ಗಾಂಧಿನಗರ (ಗುಜರಾತ್‌):ರೋಬೋ ಸೃಷ್ಟಿಸಿ ಎಂತೆಂಥ ಅದ್ಭುತ ಕೆಲಸ ಕಾರ್ಯಗಳನ್ನು ಅದರ ಕೈಯಿಂದ ಮಾಡಿಸಿಕೊಳ್ಳುತ್ತಿರುವುದು ತಿಳಿದ ವಿಷಯವೇ. ಇದೀಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಈ ‘ಸೃಷ್ಟಿಕರ್ತ’ರು ಮನುಷ್ಯನ ಜತೆ ಬ್ಯಾಡ್ಮಿಂಟನ್‌ ಆಡುವ ರೋಬೋ ಕಂಡುಹಿಡಿದಿದ್ದಾರೆ.
ಗುಜರಾತ್​ ಸೈನ್ಸ್​ ಸಿಟಿಯಲ್ಲಿ ಇಂಥದ್ದೊಂದು ರೊಬೋಟ್ ತಯಾರಿಸಲಾಗಿದೆ. ಬ್ಯಾಂಡ್ಮಿಂಟನ್‌ ಆಟಕ್ಕೆ ಸೂಕ್ತ ತರಬೇತಿ, ಆಟವಾಡಲು ಶಕ್ತಿ, ತಾಳ್ಮೆ, ಜಾಣ್ಮೆ ಎಲ್ಲವೂ ಬೇಕು ಎನ್ನುತ್ತಾರೆ. ಆದರೆ ಜೀವವೂ ಇಲ್ಲದೇ, ಸ್ವಂತ ಬುದ್ಧಿಯೂ ಇಲ್ಲದೇ ಕೃತಕ ಬುದ್ಧಿಮತ್ತೆಯ ಮೂಲಕವೂ ಆಡಬಹುದು ಎಂದು ಈ ರೋಬೋ ತೋರಿಸಿಕೊಟ್ಟಿದೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಇದರಲ್ಲಿ ನಾವು, ಒಂದು ಕಡೆ ಆಟಗಾರ ನಿಂತಿರುವುದನ್ನು ಹಾಗೂ ಇನ್ನೊಂದು ಕಡೆ ರೋಬೋ ಇರುವುದನ್ನು ನೋಡಬಹುದು. ಆಟಗಾರ ಕೊಟ್ಟ ಶಾಟ್​ಗೆ ರೊಬೋಟ್​ ಕೂಡ ಸರಿಯಾಗಿ ಶಾಟ್ ನೀಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೆಲವರು ಸ್ನೇಹಿತರಿಲ್ಲದ ವ್ಯಕ್ತಿಗಳಿಗೆ ಈ ರೊಬೋಟ್​ ಒಳ್ಳೆಯ ಸ್ನೇಹಿತನಾಗಿ ಬ್ಯಾಡ್ಮಿಂಟನ್​ಗೆ ಜತೆಯಾಗಲಿದೆ ಎಂದು ಕಾಮೆಂಟ್​ ಮಾಡಿದ್ದಾರೆ.
ಅಂದ ಹಾಗೆ ಈ ರೋಬೋಟ್​ ತನ್ನ ಇಲೆಕ್ಟ್ರಾನಿಕ್​ ಕಣ್ಣುಗಳಿಂದ ಶೆಟಲ್​ಕಾಕ್​ ಅನ್ನು ಗುರುತಿಸುತ್ತದೆ. ಸೆನ್ಸಾರ್​ ಮೂಲಕ ಕ್ರೀಡಾಂಗಣದ ಸುತ್ತ ತಿರುಗುತ್ತದೆ ಎಂದು ಸೈನ್ಸ್​ ಸಿಟಿ ತಿಳಿಸಿದೆ.


A post shared by World Of Data Science💻 (@ai.worldwide)

ವಿವಾಹೇತರ ಸಂಬಂಧದಿಂದ ಮಗು ಆದರೆ ಆಕೆ ಪುರುಷನ ಪತ್ನಿ ಎನಿಸಿಕೊಳ್ತಾಳಾ? ಕಾನೂನು ಏನು ಹೇಳುತ್ತದೆ?

ನಟಿಯರಿಬ್ಬರ ಜಟಾಪಟಿ: ಜಾಲತಾಣದಲ್ಲಿ ಬಿಸಿಬಿಸಿ ವಾತಾವರಣ ಸೃಷ್ಟಿಸಿದ ‘ಶಮಿತಾ ಆಂಟಿ’!

Sign in to your account
Please enter an answer in digits:1 × two =
Remember me
