ವಿಜಯಪುರ:ಬಹುನಿರೀಕ್ಷಿತ ರಫೇಲ್‌ ಯುದ್ಧವಿಮಾನ ಕೆಲವು ವಿವಾದಗಳ ನಂತರ ಕೊನೆಗೂ ಭಾರತದ ಭೂಮಿಯನ್ನು ಬಂದು ಸೇರಲಿದೆ. ಅದಕ್ಕೆ ಇವತ್ತಿನ ಮುಹೂರ್ತವೂ ನಿಗದಿಯಾಗಿದೆ.
ಇಲ್ಲೊಂದು ಅತ್ಯಂತ ಖುಷಿಯ ವಿಚಾರ ಎಂದರೆ, ಫ್ರಾನ್ಸ್‌ನಿಂದ ಈ ಯುದ್ಧವಿಮಾನವನ್ನು ಕರೆತರುತ್ತಿರುವ ಪೈಲಟ್‌ಗಳ ಪೈಕಿ ಕರ್ನಾಟಕದಲ್ಲಿ ಕಲಿತ ವಿದ್ಯಾರ್ಥಿಯೊಬ್ಬರು ಸೇರಿದ್ದಾರೆ. ಫ್ರಾನ್ಸ್‌ನಿಂದ ಭಾರತಕ್ಕೆ ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದ್ದಾರೆ ಇವರು.
ಇವರೇ 35 ವರ್ಷದ ವಿಂಗ್‌ ಕಮಾಂಡರ್‌ ಅರುಣ್‌ ಕುಮಾರ್‌. ವಿಜಯಪುರದ ಸೈನಿಕ ಶಾಲೆಯ ವಿದ್ಯಾರ್ಥಿ ಇವರು. ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನವನ್ನ ಭಾರತಕ್ಕೆ ಹಾರಿಸಿಕೊಂಡು ಬರುವವರ ಪೈಕಿ ಇವರೂ ಒಬ್ಬರು.
ಇದನ್ನೂ ಓದಿ:ಶತ್ರುಗಳ ಎದೆಯಲ್ಲಿ ಶುರುವಾಯ್ತು ನಡುಕ; ಫ್ರಾನ್ಸ್​ನಿಂದ ಟೇಕ್​ಆಫ್​ ಆಯ್ತು ರಫೇಲ್​…!
ಅರುಣ್‌ ಕುಮಾರ್‌ ಮೂಲತಃ ಉತ್ತರ ಭಾರತದವರು. 1994ರಲ್ಲಿ 6ನೇ ತರಗತಿಯಲ್ಲಿರುವಾಗಲೇ ವಿಜಯಪುರದ ಸೈನಿಕ ಶಾಲೆಗೆ ಪ್ರವೇಶ ಪಡೆದಿದ್ದರು. ಬಾಲ್ಯದಿಂದಲೂ ಅತ್ಯಂತ ಬುದ್ಧಿವಂತ ವಿದ್ಯಾರ್ಥಿ ಎನಿಸಿಕೊಂಡಿದ್ದ ಇವರು. 2002ರಲ್ಲಿ ವಾಯುಸೇನೆಗೆ ನೇಮಕಾತಿಗೊಂಡರು. 15 ವರ್ಷಗಳಿಂದ ವಿಜಯಪುರದ ವಾಯು ಸೇನೆಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ.
ಫ್ರಾನ್ಸ್‌ನಲ್ಲಿ 3 ವರ್ಷದವರೆಗೆ ಸುಖೋಯ್‌ ಯುದ್ಧ ವಿಮಾನದಲ್ಲಿದ್ದುಕೊಂಡು ತರಬೇತಿ ಪಡೆದಿದ್ದಾರೆ. ಆನಂತರ ರಫೇಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈಗ ಭಾರತಕ್ಕೆ 5 ರಫೇಲ್‌ ಯುದ್ಧ ವಿಮಾನ ತರುವಲ್ಲಿ ಅರುಣಕುಮಾರ ಅವರು ಕಮಾಂಡರ್‌ ಆಗಿ ಕೆಲಸ ಮಾಡಿದ್ದಾರೆ.
ಲಡಾಖ್​ ಗಡಿ ರಕ್ಷಣೆಗೆ ನಿಯೋಜನೆಯಾಗಲಿದೆ ರಫೇಲ್​ ಯುದ್ಧ ವಿಮಾನ? ಚೀನಾ ಎದುರಿಸಲು ಭಾರತ ಸನ್ನದ್ಧ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − 4 =
Remember me
