ಲಂಡನ್​:ಫುಟ್​ಬಾಲ್​ ಆಟದಿಂದ ವಿಶ್ವಖ್ಯಾತಿ ಗಳಿಸಿರುವ ಕ್ರಿಸ್ಟಿಯಾನೊ ರೊನಾಲ್ಡೊ ಇದೀಗ ಮತ್ತೆ ಪ್ರಸಿದ್ಧರಾಗಿದ್ದಾರೆ. ಇದಕ್ಕೆ ಕಾರಣ, ಅವರು ತಮ್ಮ ಭಾವಿ ಪತ್ನಿಗೆ ನೀಡಿರುವ ಉಂಗುರದಿಂದಾಗಿ.
ಇದಾಗಲೇ ಒಬ್ಬಾಕೆಯ ಜತೆ ಲಿವ್​ ಇನ್​ ಸಂಬಂಧದಲ್ಲಿದ್ದು ಆಕೆಯಿಂದ ದೂರವಾಗಿರುವ ಕ್ರಿಸ್ಟಿಯಾನೊ , ನಾಲ್ಕು ಮಕ್ಕಳ ತಂದೆಯಾಗಿದ್ದಾರೆ. ಇದರಲ್ಲಿ ಒಂದು ಮಗು ಇವರದ್ದಾಗಿದ್ದು, ಉಳಿದ ಮೂರು ಮಕ್ಕಳನ್ನು ಬಾಡಿಗೆ ತಾಯಿಯ (ಸರೋಗಸಿ) ಮೂಲಕ ಪಡೆದುಕೊಂಡಿದ್ದಾರೆ. ಇದೀಗ ತಮ್ಮ ಬಹುಕಾಲದ ಗೆಳತಿ ಜಾರ್ಜಿನಾ ರಾಡ್ರಿಗೀಸ್​ ಜತೆಗೆ ವಿವಾಹವಾಗಲಿದ್ದಾರೆ.
ನಿನ್ನೆ ಇವರ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಈ ಸಂದರ್ಭದಲ್ಲಿ ಅವರು ತಮ್ಮ ಭಾವಿ ಪತ್ನಿಗೆ 615,000 ಪೌಂಡ್​ (ಸುಮಾರು 5.84 ಕೋಟಿ ರೂಪಾಯಿ) ಬೆಲೆ ಬಾಳುವ ವಜ್ರದ ಉಂಗುರ ನೀಡಿದ್ದಾರೆ.
ಇದನ್ನೂ ಓದಿ:₹10 ಕೋಟಿ ದಂಡ ಕಟ್ಟಿದರೆ ಶಶಿಕಲಾ ಜನವರಿಯಲ್ಲಿ ಬಂಧಮುಕ್ತ…
ಈ ಮೂಲಕ ನಿಶ್ಚಿತಾರ್ಥಕ್ಕೆ ಅತ್ಯಂತ ಹೆಚ್ಚು ಖರ್ಚು ಮಾಡಿರುವ ಆಟಗಾರರ ಪೈಕಿ ಇವರು ಟಾಪ್​ ಸ್ಥಾನವನ್ನು ಗಳಿಸಿದ್ದಾರೆ.
ಈ ಕುರಿತು ಬ್ರಿಟಿಷ್ ಟ್ಯಾಬ್ಲಾಯ್ಡ್, ದಿ ಸನ್ ವರದಿ ಮಾಡಿದೆ. ರೊನಾಲ್ಡೊ ಈ ವಜ್ರದ ಉಂಗುರಕ್ಕಾಗಿ 615,000 ಪೌಂಡ್​ ನೀಡಿದ್ದಾರೆ. ಫುಟ್​ಬಾಲ್​ ಆಟಗಾರರಲ್ಲಿ ನಿಶ್ಚಿತಾರ್ಥದ ಉಂಗುರಗಳಿಗಾಗಿ ಅತಿ ಹೆಚ್ಚು ಖರ್ಚು ಮಾಡುವವರ ಪಟ್ಟಿಯಲ್ಲಿ ರೊನಾಲ್ಡೊ ಅಗ್ರಸ್ಥಾನ ಪಡೆದಿದ್ದಾರೆ. ಇಂಗ್ಲೆಂಡಿನ ಜೋರ್ಡಾನ್ ಪಿಕ್ಫೋರ್ಡ್ ತಮ್ಮ ಪತ್ನಿ ಮೆಗಾನ್ ಡೇವಿಸನ್​ಗಾಗಿ 500,000 ಪೌಂಡ್​ (ಅಂದಾಜು ರೂ. 4.74 ಕೋಟಿ) ವೆಚ್ಚದ ಉಂಗುರವನ್ನು ಖರೀದಿಸಿದ್ದರು ಎಂದು ವರದಿಯಾಗಿದೆ.
ಕ್ರಿಸ್ಟಿಯಾನೊ ರೊನಾಲ್ಡೊ ಈ ಹಿಂದೆ ರಷ್ಯಾದ ಇರಿನಾ ಶ್ಯಾಕ್​ ಅವರ ಜತೆ ಸಂಬಂಧದಲ್ಲಿ ಇದ್ದರು.
ಕೊನೆಗೂ ₹1 ದಂಡ ಕಟ್ಟಿದ ವಕೀಲ ಪ್ರಶಾಂತ್​ ಭೂಷಣ್ ಹೇಳಿದ್ದೇನು?

ಪ್ರಧಾನಿಗೆ ದೇಶದ ಬಗ್ಗೆ ಕಾಳಜಿ ಇಲ್ಲ ಎಂದು ಅಮೆರಿಕದಿಂದ ರಾಹುಲ್​ ಗಾಂಧಿ ಟ್ವೀಟ್​!

ಮಾಸ್ಕ್​ ಧರಿಸಲ್ವಾ? ಹಾಗಿದ್ರೆ ಮೃತ ಸೋಂಕಿತರಿಗೆ ಗುಂಡಿ ತೋಡುವುದು ಕಡ್ಡಾಯ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − eighteen =
Remember me
