ಮಾಸ್ಕೋ:28 ಮಂದಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ರಷ್ಯಾದ ವಿಮಾನವು ರಷ್ಯಾದ ಪೂರ್ವದಲ್ಲಿ ಸಂಪರ್ಕ ಕಳೆದುಕೊಂಡಿದ್ದು, ಕಾಣಿಯಾಗಿದ್ದು ಆತಂಕಕ್ಕೀಡು ಮಾಡಿದೆ.
ಈ ವಿಮಾನದಲ್ಲಿ 6 ಮಂದಿ ವಿಮಾನಯಾನ ಸಿಬ್ಬಂದಿ ಸಹ ಇದ್ದರು. ಎಎನ್ 26 ವಿಮಾನ ಭೂಸ್ಪರ್ಶ ಮಾಡುವ ಪ್ರಯತ್ನದಲ್ಲಿರುವ ವೇಳೆಯಲ್ಲಿಯೇ ಸಂಪರ್ಕ ಕಳೆದುಕೊಂಡಿರುವುದಾಗಿ ತಿಳಿದುಬಂದಿದೆ. ಪೆಟ್ರೊಪಾವ್ಲೋವ್ಸ್‌ಕ್‌- ಕಮ್ಚಾಟ್ಸ್‌ಕಿಯಿಂದ ಪಲಾನಾಗೆ ಈ ವಿಮಾನ ಹೊರಟಿತ್ತು ಎಂದು ಕಮ್ಚಟ್ಕಾ ಪ್ರಾಂತ್ಯದ ರಷ್ಯಾದ ತುರ್ತು ಸಚಿವಾಲಯದ ಮುಖ್ಯ ನಿರ್ದೇಶನಾಲಯ ಮಾಹಿತಿ ನೀಡಿದೆ.
ಘಟನೆ ನಡೆದ ಸ್ಥಳಕ್ಕೆ ರಕ್ಷಣಾ ಮತ್ತು ಶೋಧಕಾರ್ಯಾಚರಣೆ ತಂಡ ತೆರಳಿದ್ದು, ವಿಮಾನ ಪತ್ತೆಗಾಗಿ ಕಾರ್ಯಚಾರಣೆ ಮುಂದುವರೆದಿದೆ.
ಈ ಹಿಂದೆ ರಷ್ಯಾದಲ್ಲಿ ವಿಮಾನ ಅಪಘಾತಗಳು ಹೆಚ್ಚಿದ್ದವು. ಆನಂತರ ಈಚಿನ ಕೆಲವು ವರ್ಷಗಳಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. 2019ರಲ್ಲಿ ವಿಮಾನದ ಅಪಘಾತ ಸಂಭವಿಸಿತ್ತು. ಅದರಲ್ಲಿ 41 ಮಂದಿ ಮೃತಪಟ್ಟಿದ್ದರು.
ಕರ್ನಾಟಕದ ನೂತನ ರಾಜ್ಯಪಾಲರಾಗಿ ಕೇಂದ್ರ ಸಚಿವ ತಾವರ್‌ಚಂದ್‌ ಗೆಹ್ಲೋಟ್‌

ಐಸಿಯುನಲ್ಲಿ ಐಸ್‌ಕ್ರೀಂ ತಿಂದ ಮಹಿಳೆಯ ಸಾವು! ವೈದ್ಯರ ವಿರುದ್ಧ ದೂರಿದ್ದ ಸಂಬಂಧಿಯ ಆತ್ಮಹತ್ಯೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
