ಮುಂಬೈ:ಕೋವಿಡ್‌ನ ಬಿಕ್ಕಟ್ಟಿನ ಈ ಸಮಯದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ತನ್ನ ಉದ್ಯೋಗಿಗಳಿಗೆ ನೆರವಿನ ಮಹಾಪೂರವನ್ನೇ ಹರಿಸಿದೆ. ಕರೊನಾ ಸೋಂಕಿನಿಂದ ಪ್ರಾಣ ಕಳೆದುಕೊಂಡ ತನ್ನ ನೌಕರರ ಕುಟುಂಬಕ್ಕೆ ಮುಂದಿನ ಐದು ವರ್ಷಗಳವರೆಗೆ ಮಾಸಿಕ ವೇತನವನ್ನು ನೀಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಘೋಷಿಸಿದೆ.
ಸೋಂಕಿನಿಂದ ಮೃತಪಡುವ ನೌಕರರ ಮಕ್ಕಳಿಗೆ ತನ್ನ ಸಂಸ್ಥೆಯ ಭಾರತದ ಯಾವುದೇ ಕಾಲೇಜಿನಲ್ಲಿ ಪದವಿಯವರೆಗೆ ಬೋಧನಾ ಶುಲ್ಕ, ವಸತಿ ಶುಲ್ಕ ಮತ್ತು ಪುಸ್ತಕ ಶುಲ್ಕವನ್ನು ಸಂಪೂರ್ಣವಾಗಿ ಪಾವತಿಸುವುದಾಗಿ ಹೇಳಿದೆ. ಮಾತ್ರವಲ್ಲದೇ ಮಕ್ಕಳು ಪದವಿ ಮುಗಿಸುವವರೆಗೂ ಸೋಂಕಿನಿಂದ ಕಳೆದುಕೊಂಡ ಪತಿ/ಪತ್ನಿ, ಅವರ ಪೋಷಕರು ಮತ್ತು ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಿದರೆ ಅವರ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಹೇಳಿದೆ.
ತನ್ನ ಉದ್ಯೋಗಿ ಅಥವಾ ಅವರ ಕುಟುಂಬಸ್ಥರು ಯಾರೇ ಆಗಲಿ ಕೋವಿಡ್‌ ಸೋಂಕಿಗೆ ಒಳಗಾದರೆ ಅವರು ದೈಹಿಕ ಮತ್ತು ಮಾನಸಿಕವಾಗಿ ಚೇತರಿಸಿಕೊಳ್ಳುವವರೆಗೆ ರಜೆ ತೆಗೆದುಕೊಳರ್ಳಲು ಅವಕಾಶ ಕಲ್ಪಿಸಲಾಗಿದೆ. ಇದರ ಜತೆಗೆ, ಕೋವಿಡ್‌ಗೆ ಬಲಿಯಾದ ಎಲ್ಲಾ ನೌಕರರ ಕುಟುಂಬ ಸದಸ್ಯರಿಗೆ ಕಂಪನಿಯು 10 ಲಕ್ಷ ರೂಪಾಯಿಗಳ ಧನಸಹಾಯ ಮಾಡಲಿದೆ.
ನಿಮ್ಮೊಂದಿಗೆ ನಾವಿದ್ದೇವೆ- ಕೋವಿಡ್‌ ಅನಾಥ ಮಕ್ಕಳ ಜತೆ ಸಂವಾದದಲ್ಲಿ ಸಚಿವೆ ಶಶಿಕಲಾ ಭರವಸೆ

ಆಯುರ್ವೇದ ಕರೊನಾ ಔಷಧಕ್ಕೆ ವಿದೇಶಿಗರ ದೌಡು- ಆನ್‌ಲೈನ್‌ ಮೂಲಕ ದೇಶಾದ್ಯಂತ ಪೂರೈಕೆಗೆ ಮುಂದಾದ ಸರ್ಕಾರ

ಪ್ರಧಾನಿಜೀ… ಪರೀಕ್ಷೆ ಕ್ಯಾನ್ಸಲ್‌ ಆದ್ರೂ ಅಡ್ಡಿಲ್ಲ, ನೇಹಾಳನ್ನು ಸೀರೆಯಲ್ಲಿ ನೋಡೋ ಆಸೆ ಈಡೇರಿಸಿ ಪ್ಲೀಸ್‌. ಪ್ಲೀಸ್‌…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
