ನವದೆಹಲಿ:ಜೈಲಿನಲ್ಲಿರುವ ಗಣ್ಯವ್ಯಕ್ತಿಗಳಿಗೆ, ರೌಡಿಗಳಿಗೆ ಇತರ ಸಾಮಾನ್ಯ ಕೈದಿಗಳಿಗಿಂತ ಭಿನ್ನವಾಗಿ ನೋಡುವುದು ಹೊಸ ಮಾತೇನಲ್ಲ. ಕಾನೂನು, ನಿಯಮ ಏನೇ ಇದ್ದರೂ, ಎಷ್ಟೇ ಖಡಕ್‌ ಅಧಿಕಾರಿಗಳು ಬಂದರೂ ಒಳಗಿಂದೊಳಗೆ ಇಂಥ ಐಷಾರಾಮಿ ಜೀವನದ ಸಕಲ ಸೌಕರ್ಯಗಳನ್ನು ಇಂಥವರಿಗೆ ನೀಡುವುದು ನಡೆದೇ ಇದೆ.
ಇದೀಗ ಅಂಥದ್ದೇ ಒಂದು ವಿಡಿಯೋ ದೆಹಲಿಯ ಜೈಲೊಂದರಿಂದ ವೈರಲ್‌ ಆಗಿದೆ. ಕೊಲೆ ಆರೋಪದ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ನೀರಜ್ ಬವಾನಾ ಮತ್ತು ಆತನ ಸಹೋದರರಾದ ರಾಹುಲ್ ಕಲಾ ಮತ್ತು ನವೀನ್ ಬಾಲಿ ಲಾಕಪ್ ಒಳಗೆ ಕುಳಿತು ಮದ್ಯ ಮತ್ತು ತಿಂಡಿಗಳನ್ನು ಸವಿಯುತ್ತ ಮೋಜು ಮಸ್ತಿ ಮಾಡುತ್ತಿರುವ ವೀಡಿಯೊ ಈಗ ವೈರಲ್‌ ಆಗಿದೆ.
ಇವರೀಗ ಸದ್ಯ ಪೊಲೀಸ್‌ ರಿಮಾಂಡ್‌ನಲ್ಲಿದ್ದು, ಇದಕ್ಕೂ ಮೊದಲು ಇವರನ್ನು ಮಾಂಡೋಲಿ ಜೈಲಿನಲ್ಲಿ ಇರಿಸಲಾಗಿತ್ತು. ಇವೆರಡು ಜೈಲುಗಳ ಪೈಕಿ ಯಾವ ಜೈಲಿನಲ್ಲಿ ಇಂಥದ್ದೊಂದು ಸೌಲಭ್ಯಗಳನ್ನು ಇವರಿಗೆ ನೀಡಲಾಗಿದೆ ಎಂಬುದು ಖಚಿತವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ 24 ಸೆಕೆಂಡುಗಳ ವೀಡಿಯೊದಲ್ಲಿ ಎಲ್ಲ ರೌಡಿಗಳು ಮದ್ಯ ಸೇವನೆ ಮಾಡುತ್ತ , ಚಿಪ್ಸ್ ಮತ್ತು ಇತರ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ನೋಡಬಹುದು. ಮಾತ್ರವಲ್ಲದೇ ಅಲ್ಲಿಯೇ ಹಾಸಿಗೆಯ ಮೇಲೆ ಕುಳಿತು, ಫೋನ್‌ನಲ್ಲಿ ಮಾತನಾಡುವುದು ಮತ್ತು ಧೂಮಪಾನ ಮಾಡುವುದನ್ನು ಕಾಣಬಹುದಾಗಿದೆ.
ಆದರೆ ತಮ್ಮ ಜೈಲಿನಲ್ಲಿ ಯಾರಿಗೂ ಇಂಥ ಸೌಲಭ್ಯ ನೀಡಲಾಗುತ್ತಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವಿಡಿಯೋದಲ್ಲಿ ಮಾತ್ರ ಸತ್ಯ ಬಹಿರಂಗಗೊಂಡಿದ್ದು, ಇದಕ್ಕೆ ಅಧಿಕಾರಿಗಳು ಉತ್ತರಿಸಬೇಕಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
A post shared by Neeraj_bawana_ (@neeraj_bawanaa_official_)


ಕೋರ್ಟ್‌ ಬಾಗಿಲಿಗೆ ರಾಜಕುಮಾರಿ, ರಾಜಕುಮಾರ: ಅಣ್ಣನ ವಿರುದ್ಧ ತಂಗಿಯ ಕೇಸ್‌!
15 ಸಾವಿರ ರೂ. ನಾಯಿಗಾಗಿ 66 ಲಕ್ಷ ರೂ. ಟೋಪಿ ಹಾಕಿಸಿಕೊಂಡ ಬೆಂಗಳೂರು ಮಹಿಳೆ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 5 =
Remember me
