಿಯ ಜತೆ ಸಂಸಾರ ಮಾಡಲು ಅಥವಾ ಆತನ ಜತೆ ವೈವಾಹಿಕ ಹಕ್ಕನ್ನು ಸ್ಥಾಪಿಸಲು ಪತ್ನಿಯಾದಾಕೆ ಒಪ್ಪದೇ ಹೋದರೆ ಆಕೆಯ ಮೇಲೆ ಒತ್ತಡ ಹೇರುವ ಅಧಿಕಾರ ಗಂಡನಿಗೆ ಇಲ್ಲ ಎಂದಿದೆ.
ಮುಸ್ಲಿಂ ಕಾನೂನು ಬಹುಪತ್ನಿತ್ವವನ್ನು ಒಪ್ಪುತ್ತದೆ ನಿಜ. ಆದರೆ ಅದನ್ನು ಕಾನೂನು ಕೂಡ ಪ್ರೋತ್ಸಾಹಿಸುವುದಿಲ್ಲ. ಒಂದು ವೇಳೆ ಹೆಚ್ಚೆಚ್ಚು ಮದುವೆಯಾಗಿದ್ದೇ ಹೌದಾದರೆ, ಯಾವುದೇ ಪತ್ನಿಯನ್ನು ಬಲವಂತ ಮಾಡುವ ಅಧಿಕಾರ ಗಂಡಿಗೆ ಇಲ್ಲ. ಪತ್ನಿಯು ವೈವಾಹಿಕ ಜೀವನವನ್ನು ಇಷ್ಟಪಡದೇ ಹೋದಲ್ಲಿ ಅದು ಅವಳ ಇಚ್ಛೆಯೇ ವಿನಾ, ಹೆಂಡತಿಯನ್ನು ಒತ್ತಾಯಿಸುವ ಯಾವುದೇ ಮೂಲಭೂತ ಹಕ್ಕು ಪತಿಗೆ ಇಲ್ಲ ಎಂದು ಕೋರ್ಟ್‌ ಹೇಳಿದೆ.
ಪತಿಯು ಇನ್ನೊಂದು ಮದುವೆಯಾಗಲಿ, ಬಿಡಲಿ ಆತನ ಪತ್ನಿ ಆತನ ಜತೆ ಜೀವನ ಸಾಗಿಸುವುದನ್ನು ನಿರಾಕರಿಸಬಹುದು ಎಂದಿರುವ ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ ನೇತೃತ್ವದ ಪೀಠ, ಏಕರೂಪ ನಾಗರಿಕ ಸಂಹಿತೆ ಸಂವಿಧಾನದಲ್ಲಿ ಕೇವಲ ಭರವಸೆಯಾಗಿ ಉಳಿಯಬಾರದು ಎಂದಿದೆ.
ಏನಿದು ಪ್ರಕರಣ?ಬನಸ್ಕಾಂತದ ನಿವಾಸಿಗಳಾದ ಜಿನ್ನತ್‌ ಫಾತ್ಮಾ ಹಾಗೂ ನಿಶತ್‌ ಅಲಿಮಾದ್‌ಭಾಯಿ ದಂಪತಿಗೆ ಸಂಬಂಧಿಸಿದ ಅರ್ಜಿ ಇದಾಗಿದೆ. ಈ ದಂಪತಿಯು 2010 ರಲ್ಲಿ ನಿಖಾ ಆಗಿದ್ದು ಒಬ್ಬ ಮಗನೂ ಇದ್ದಾನೆ. ವೃತ್ತಿಯಲ್ಲಿ ನರ್ಸ್ ಆಗಿದ್ದ ಜಿನ್ನತ್‌, ಗಂಡನ ಮನೆಯ ಕಿರುಕುಳ ತಾಳದೇ ಮಗನ ಜತೆ ತವರಿಗೆ ಹೋಗಿದ್ದರು. ಪತ್ನಿಯನ್ನು ವಾಪಸ್‌ ಕರೆತರುವ ಸಂಬಂಧ ಗಂಡ ಕೌಟುಂಬಿಕ ಕೋರ್ಟ್‌ ಮೊರೆ ಹೋಗಿದ್ದ.
