ಮಥುರಾ:ದೇವರ ಮೇಲೆ ಅಪಾರ ನಂಬಿಕೆಯುಳ್ಳ ರಷ್ಯನ ಮಹಿಳೆಯೊಬ್ಬರು ಶ್ರೀಕೃಷ್ಣಪರಮಾತ್ಮನನ್ನು ಕಾಣಲು 6ನೇ ಮಹಡಿಯಿಂದ ಜಿಗಿದಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮಥುರಾದ ವೃಂದಾವನ್ ಕೊತ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಹಿಳೆಯನ್ನು ರಷ್ಯಾದ ತಾನ್ಯಾ ಹೆಮೋಲಾಸೋಕಿಯಾ (40) ಎಂದು ಗುರುತಿಸಲಾಗಿದೆ.
ಅವರು ಕಳೆದ ಕೆಲವು ದಿನಗಳಿಂದ ಮಥುರಾದ ಶ್ರೀಕೃಷ್ಣ ಪರಮಾತ್ಮನ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದರು, ಶ್ರೀಕೃಷ್ಣನನ್ನು ಕಾಣಬೇಕೆಂದು ಬಹಳವಾಗಿ ಹಂಬಲಿಸುತ್ತಿದ್ದರು ಎಂದು ತಾನ್ಯಾ ಸ್ನೇಹಿತೆ ಹೇಳಿದ್ದಾರೆ.
ಶ್ರೀಕೃಷ್ಣನ ಕುರಿತಂತೆ ಕೆಲವೊಂದು ರೀತಿಯಲ್ಲಿ ವಿಚಿತ್ರ ಮಾತನಾಡುತ್ತಿದ್ದಳು. ಶ್ರೀಕೃಷ್ಣನ ಬಳಿ ಹೇಗಾದರೂ ಹೋಗಬೇಕು ಎಂದು ಹೇಳುತ್ತಿದ್ದಳು ಎಂದು ಅವರು ಮಾಹಿತಿ ನೀಡಿದ್ದಾರೆ. ಸದ್ಯ ಇಡೀ ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮಹಿಳೆ ಮಹಡಿಯಿಂದ ಜಿಗಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಪ್ರಯೋಜನ ಆಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.
ಬಿಗಡಾಯಿಸಿದ ಲಾಲೂ ಪ್ರಸಾದ್‌ ಆರೋಗ್ಯ ಸ್ಥಿತಿ: ನಾಯಕನ ಚೇತರಿಕೆಗೆ ಹೋಮ-ಹವನ

ಗಂಡ ಹತ್ತಿರವೂ ಬರಲ್ಲ… ಕಾರಣವನ್ನೂ ಹೇಳಲ್ಲ… ಸತ್ತೇ ಹೋಗೋಣ ಅನ್ನಿಸುತ್ತಿದೆ ಮೇಡಂ…

ಡಿವೋರ್ಸ್‌ ಕೊಟ್ಟಿದ್ದೂ ಅಲ್ಲದೇ, ಗಂಡನಿಗೆ ಕೊಟ್ಟಳು ಸಾವಿರಾರು ಕೋಟಿ ರೂ. ಪರಿಹಾರ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × two =
Remember me
