ರಷ್ಯಾ:ರಷ್ಯಾದ ಪ್ರಸಿದ್ಧ ಬ್ಲಾಗರ್‌ ಆಗಿರುವ ಮರಿಯಾ ಬಾಲ್ಮಶೇವ್‌ ಎಂಬ ಮಹಿಳೆ ತನ್ನ ಮಲಮಗನನ್ನೇ ಮದುವೆಯಾಗಿ, ಆತನ ಮಗುವಿನ ತಾಯಿಯಾಗಿ ಸುದ್ದಿಯಲ್ಲಿದ್ದಾಳೆ!
ಇಂಥದ್ದೊಂದು ಸುದ್ದಿ ಮಾಡಿರುವ ಮಹಿಳೆ ಎಂದರೆ 35 ವರ್ಷದ ಮರಿನಾ. ಈಕೆ ಅಲ್ಯಾಕ್ಸೆ ಶವ್ರೀನ್‌ ಎಂಬುವವರ ಜತೆ ಮದುವೆಯಾಗಿದ್ದಳು. ಅಲ್ಯಾಕ್ಸೆ ಅವರಿಗೆ ಮೊದಲ ಪತ್ನಿಯಿಂದ ವ್ಲಾದಿಮಿಯರ್‌ ವೋವಾ ಎಂಬ ಮಗ ಇದ್ದ. ಸಂಬಂಧದಲ್ಲಿ ಈ ವ್ಲಾದಿಮಿಯರ್‌ ಮರಿನಾಗೆ ತಾಯಿಯಾಗಬೇಕು.
ಆದರೆ ಮರಿನಾ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡು ಯುವತಿಯಂತೆ ಕಾಣಿಸಿಕೊಂಡು ತನ್ನ 21 ವರ್ಷದ ಮಲಮಗನನ್ನೇ ವರಿಸಿದ್ದಾಳೆ. ಈ ಕುರಿತು ಹೆಮ್ಮೆಯಿಂದ ಈಕೆ ತನ್ನ ಬ್ಲಾಗರ್‌ನಲ್ಲಿ ಬರೆದುಕೊಂಡಿದ್ದಳು. ನಂತರ ತನ್ನ ಮಲಮಗನಿಂದ ಮೊದಲ ಮಗುವನ್ನು ಪಡೆಯುತ್ತಿರುವುದಾಗಿ ಘೋಷಿಸಿಕೊಂಡಿದ್ದಳು. ಇದೀಗ ಈ ಜೋಡಿಗೆ ಮಗಳು ಜನಿಸಿದ್ದಾಳೆ.
ಅಲೆಕ್ಸೆ ಅವರನ್ನು ಮರಿನಾ ಮದುವೆಯಾದಾಗ ವ್ಲಾದಿಮಿಯರ್‌ 11 ವರ್ಷವಾಗಿತ್ತು. ತನ್ನ ಪತಿಯೊಂದಿಗೆ 10 ವರ್ಷ ಸಂಸಾರ ಮಾಡಿದ ಬಳಿಕ ಆತನಿಂದ ದೂರ ಆಗಿರುವ ಮರಿನಾ, ಇದೀಗ ಮಗನ ಜತೆ ಮದುವೆಯಾಗಿ ಮಗುವನ್ನೂ ಪಡೆದಿದ್ದಾಳೆ.
ತಮ್ಮ ಬ್ಲಾಗ್‌ನಲ್ಲಿ ಮಗಳ ಫೋಟೋ ಸಂಪೂರ್ಣವಾಗಿ ಹಾಕದೇ ಮುಖವನ್ನು ಮರೆಮಾಚಿರುವ ಮರಿನಾ, ಈ ಖುಷಿಯನ್ನು ಹಂಚಿಕೊಂಡಿದ್ದಾಳೆ. ಸದ್ಯ ಈಕೆ 50 ಲಕ್ಷದಷ್ಟು ಫಾಲೋವರ್‌ಗಳನ್ನು ಹೊಂದಿದ್ದಾಳೆ. ವಿಶ್ವದ ಅತ್ಯಂತ ಆಕರ್ಷಕ ನೀಲಿ ಕಣ್ಣುಗಳು’ ಎಂಬ ಶೀರ್ಷಿಕೆ ಕೊಟ್ಟು ಮಗುವಿನ ಫೋಟೋ ಹಾಕಿದ್ದಾಳೆ.
ಈಕೆಯ ಮೊದಲ ಪತಿಗೆ 45 ವರ್ಷ ವಯಸ್ಸಾಗಿದ್ದು, ಅವರು ಐದು ದತ್ತು ಮಕ್ಕಳನ್ನು ನೋಡಿಕೊಳ್ಳುತ್ತಾರೆ.
13 ಸಾವಿರ ಕಿ.ಮೀ ಹಾರಿಬಂದ ‘ಜೋ ಬೈಡೆನ್‌‘ ಪಾರಿವಾಳಕ್ಕೆ ಮರಣದಂಡನೆ ಭೀತಿ!

ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಮಾಡಿದ್ದಕ್ಕೆ ಪ್ರಶಸ್ತಿ ತಿರಸ್ಕರಿಸಿದ ಹಿರಿಯ ಕವಿ

ದೈಹಿಕವಾಗಿ ಆರೋಗ್ಯವಾಗಿದ್ದರೂ ವೀರ್ಯಾಣು ನಿಲ್‌ ಎಂದು ಬಂದಿದೆ- ನನಗೆ ಮಕ್ಕಳಾಗುವುದಿಲ್ಲವೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − ten =
Remember me