ಪತಿ ಮನೆಯವರು ಕಿರುಕುಳ ನೀಡಿದ್ದಾರೆ. ನರ್ಸ್‌ ಆಗಿರುವ ನನ್ನನ್ನು ಮೊದಲು ಆಸ್ಟ್ರೇಲಿಯಾಗೆ ಕಳುಹಿಸಿ ನಂತರ ಗಂಡನನ್ನು ಅಲ್ಲಿಗೆ ಕರೆಯಿಸಿಕೊಳ್ಳುವಂತೆ ಹಿಂಸೆ ನೀಡುತ್ತಿದ್ದಾರೆ. ನನಗೆ ಎಲ್ಲಿಯೂ ಹೋಗಲು ಇಷ್ಟವಿಲ್ಲ. ಗಂಡ ಆಸ್ಟ್ರೇಲಿಯಾದಲ್ಲಿ ಏನೋ ಕೆಲಸ ಮಾಡಬೇಕೆನ್ನುವ ಕಾರಣದಿಂದ ನನ್ನನ್ನು ಬಳಸಿಕೊಳ್ಳುತ್ತಿದ್ದಾರೆ, ನಿರಾಕರಿಸಿದ್ದಕ್ಕೆ ಹಿಂಸೆ ನೀಡುತ್ತಿದ್ದಾರೆ ಎಂದಿದ್ದರು ಜಿನ್ನತ್‌. ಆದರೆ ಕೌಟುಂಬಿಕ ಕೋರ್ಟ್‌, ಆಕೆಯ ವಾದವನ್ನು ಒಪ್ಪದೇ ಹೆಣ್ಣಿಗೆ ಗಂಡಿನ ಮನೆಯೇ ಸರ್ವಸ್ವ ಎನ್ನುವ ರೀತಿಯಲ್ಲಿ ಆದೇಶ ಹೊರಡಿಸಿ, ಗಂಡನ ಮನೆಗೆ ವಾಪಸಾಗುವಂತೆ ಹೇಳಿತ್ತು.
ಇದನ್ನು ಪ್ರಶ್ನಿಸಿ ಪತ್ನಿ ಗುಜರಾತ್​ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ನ್ಯಾಯಮೂರ್ತಿಗಳು, ಈ ಆದೇಶ ಹೊರಡಿಸಿದ್ದಾರೆ. ‘ವಿವಾಹವು ಒಂದು ನಾಗರಿಕ ಒಪ್ಪಂದವಾಗಿದೆ. ವೈವಾಹಿಕ ಹಕ್ಕನ್ನು ಮರುಸ್ಥಾಪಿಸುವುದು ಮೂಲಭೂತ ಹಕ್ಕಿನ ವಿರುದ್ಧವಾಗಿದೆ. ಪತ್ನಿಯ ಮೇಲೆ ಒತ್ತಡ ಹೇರುವ ಅಧಿಕಾರ ಗಂಡಿಗೆ ಇಲ್ಲ’ ಎಂದು ಹೇಳಿ ಕೌಟುಂಬಿಕ ಕೋರ್ಟ್‌ನ ಅರ್ಜಿಯನ್ನು ವಜಾ ಮಾಡಿ, ಪತ್ನಿ ಜಿನ್ನತ್‌ ಪರವಾಗಿ ತೀರ್ಪು ಕೊಟ್ಟಿದ್ದಾರೆ.
ಮೃತ ವಕೀಲನ ಶವ ಪಡೆಯಲು ಪತ್ನಿ, ಲವರ್‌ ಗುದ್ದಾಟ- ಸುಸ್ತಾಗಿ ಹೋದ ಗುಂಡ್ಲುಪೇಟೆ ಪೊಲೀಸರು

ಮಹಿಳೆಗೆ ಹುಟ್ಟಿತು ಪ್ಲಾಸ್ಟಿಕ್‌ ಮಗು: ಓ ಮೈ ಗಾಡ್‌ ಎಂದ ವೈದ್ಯರು- ಈ ಶಿಶು ಜನಿಸಿದ್ದು ಹೇಗೆ?

ಬ್ಯಾಂಕ್‌ನ 4.3 ಕೋಟಿ ರೂ. ಗುಳುಂ ಮಾಡಿದ ಎಸ್‌ಬಿಐ ಮ್ಯಾನೇಜರ್‌: ಏಳು ವರ್ಷ ಶಿಕ್ಷೆ ವಿಧಿಸಿದ ಕೋರ್ಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − two =
Remember me
