ಭೋಪಾಲ್ (ಮಧ್ಯಪ್ರದೇಶ):ವಿದ್ಯುಚ್ಛಕ್ತಿ ಬಿಲ್‌ ಬಾಕಿ ಉಳಿಸಿಕೊಂಡಿರುವವರ ಪಟ್ಟಿಯನ್ನು ನೋಡಿದ ಮಧ್ಯಪ್ರದೇಶದ ವಿದ್ಯುಚ್ಛಕ್ತಿ ಇಲಾಖೆಗೆ ದಂಗಾಗಿದೆ. ಕಾರಣ ಟಾಪ್‌1 ಸ್ಥಾನದಲ್ಲಿ ಇರುವವರು ಕಂದಾಯ ಮತ್ತು ಸಾರಿಗೆ ಸಚಿವ ಗೋವಿಂದ್‌ ಸಿಂಗ್‌ ರಜಪೂತ್‌! ಇವರು 84,388 ರೂಪಾಯಿಗಳ ಪಾವತಿ ಮಾಡಬೇಕಿದೆ.
ಸಚಿವರೇ ಈ ರೀತಿ ಇಲಾಖೆಗೆ ಮೋಸ ಮಾಡಿದರೆ ಹೇಗೆ ಎಂಬ ಬಗ್ಗೆ ಇದೀಗ ಸಾಕಷ್ಟು ಚರ್ಚೆಯಾಗುತ್ತಿದೆ. ಕರೆಂಟ್‌ ಬಿಲ್‌ ಬಾಕಿ ಉಳಿಸಿಕೊಂಡಿರುವವರ ಪಟ್ಟಿಯಲ್ಲಿ ರಜಪೂತ್‌ ಅವರ ಸಹೋದರ ಗುಲಾಬ್‌ ಸಿಂಗ್‌ ಅವರ ಹೆಸರು ಕೂಡ ಟಾಪ್‌ನಲ್ಲಿಯೇ ಇದೆ. 34,667 ರೂ. ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಗುಲಾಬ್‌ ಸಿಂಗ್‌ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಕಲೆಕ್ಟರ್‌ ಬಂಗಲೆ-11,445 ರೂ., ಎಸ್‌ಪಿ ಕಚೇರಿ-23,428 ರೂ., ಎಸ್‌ಎಎಫ್‌ 16 ಬೆಟಾಲಿಯನ್‌ ಕಚೇರಿಯಿಂದ 18,650 ರೂ. ವಿದ್ಯುತ್‌ ಬಿಲ್‌ ಬಾಕಿ ಪಾವತಿ ಮಾಡಬೇಕಿರುವುದಾಗಿ ಹೇಳಿದೆ.
ಬಿಲ್‌ ಪಾವತಿಸುವಂತೆ ಸುಸ್ತಿದಾರರಿಗೆ ಇಲಾಖೆ ಈಗಾಗಲೇ ಎಸ್‌ಎಂಎಸ್‌ ಕಳುಹಿಸಿದೆ. ಬಾಕಿ ಇರುವ ಮೊತ್ತವನ್ನು ಆದಷ್ಟು ಬೇಗ ಪಾವತಿಸುವಂತೆ ಮನವಿ ಮಾಡಿರುವುದಾಗಿ ವಿದ್ಯುಚ್ಛಕ್ತಿ ಇಲಾಖೆಯ ಎಂಜಿನಿಯರ್‌ ಎಸ್‌.ಕೆ.ಸಿನ್ಹಾ ವಿವರಿಸಿದದಾರೆ.
ಸಾಗರನಗರ ವಿಭಾಗದಲ್ಲಿ 91 ಸಾವಿರ ಗ್ರಾಹಕರಿದ್ದು, 67 ಸಾವಿರ ಮಂದಿ ಬಿಲ್‌ ಪಾವತಿಸಿದ್ದಾರೆ. ಉಳಿದವರ ಲಿಸ್ಟ್‌ ತಯಾರಿಸಲಾಗಿದ್ದು, ಅದರಲ್ಲಿ ಸಚಿವರು ಸೇರಿದಂತೆ ಘಟಾನುಘಟಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ಸಿನ್ಹಾ ವಿವರಣೆ ನೀಡಿದ್ದಾರೆ. ಬಿಲ್‌ ಪಾವತಿಸುವಂತೆ ಎಸ್‌ಎಂಎಸ್‌ ಕಳುಹಿಸಲಾಗಿದೆ. ಕರೆ ಮಾಡಿ ಕೂಡ ತಿಳಿಸಲಾಗುವುದು. ಒಂದು ವೇಳೆ ಪಾವತಿಸದಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.
VIDEO: ತಾನು ಬಿಡೋ ‘ವಾಯು’ ಮಾರಿ ವಾರಕ್ಕೆ 38 ಲಕ್ಷ ರೂ. ಗಳಿಸ್ತಾಳೆ! ಮೂಗು ಮುಚ್ಕೋಬೇಡಿ… ಇವಳ ಬಾಯಲ್ಲೇ ಕೇಳಿ…

ಭಾವಿ ಪತ್ನಿ ವೈಯಾರದಿಂದ ಕೊಟ್ಟ ಚಹ ಕುಡಿದ: ಕೊನೆಗೆ ಆಕೆಯ ತಂಗಿಗೆ ತಾಳಿ ಕಟ್ಟಿದ! ಹೀಗೊಂದು ಮದುವೆ…

VIDEO: ಆಗಸದಲ್ಲಿ ಖುಷಿಯಿಂದ ಹಾರುತ್ತಿದ್ದ ಮಹಿಳೆಯರು ಧೊಪ್‌ ಎಂದು ಬಿದ್ದರು- ಭಯಾನಕ ವಿಡಿಯೋ ವೈರಲ್‌

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:two + 8 =
Remember me
