ಮುಂಬೈ:ಗೆಳೆಯ ನಿನಗಾಗಿ ಕಾಯುತ್ತಿರುವೆ, ವಾಪಸ್ ಬಾ… ನೀನು ನನ್ನೊಂದಿಗೆ ಇಲ್ಲ ಎಂದು ಅರೆ ಕ್ಷಣವೂ ಯೋಚಿಸಲಾಗುತ್ತಿಲ್ಲ, ಎಲ್ಲವೂ ನೀನೇ ಆಗಿದ್ದೆ, ಎಲ್ಲಿಗೆ ಹೋದೆ…. ಬೇಗ ಬಾ… ಚಂದ್ರನಲ್ಲಿ ನೀನಿದ್ದಿಯಾ ಎಂದು ಗೊತ್ತು… ಅಲ್ಲಿ ಟೆಲಿಸ್ಕೋಪ್‌ನಿಂದ ನೋಡಿಯೇ ನನ್ನನ್ನು ಕಾಪಾಡುವೆ ಅಲ್ವಾ…?
ಕಳೆದ ವರ್ಷ ಇದೇ ದಿನ ಎಂದರೆ ಜೂನ್‌ 14ರಂದು ನಟ ಸುಶಾಂತ್‌ ಸಿಂಗ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರನ್ನು ನೆನೆದುಕೊಂಡು ಅವರ ಸ್ನೇಹಿತೆ ನಟಿ ರಿಯಾ ಚಕ್ರವರ್ತಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದುಃಖವನ್ನು ತೋಡಿಕೊಂಡಿದ್ದಾರೆ.
‘ನೀನಿಲ್ಲದೇ ವರ್ಷವಾಯಿತು. ಸಮಯ ಕಳೆದಂತೆ ಬದುಕು ಸರಿ ಆಗುತ್ತದೆ, ಎಲ್ಲವೂ ಸರಿಯಾಗಿ ಹೋಗುತ್ತದೆ ಎಂದೇ ಎಲ್ಲರೂ ಎನ್ನುತ್ತಾರೆ. ಆದರೆ ನನಗೆ ಮಾತ್ರ ಸಮಯ ಮತ್ತು ಎಲ್ಲವೂ ನೀನೇ ಆಗಿದ್ದೆ. ಪ್ರತಿಕ್ಷಣವೂ ನಿನಗಾಗಿ ವೇಟ್‌ ಮಾಡುತ್ತಿದ್ದೇನೆ. ನೀನು ಬಂದು ನನ್ನನ್ನು ಪಿಕ್ ಮಾಡುತ್ತೀಯಾ ಅಂತ ನಿರೀಕ್ಷೆಯಲ್ಲಿರುತ್ತೇನೆ. ಪ್ರತಿ ದಿನ ನಿನಗಾಗಿ ಹುಡುಕಾಟ ನಡೆಸಿ, ಕೊನೆಗೆ ಸೋತು ಕುಸಿಯುತ್ತೇನೆ. ನೀನೇ ನನ್ನ ಗಾರ್ಡಿಯನ್‌, ಚಂದ್ರನಲ್ಲಿದ್ದರೂ ನನ್ನನ್ನು ರಕ್ಷಿಸುವೆ ಎಂದು ಗೊತ್ತು ಎಂದು ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.ಸುಶಾಂತ್ ಜತೆಗಿನ ಫೋಟೋ ಶೇರ್ ಮಾಡಿಕೊಂಡು ಈ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಮುಂಬೈನ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಡ್ರಗ್ಸ್ ತಿರುವು ಪಡೆದುಕೊಂಡಿತ್ತು. ನಂತರ ಇದೇ ಪ್ರಕರಣದಲ್ಲಿ ರಿಯಾ ಚಕ್ರವರ್ತಿ, ಶೌವಿಕ್ ಚಕ್ರವರ್ತಿ ಜೈಲಿಗೂ ಹೋಗಿ ಬಂದಿದ್ದಾರೆ.


A post shared by Rhea Chakraborty (@rhea_chakraborty)

ಸಿಂಗಲ್‌ ಇದ್ದು ಎಲ್ಲರಿಗೂ ಲಭ್ಯಳಿದ್ದೇನೆ: ಮೂರನೇ ಮದುವೆ ಮುರಿದು ನಾಲ್ಕನೆಯದ್ದಕ್ಕೆ ಸಿದ್ಧಳಾದ ನಟಿ!

ಹುಡುಗಿ ಫಿಕ್ಸ್‌ ಆದ್ರೂ ಮದ್ವೆಯಾಕೆ ಮಾಡ್ತಿಲ್ಲ? ಟವರ್‌ ಏರಿ ಕುಳಿತ ವಿಜಯನಗರದ ಕುವರ!

ನೋಡಬಾರದ್ದನ್ನು ಅಮ್ಮ ನೋಡಿದಳು- ಅದಕ್ಕಾಗಿ ವಿಚ್ಛೇದನ ಕೊಟ್ಟೆ: ಬಹು ವರ್ಷಗಳ ಸತ್ಯ ಬಿಚ್ಚಿಟ್ಟ ಶಿಲ್ಪಾ ಶೆಟ್ಟಿ ಪತಿ ಕುಂದ್ರಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
