ದುಬೈ:ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಚಿತ್ರ-ವಿಚಿತ್ರ ಎನಿಸುವಂಥ ನಿಯಮ- ಕಾನೂನುಗಳು ಇವೆ. ಓಬಿರಾಯನ ಕಾಲದ ಕಾನೂನುಗಳು ಇದುವರೆಗೆ ರದ್ದಾಗದೇ ಹಾಗೆಯೇ ಉಳಿದುಕೊಂಡಿದ್ದರೆ, ಇನ್ನು ಕೆಲವು ಕಾನೂನುಗಳನ್ನು ಹೊಸದಾಗಿ ಜಾರಿಗೊಳಿಸಲಾಗುತ್ತದೆ.
ಅಂಥದ್ದೇ ಒಂದು ಕಾನೂನು ಕಿಸ್ಸಿಂಗ್‌ಗೆ ಸಂಬಂಧಿಸಿದ್ದು. ಪ್ರೀತಿ ಯಾವಾಗ, ಎಲ್ಲಿ ಬೇಕಾದರೂ ಹುಟ್ಟುತ್ತೆ. ಸಂಗಾತಿ, ಪ್ರೇಮಿಗಳ ನಡುವೆ ಜಾಗ, ಗೊತ್ತು, ಗುರಿಯಿಲ್ಲದೇ ಯಾವಾಗ ಬೇಕಾದರೂ ಪ್ರೀತಿಯ ಮೂಡ್‌ ಬಂದುಬಿಡುತ್ತೆ. ಹಾಗೆಂದು ನೀವೇನಾದ್ರೂ ರಸ್ತೆ ಮೇಲೆ ಹೋಗುವಾಗ ಕಿಸ್‌ ಕೊಟ್ರೋ ಮುಗೀತು ಗತಿ. ಅಷ್ಟೇ ಏಕೆ ಕೈ ಕೈ ಹಿಡಿದುಕೊಂಡು ಅಸಭ್ಯವಾಗಿ ಹೋದರೂ ಅಷ್ಟೇ ಕಥೆ. ಪೊಲೀಸರು ನಿಮ್ಮಬ್ಬರನ್ನೂ ದರದರ ಎಳೆದುಕೊಂಡು ಕಂಬಿಯ ಹಿಂದೆ ಕೂಡಿ ಹಾಕ್ತಾರೆ, ಕೋರ್ಟ್‌ ಕೂಡ ಶಿಕ್ಷೆ ನೀಡುತ್ತೆ, ಹೊರಗೆ ಬರುವುದು ಅಸಾಧ್ಯವೇ!
ಹಾಗೆಂದು ಸದ್ಯ ಭಾರತೀಯರು ಭಾರತದ ಮಟ್ಟಿಗೆ ಹೆದರಬೇಕಾಗಿಲ್ಲ. ಇಂಥದ್ದೊಂದು ಕಾನೂನು ಇರುವುದು ದುಬೈನಲ್ಲಿ. ಅಪರಾಧಿಗಳು ಬೆಚ್ಚಿಬೀಳುವ ಭಯಾನಕ ಕಾನೂನುಗಳು ದುಬೈನಲ್ಲಿ ಇವೆ. ಕನಸಿನಲ್ಲಿಯೂ ಥರಥರ ನಡುಗುವ ಶಿಕ್ಷೆ ಇಲ್ಲಿ ಅಪರಾಧಿಗಳಿಗೆ ನೀಡಲಾಗುತ್ತದೆ. ಹಾಗೆಂದು ಮುತ್ತು ಕೊಡುವುದು ಏನು ಮಹಾ ಅಪರಾಧವಲ್ಲ. ಆದರೆ ಹಾಗೇನಾದ್ರೂ ಪ್ರೀತಿ ತೋರಿಸುವುದಿದ್ದರೆ ಮನೆಯಲ್ಲಿಯೇ ಇಟ್ಟುಕೊಳ್ಳಿ, ರಸ್ತೆಯ ಮೇಲೆ ಬೇಡ ಎನ್ನುತ್ತದೆ ದುಬೈ ಕಾನೂನು. ಇಲ್ಲಿಯ ಕೆಲವೊಂದು ಪ್ರದೇಶಗಳಲ್ಲಿ ಒಳ್ಳೇ ಮೂಡ್‌ ಬರುವಂಥ ವಾತಾವರಣವನ್ನು ಸೃಷ್ಟಿಮಾಡಲಾಗಿದೆ. ಅಲ್ಲಿಗೆ ಜೋಡಿಗಳು ಸಾಮಾನ್ಯವಾಗಿ ಭೇಟಿ ಕೊಡುತ್ತಾರೆ. ಸದ್ಯ ಕರೊನಾ ಇರುವುದರಿಂದ ವಿದೇಶಕ್ಕೆ ಯಾರೂ ಹೋಗುವುದಿಲ್ಲ. ಹಾಗೊಂದು ವೇಳೆ ಭವಿಷ್ಯದಲ್ಲಿ ಹೋಗುವುದೇ ಆಗಿದ್ದರೆ ಈ ಕಾನೂನಿನ ಅರಿವು ಇದ್ದರೆ ಒಳ್ಳೆಯದು.
ಗಂಡ-ಹೆಂಡತಿ ಇಲ್ಲವೇ ಪ್ರೇಮಿಗಳು ರಸ್ತೆಯ ಮೇಲೆ ಹೋಗುವಾಗ ಅಸಭ್ಯವಾಗಿ ನಡೆದುಕೊಳ್ಳುವುದು, ಕೈ ಕೈ ಹಿಡಿದು ಹೋಗುವುದು, ಮುತ್ತುಕೊಡುವುದು ಎಲ್ಲವೂ ಇಲ್ಲಿ ಅಪರಾಧವೇ. ಇದಕ್ಕೆ ಜೈಲು ಶಿಕ್ಷೆ ಕೂಡ ಇದೆ. ಈ ಕಾನೂನನ್ನು ಇಂದಿಗೂ ಇಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ ಎನ್ನುವುದು ಅಚ್ಚರಿಯ ವಿಷಯ.
VIDEO: ಗಂಡ- ಹೆಂಡಿರ ಜಗಳ ಬಾಲ್ಕನಿ ಗ್ರಿಲ್‌ ಸಹಿತ ದೊಪ್ಪನೆ ಕೆಳಗೆ ಬೀಳುವತನಕ!

ಗಂಡ ಇರಲ್ಲ, ಮಜ ಮಾಡೋಣ ಎಂಬ ಪತ್ನಿಯ ಮೆಸೇಜ್‌ ನೋಡಿ ಗರಬಡಿದಂತಾಗಿದೆ, ಏನು ಮಾಡಲಿ ನಾನು?

ವಧುವಿನ ಕಾಲಿಗೆ ಬಿದ್ದ ವರ: ಹುಬ್ಬೇರಿಸಿದವರ ಕಣ್ಣಲ್ಲಿ ಆನಂದಬಾಷ್ಪ… ನಿನ್ನಂಥ ಪತಿಯೇ ಎಲ್ಲರಿಗೂ ಸಿಗಲಪ್ಪ ಎಂದು ಆಶೀರ್ವಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
